PLEASE LOGIN TO KANNADANET.COM FOR REGULAR NEWS-UPDATES


ಪ್ರಥಮ ಅಖಿಲ ಕರ್ನಾಟಕ ಬಹುಭಾಷಾ ಕವಿ ಸಮ್ಮೇಳನ
ಮತ್ತು ಸಾಂಸ್ಕೃತಿಕ ಉತ್ಸವ ಯಶಸ್ವಿ

(ಏಣಗಿ ನಟರಾಜ ವೇದಿಕೆ) ಕೊಪ್ಪಳ ಆ. ೯. ವಿಶ್ವ ಎಜ್ಯುಕೇಶನಲ್ ಆಂಡ ವೆಲ್‌ಫೇರ್ ಅಕಾಡೆಮಿ ಮತ್ತು ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆಯಿಂದ ಈಚೆಗೆ ಕೊಪ್ಪಳದಲ್ಲಿ ಪ್ರಪ್ರಥಮ ಬಾರಿಗೆ ಅಖಿಲ ಕರ್ನಾಟಕ ಬಹುಭಾಷಾ ಕವಿ ಸಮ್ಮೇಳನ ಮತ್ತು ಸಾಂಸ್ಕೃತಿಕ ಉತ್ಸವ ಯಶಸ್ವಿಯಾಗಿ ಜುಗಿತು.
ಸಾಹಿತ್ಯ ಭವನದ ಭವ್ಯ ವೇದಿಕೆಯಲ್ಲಿ, ಭರಮಪ್ಪ ಚಿಲಗೋಡ್ರ ಮಂಟಪದಲ್ಲಿ ಸಮ್ಮೇಳನವನ್ನು ಹಿರಿಯ ಸಾಹಿತಿ ಡಾ. ಜಯಪ್ರಕಾಶ ಮಾವಿನಕುಳಿ ಉಡುಪಿಯವರು ಉದ್ಘಾಟಿಸಿ ಮಾತನಾಡಿದರು, ಕೊಪ್ಪಳದಂಥಹ ಸ್ಥಳದಲ್ಲಿ ಇಂಥಹ ದೊಡ್ಡ ಕಲ್ಪನೆ ಹುಟ್ಟಿಕೊಂಡಿರುವದೇ ಆಶ್ಚರ್ಯದ ಸಂಗತಿ ಮತ್ತು ಅಭಿನಂದನಾರ್ಹ ಎಂದ ಅವರು, ಸಮಾಜ ತಿದ್ದುವ ಕೆಲಸ ಮಾಡಿದ ಸಂಸ್ಥೆಯ ಕಾರ್ಯ ಶ್ಲಾಘನೀಯವೆಂದರು.
ಸಮ್ಮೇಳನಾಧ್ಯಕ್ಷತೆವಹಿಸಿಕೊಂಡು ಮಾತನಾಡಿದ ಹಿರಿಯ ಪತ್ರಕರ್ತ, ಚಲನಚಿತ್ರ ನಿರ್ದೇಶಕ ರಮೇಶ ಸುರ್ವೆ, ಕೊಪ್ಪಳ ಹಾಳುಬಿದ್ದಿದೆ, ಮೂಲಸೌಕರ್ಯದಿಂದ ವಂಚಿತವಾಗಿದೆ, ಸಾಹಿತ್ಯ ಭವನ ಹಂದಿಯ ಗೂಡಾಗಿದೆ, ಇಲ್ಲಿಯ ರಾಜಕಾರಣಿಗಳಿಗೆ ಅಭಿವೃದ್ಧಿಯ ಬಗ್ಗೆ ಚಿಂತೆಯು ಇಲ್ಲ ಆಸಕ್ತಿಯು ಇಲ್ಲವೆಂದ ಅವರು, ಸಾಹಿತ್ಯದಲ್ಲಿ ಸಂಸ್ಕೃತಿಯ ಕೆಲಸದಲ್ಲಿ ಬೇದಭಾವ ಮಾಡುವ ಜನರಿಂದ ಸಮಾಜ ಹಾಳಾಗುತ್ತಿದೆ. ಯಾರೂ ಮಾಡದ ಕಾರ್ಯವನ್ನು ಮಾಡಿದರೂ ಸಹ ಶೂದ್ರರಿಗೆ ಬೆಲೆಯಿಲ್ಲ, ಅದರಲ್ಲೂ ಶೂದ್ರರಿಗಿಂತ ಕಡೆಯಾಗಿರುವ ಕನ್ನಡ ಮರಾಠಿಗರು ಬದುಕು ತುಂಬಾ ಅಸಹನೀಯವಾಗಿದೆ ಎಂದರು. ಕಾರ್ಯಕ್ರಮಕ್ಕೆ ಅಸಹಕಾರ ಮಾಡಿದವರ ಸಂಖ್ಯೆಯೇ ಜಾಸ್ತಿ ಇದೆ. ಪ್ರತಿಯೊಬ್ಬ ಮನುಷ್ಯರಲ್ಲೂ ಲೋಪಗಳಿರುತ್ತವೆ, ಆದರೆ ಅದನ್ನೇ ದೊಡ್ಡದಾಗಿ ಮಾಡುವ ಅಗತ್ಯವೂ ಇಲ್ಲ ಎಂದರು.
