PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ, ಯಾವಪ್ರದೇಶದಲ್ಲಿ ಭಷ್ಟಾಚಾರ ತಾಣವಾಡುತ್ತದೆಯೋ ಅಲ್ಲಿ ಜನರು  ಬರಗಾಲ ಎದುರಿಸಬೇಕಾಗುತ್ತದೆ ಎಲ್ಲಿ ದೇವನ ಭಯ ಭಕ್ತಿ ಕಡಿಮೆ ಯಾಗುತ್ತದೆಯೋ ಅಲ್ಲಿ ಬರಗಾಲ ಉದ್ಭವವಾಗುತ್ತದೆ ಎಂದು ಇರಕಲ್‌ನ ಅರಬ್ಭಿ ಶಿಕ್ಷಕರಾದ ಲಾಲಹುಸೇನ್ ಕಂದಗಲ್ ಅಭಿಪ್ರಾಯ ಪಟ್ಟರು,
ಅವರು ಮಂಗಳವಾರ ಸಂಜೆ ಇಲ್ಲಿನ ಫಿರದೋಸ್ ನಗರದಲ್ಲಿರುವ ಶತಾಬ್ದಿ ಭವನದಲ್ಲಿ ಜಮಾಅತೆ ಇಸ್ಲಾಮಿಹಿಂದ್ ಕೊಪ್ಪಳ ವತಿಯಿಂದ ಏರ್ಪಡಿಸಿದ ಇಫ್ತಾರ್ ಸೌಹಾರ್ಧ ಕೊಟ ಸಮಾರಂಭರದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು,
ಪ್ರವಾದಿ ಮಹ್ಮದ್ ಪೈಗಂಬರ್ (ಸ) ರವರು ೧೪೫೦ ವರ್ಷಗಳ ಹಿಂದೆಯೇ ಬರಗಾಲದ ಬಗ್ಗೆ ಹೇಳಿದ್ದು ಪವಿತ್ರ ಕುರ್‌ಆನ್‌ನಲ್ಲಿ ಬಂದಿದೆ ಹದೀಸ್‌ನಲ್ಲಿ ಬರಗಾಲದ ಬಗ್ಗೆ ಪ್ರವಾದಿಗಳು ವಿವರಿಸಿದ್ದಾರೆ ಬರಕ್ಕೆ ಪ್ರಮುಖ ಕಾರಣ ಭ್ರಷ್ಟಾಚಾರವೆ ಆಗಿದೆ ಎಂದು ತಿಳಿಸಿದ್ದಾರೆ,
ಇಂದಿನ ಸಂಧರ್ಭದಲ್ಲಿ ದೇವರನ್ನು ನಾವುಗಳು ಕೇವಲ ಮಂದಿರ ಮಸಿದಿ ಚರ್ಚೆಗಳಿಗೆ ಸೀಮಿತ ಮಾಡಿ ದೇವರನ್ನು ಕೊಡಿಹಾಕಿದ್ದೇವೆ ಆ ದೇವನನ್ನು ಪಾರ್ಲಿಮೇಂಟ್ ಮತ್ತು ವಿದಾನ ಸೌಧದಲ್ಲಿ ತರಲು ನಾವು ಸಿದ್ದರಿಲ್ಲ ತಂದರೆ ನಿರ್ಭಯದಿಂದ ಭ್ರಷ್ಟಾಚಾರ ನೆಡೆಸಲು ಸಾಧ್ಯವಾಗುವುದಿಲ್ಲ ಎಂದು ನಾವು ದೇವನನ್ನು ಮಂದಿರ ಮಸೀದಿಗಳಲ್ಲಿ ಕೊಡಿ ಹಾಕಿದ್ದೆವೆ ಎಂದುರು,