ವೇದಿಕೆಯಲ್ಲಿ ಡಾ. ಮಹಾಂತೇಶ ಮಲ್ಲನಗೌಡರ, ವಿಠ್ಠಪ್ಪ ಗೋರಂಟ್ಲಿ, ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್. ಎಸ್. ಶಿವಸ್ವಾಮಿ, ಕೊಪ್ಪಳ ಜಿಲ್ಲಾಧ್ಯಕ್ಷ ವೀರಣ್ಣ ನಿಂಗೋಜಿ, ಸಾಹಿತಿ ಶರಣಗೌಡ ಯರದೊಡ್ಡಿ, ರಾಯಚೂರಿನ ಸಾಹಿತಿ ನಾರಾಯಣ ಕಾಂಬ್ಳೆ ಇದ್ದರು. ಕನ್ನಡ ಕವಿಗೋಷ್ಠಿ, ಬಹುಭಾಷಾ ಕವಿಗೋಷ್ಠಿ ಜರುಗಿದವು. ಸರೋವರದಲ್ಲಿ ಜಯಚಂದ್ರ ಕಾದಂಬರಿ, ಕುಣಿ ಕುಣಿದು ಬಾ ನವಿಲೆ ಕವನ ಸಂಕಲನ, ಒಂದೇ ಹನಿ ಪ್ರೀತಿಗಾಗಿ ಇತರ ಕೃತಿಗಳು ಬಿಡುಗಡೆಯಾದವು. ಸಂಜೆಯ ಕಾರ್ಯಕ್ರಮದಲ್ಲಿ ಶಾಸಕ, ಗಡಿ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪೂರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಟಕಕಾರ ಎಸ್. ವಿ. ಪಾಟೀಲ ಗುಂಡೂರ, ಶರಣಬಸಪ್ಪ ದಾನಕೈ ಮುಂತಾದವರು ಉಪಸ್ತಿತರಿದ್ದರು.ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಜಿಲ್ಲೆಯ ವಿವಿಧ ಕ್ಷೇತ್ರದ ಗಣ್ಯರಿಗೆ ಶ್ರೀ ಗವಿಸಿದ್ದೇಶ್ವರ ಕೊಪ್ಪಳ ಜಿಲ್ಲಾ ಯುವ ಪುರಸ್ಕಾರ ಮತ್ತು ಕನ್ನಡಕ್ಕಾಗಿ ಸೇವೆ ಸಲ್ಲಿಸಿದ ಜಿಲ್ಲೆಯ ಕನ್ನಡ ಸೇವಕರಿಗೆ ಕನ್ನಡ ಸೇವಾ ರತ್ನ ಪ್ರಶಸ್ತಿ, ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡು ಸೇವೆ ಸಲ್ಲಿಸಿದ ರಾಜ್ಯದ ವಿವಿಧ ಭಾಗದ ಜನರಿಗೆ ವಿಶ್ವಜ್ಯೋತಿ ರಾಷ್ಟೀಯ ಭಾವೈಕ್ಯತಾ ಪ್ರಶಸ್ತಿ ಮತ್ತು ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಸಮ್ಮೇಳನದ ಪ್ರಧಾನ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ, ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಅಧ್ಯಕ್ಷ ಚಿ. ಸು. ಕೃಷ್ಣಶೆಟ್ಟಿ, ದೆಹಲಿ ಕನ್ನಡಿಗ ಪತ್ರಿಕೆಯ ಸಂಪಾದಕ ದೆಹಲಿಯ ಬಾ. ಮಾ. ಸಾಮಗ, ಕರ್ನಾಟಕ ರಾಜ್ಯ ಕಸಾಪ ಗೌರವ ಕಾರ್ಯದರ್ಶಿ ಸಂಗಮೇಶ ಬಾದವಾಡಗಿ, ಡಾ. ಕೋ.ವೆಂ. ರಾಮಕೃಷ್ಣೇಗೌಡ, ಹಿರಿಯ ಸಾಹಿತಿ ಮುನಿಯಪ್ಪ ಹುಬ್ಬಳ್ಳಿ, ಪತ್ರಕರ್ತ ಸಾಧಿಕ ಅಲಿ, ಸಾಹಿತಿಯ ಬೆಳಗಾವಿಯ ಅಪ್ಪಾಸಾಹೇಬ ಅಲಿಬಾದಿ, ನಗರಸಭೆ ಸದಸ್ಯ ಗವಿಸಿದ್ದಪ್ಪ ಮುಂಡರಗಿ, ಉಪಸ್ಥಿತರಿದ್ದರು. ಉಮೇಶ ಸುರ್ವೆ, ಶಿವಾನಂದ ಹೊದ್ಲೂರು, ಅಂದಪ್ಪ ಮೋರನಾಳ, ರಮೇಶ ಗಬ್ಬೂರ, ಜ್ಯೋತಿ ಎಂ. ಗೊಂಡಬಾಳ ಇತರರು ಕಾರ್ಯಕ್ರಮ ನಡೆಸಿದರು. ಶ್ರೀ ಹನುಂಂತರಾವ ಬಂಡಿ ಮತ್ತು ಶ್ರೀ ವಿಷ್ಣು ಕಕ್ಕಿಲಾಯ ರವರ ಸೇವೆ ಸ್ಮರಿಸಲು ಅವರ ಹೆಸರನ್ನು ಮಹಾದ್ವಾರಗಳನ್ನು ಹಾಕಲಾಗಿತ್ತು.
ಸಮಾರೋಪ ಸಮಾರಂಭ : ಕೊಪ್ಪಳದಲ್ಲಿ ನಡೆಯುವ ಸಮ್ಮೇಳನದಲ್ಲಿ ರಾಜ್ಯದ ಅನೇಕ ಸಾಹಿತಿಗಳು ಪಾಲ್ಗೊಂಡು ಕವನ ವಾಚಿಸಿದರು, ಅನೇಕ ನೃತ್ಯ ಪಟುಗಳು, ಕಲಾವಿದರು ಕಾರ್ಯಕ್ರಮ ನೀಡಿದರು. ಸಮಾರೋಪ ಸಮಾರಂಭದಲ್ಲಿ ಮಾಜಿ ಸಚಿವ ಶಶಿಕಾಂತ ಅಕ್ಕಪ್ಪ ನಾಯಕ, ಬೆಳಗಾವಿ ಜಿಲ್ಲೆ ರಂಭಾಪುರ ಮಠದ ಶ್ರೀ ಶ್ರೀ ಕಲ್ಮೇಶ್ವರ ಮಹಾಸ್ವಾಮಿಗಳು, ನಿರ್ಮಿತಿ ಕೇಂದ್ರ ದಾರವಾಡದ ಯೋಜನಾ ನಿರ್ದೇಶಕ ಸಿ. ವಿ. ಚಂದ್ರಶೇಖರ, ವಿನೂತನ ಶಿಕ್ಷಣ ಸೇವಾ ಸಂಸ್ಥೆಯ ಸಿದ್ದಲಿಂಗಯ್ಯ ಹಿರೇಮಠ, ಚಾಮರಾಜ ನಗರ ಪೌರಾಯುಕ್ತ ಕೃಷ್ಣಮೂರ್ತಿ, ಹಿಡಕಲ್ ಡ್ಯಾಂ ಸಹಾಯಕ ಅಭಿಯಂತರ ಬಾಹುಬಲಿ ನಸಲಾಪುರೆ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಚಿತ್ರದುರ್ಗದ ಎ. ಚಿತ್ತಪ್ಪ, ರಾಜ್ಯ ಯುವ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಎಸ್. ಬಾಲಾಜಿ, ಪತಂಜಲಿ ಯೋಗ ಪೀಠದ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ, ಸಹಜ ಸಮೃದ್ಧಿ ಯೋಗ ಹೊಸಪೇಟೆಯ ಶ್ರೀ ಶಿವಕುಮಾರ ಗುರೂಜಿ, ಶಿವಾನಂದ ಹೊದ್ಲೂರು, ಧರ್ಮಣ್ಣ ಹಟ್ಟಿ, ಅರುಣ ಕುಂಬಾರ, ಮಹಾಂತೇಶ ಕಂಬ್ಳಿ, ಸಣ್ಣರಾಜಪ್ಪ ರಾಂಪೂರ, ಶಶಿಕುಮಾರ ಅರ್ಕಲ್, ಬಸವರಾಜ ದೇಸಾಯಿ, ಭೀಮನಗೌಡ ಮಂಡಲಮರಿ ಇತರರು ಇದ್ದರು.