ಪವಿತ್ರ ರಂಜಾನ್ ಮಾಸಚಾರಣೆ ಕೇವಲ ಉಪವಾಸ ಮಾಡುವುದಷ್ಟೆ ಅಲ್ಲ ರೋಜಾದಿಂದ ಮನುಷ್ಯನಲ್ಲಿ ಸಮಯ ಪರಿಪಾಲನೆ ದೇವಭಯ ದೇವಭಕ್ತಿ ಬರಬೇಕು, ಹಸೀವು ಎಂದರೇನು ಎಂಬುದರಬಗ್ಗೆ ಅರಿವು ಮೂಡಿಬರಬೇಕು ಅಂದಾಗ ಮಾತ್ರ ರಂಜಾನ್ ಉದ್ದೇಶ ಈಡೆರುವಂತಾಗುತ್ತದೆ ಎಲ್ಲಾ ಬಾಷೆಗಳು ನಮ್ಮ ಬಾಷೆ ಎಲ್ಲಾ ಬಣ್ಣಗಳು ನಮ್ಮ ಬಣ್ಣ ನಾವು ಎಲ್ಲರೋ ಒಂದೆ ತಂದೆ ತಾಯಿಯ ಮಕ್ಕಳಾಗಿದ್ದೆವೆ ಭಾಷೆ ಜಾತಿಗಳ ನಡುವೆ ಭಿನ್ನಾಭಿಪ್ರಾಯ ಬೇಡ ಸೃಷ್ಠಿಕರ್ತನ ಆರಾಧನೆ ಪ್ರತಿಯೊಬ್ಬನ ಜವಾಬ್ದಾರಿಯಾಗಿದೆ ಇಸ್ಲಾಂ ಧರ್ಮ ಅದನ್ನೆ ಪ್ರತಿಪಾಧಿಸುತ್ತದೆ ಪರಸ್ಪರ ಸೌಹಾರ್ಧತೆ ಯುತವಾಗಿ ಬಾಳುವುದರ ಜೊತೆಗೆ ಭಾವೈಕೆತ್ಯೆಗೆ ಪಾತ್ರರಾಗಬೇಕೆಂದು ಇರಕಲ್‌ನ ಅರಬ್ಭಿ ಶಿಕ್ಷಕರಾದ ಲಾಲಹುಸೇನ್ ಕಂದಗಲ್ ಅಭಿಪ್ರಾಯ ಪಟ್ಟರು
ಮುಖ್ಯ ಅತಿಥಿಯಾಗಿ ಜಿ ಪಂ, ಸದಸ್ಯೆ ಕೆ. ರಾಘವೇಂದ್ರ ಹಿಟ್ನಾಳ ಸಾಹಿತಿ ಡಾ|| ಮಾಹಾಂತೇಶ್ ಮಲ್ಲನಗೌಡರ ಪ್ರೋ.ಅಲ್ಲಮ್ಮ ಪ್ರಭು ಬೆಟ್ಟದೂರು ಪ್ರಾಚಾರ್ಯಾ ಎಸ್, ಬಿ ರಾಜೂರುರವರು ಅಥಿತಿ ಭಾಷಣ ಮಾಡಿ ಪವಿತ್ರ ರಂಜಾನ್ ಮಾಸಾಚಾರಣೆ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು ನಗರ ಸಭೆ ಉಪಅಧ್ಯಕ್ಷ ಅಮಜದಪಾಟೇಲ್ ಜಮಾಅತೆ ಇಸ್ಲಾಮಿ ಹಿಂದ್ ನಾ ಸ್ಥಾನಿಯ ಅಧ್ಯಕ್ಷ ಅಬ್ದುಲ್ ಶುಕೂರು ಮತ್ತಿರರು ಉಪಸ್ಥಿತರಿದ್ದರು ಆರಂಭದಲ್ಲಿ ಫಹೀಮುದ್ದೀನ್ ರವರು ಕುರ್‌ಆನ್ ಪಠಣ ಮಾಡಿದರು ಆದೀಲ್ ಪಟೇಲ್ ನಿರುಪಣಿಮಾಡಿ ಕೊನೆಯಲ್ಲಿ ವಂದಿಸಿದರು ಇದೇ ಸಂದಂಭದಲ್ಲಿ ಅಥಿತಿಗಳಿಗೆ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಕುರ್‌ಆನ್ ವಿತರಣೆ ಮಾಡಿದರು ನೂರಾರು ಸಂಖ್ಯೆಯಲ್ಲಿ ಹಿಂದು ಮುಸ್ಲಿಂ ಭಾಂದವರು ಇಫ್ತಾರ್ ಸೌಹಾರ್ದ ಕೂಟದಲ್ಲಿ ಪಾಲ್ಗೋಡಿದ್ದರು,

Advertisement

0 comments:

Post a Comment

 
Top