ಕವಿಗೋಷ್ಠಿಯಲ್ಲಿ ಬಸವರಾಜ ಗರ್ಗಿ ಬೆಳಗಾವಿ, ವಿಜಯಲಕ್ಷ್ಮೀ ಉಳ್ಳಾಗಡ್ಡಿ ಬೆಳಗಾವಿ ಸೋಮು ಕುದರಿಹಾಳ, ಅಪ್ಪಾಸಾಹೇಬ ಅಲಿಬಾವಿ ಬೆಳಗಾವಿ, ಎಂ.ಜಿ.ದೇಶಪಾಂಡೆ ಬಿದರ್ ಕೆ.ಎಂ.ಸಂಶೋಷಕುಮಾರ ಮರಟೂರ ಚಿತ್ತಾಪೂರ, ಡಾ||ಕೆ.ಎಸ್. ರಾವ್ ಬಳ್ಳಾರಿ, ಸಿದ್ರಾಮ ತತ್ರಾಣಿ ಅಮೀನಗಡ, ರುದ್ರಪ್ಪ ಮುದ್ದೆಬಿಹಾಳ ಹುನಗುಂದ, ಸಿದ್ದು ಎಂ.ಸತ್ಯಣ್ಣವರ ಡಂಬಳ ಕೆ.ಮಂಜು ಚಿಂತರಪಲ್ಲಿ ಹಗರಿಬೊಮ್ಮನಹಳ್ಳಿ, ಗಣೇಶ.ಕೆ. ಹೊಸೂರ ಗಿಣಗೇರಿ, ಪ್ರಿಯಾಂಕ ಕೆಂಪಳ್ಳೇರ ಧಾರವಾಡ, ಬಸವರಾಜ ಕೆ. ವಾರಿ ಬಂಡಿಹಾಳ, ಸಾಹೇಬಗೌಡ ತಡಕಲ್ ಗುಲಬುರ್ಗಾ,  ಸಂಜಯ್ ಜಿ. ಪಿನಾಪುರ, ಶಶಿಕುಮಾರ ಎನ್.ಬಡಿಗೇರ ಹುಬ್ಬಳ್ಳಿ,
ಸೊ.ದಾ.ವಿರುಪಾಕ್ಷಗೌಡ ಹೊಸಪೇಟೆ, ಖಾಜಾವಲಿ ಈಚನಾಳ ಲಿಂಗಸೂರ, ಚೈತ್ರ ಅ. ವಿಶ್ವಬ್ರಾಹ್ಮಣ ಗಜೇಂದ್ರಗಡ, ಬಸವರಾಜ ಕ. ಮ್ಯಾಗೇರಿ ಮದ್ಲೂರ,ವಿರೇಶ ಎಸ್. ಕುಬಸದ ಅಣ್ಣಿಗೇರಿ, ಶಿವಾನಂದ ಬಿ.ನಾಗೂರ ಧಾರವಾಡ  ಟಿ.ಶಕ್ಷಾವಲಿ ರುವುಲ್‌ಸಾಬ ಹುಬ್ಬಳ್ಳಿ, ರಾಜಶ್ರೀ ಬಿ. ವಡ್ಲಿ ಬೆಳಗಾವಿ, ಫಕ್ರುಸಾಬ್ ಆರ್. ಬವನವರ್ ಬೆಳಗಾವಿ, ಶೃತಿ ದಿ.ವರ್ಣೆಕರ್ ಗಂಗಾವತಿ,ಶ್ರೀಮತಿ ರಶ್ಮಿ ಸುರೇಶ ಗದಗ, ಮಹಾಂತೇಶ ರಾ. ಬೆರಗಣ್ಣವರ ಪರಸಾಪೂರ ಪ್ರಭಾಕರ ಕಾ.ವಿಶ್ವಕರ್ಮ ಮುದಗಲ್, ಜಗದೀಶ ಬೆನ್ನೂರ ಇರಕಲ್‌ಗಡ, ಭೀಮಾಜಿರಾವ್ ಜಗತಾಪ್ ದೇವದುರ್ಗಾ, ಡಾ|| ಕೆ.ಸತ್ಯನಾರಾಯಣರಾವ್ ಬಳ್ಳಾರಿ,ಶರಣಗೌಡ ಯರದೊಡ್ಡಿ ಮಂಗಳೂರು, ಸುರೇಶ ಆ. ಕಂಬಳ್ಳಿ ಗಬ್ಬೂರ,ಶ್ರೀನಿವಾಸ ಚಿತ್ರಗಾರ ಕೊಪ್ಪಳ, ಶ್ರೀನಿವಾಸ ಬಡಿಗೇರ ಕೊಪ್ಪಳ, ಶರಣಬಸವ ದಾನಕೈ ಯಲಬುರ್ಗಾ, ಎಂ.ಪರಶುರಾಮಪ್ರಿಯ ಗಂಗಾವತಿ, ಶರಣಪ್ಪ ಕಳ್ಳಿ ಗಂಗಾವತಿ,
ಮಹಾದೇವಪ್ಪ ಗದಗಿನ ಹರಪನಹಳ್ಳಿ, ಹನುಮಂತರಾವ್ ಗಂಟೆಕರ್ ಗುಲಬುರ್ಗಾ,ಸರೋಜಾ ಬಾಕಳೆ, ರುದ್ರಪ್ಪ ಬಂಡಾರಿ ಕೂಕನೂರ, ಭೀಮನಗೌಡ ಪೊ ಪಾಟೀಲ ಮಂಡಲಮರಿ, ಶಿವನಗೌಡ ಪಾಟೀಲ ಹಲಗೇರಿ, ಗುರುರಾಜ ತೆಗ್ಗಿಹಾಳ ಬಳ್ಳಾರಿ,

ಸಮ್ಮೇಳನದಲ್ಲಿ ಶಾರದಾ ನೃತ್ಯ ಕಲಾನಿಕೇತನ ಕಾರಟಗಿ, ರಿಧಂ ಡ್ಯಾನ್ಸ್ ಅಕಾಡೆಮಿ ಕೊಪ್ಪಳ, ಅಭಿನವ ಡ್ಯಾನ್ಸ್ ಅಕಾಡೆಮಿ ಗಿಣಗೇರಿ, ಅನಿತಾ ಎನ್. ಬಣ್ಣದಬಾವಿ ಕೂಕನೂರ,ಹೊನ್ನೇಶ್ವರಿ ಬಿ.ರಾವಳ ಬೈಲಹೊಂಗಲ, ಯುವರಾಜ ಸಿ. ಭಜಂತ್ರಿ ಚನ್ನಮ್ಮನಕಿತ್ತೂರ ದೊಡ್ಡಪ್ಪ ಗಂಗಪ್ಪ ಮಾದರ ಚನ್ನಮ್ಮನಕಿತ್ತೂರ, ಪ್ರಕಾಶ ಗೊಂಡಬಾಳ, ಭವ್ಯಭಾರತ ಡ್ಯಾನ್ಸ್ ಅಕಾಡೆಮಿ ಬೋಚನಹಳ್ಳಿ,ಪವಿತ್ರಾ ಬಿ. ಈ., ಅಮೃತಾ ಎನ್.ಪುಣಿಕರ್, ಶ್ರೇಯಸ್ ಆರ್. ಜೋಶಿ ರಾಯಚೂರ ಸಾಂಸ್ಕೃತಿಕ ಕಾರ್ಯಕ್ರಮ ನೀಡಿ ಜನಮನ ರಂಜಿಸಿದರು.

Advertisement

0 comments:

Post a Comment

 
Top