PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ : ಗಂಗಾವತಿ ತಾಲೂಕಿನ ವೆಂಕಟಗಿರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚಿಗೆ ದೇವರಾಜ್ ಅರಸ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ ಕೊಪ್ಪಳವತಿಯಿಂದ ದೇವರಾಜ್ ಅರಸ್ ಜನ್ಮದಿನಾಚರಣೆ ಹಾಗೂ ಆರ್‌ಎಸ್‌ಟಿ ಕೇಂದ್ರ ಉದ್ಘಾಟನೆಯನ್ನು ಹಮ್ಮಿಕೊಳ್ಳಲಾಗಿತ್ತು.  
 ಮಕ್ಕಳಿಗೆ ಪುಸ್ತಕ ವಿತರಿಸುವ ಮೂಲಕ ಕಾರ್‍ಯಕ್ರಮದ ಉದ್ಘಾಟನೆಯನ್ನು ವೆಂಕಟಗಿರಿ ಗ್ರಾ.ಪಂ.ಅಧ್ಯಕ್ಷರಾದ ಹುಸೇನಪ್ಪ ಕನಕಗಿರಿ ನೆರವೇರಿಸಿದರು. ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ.ಸದಸ್ಯರಾದ ಪೀರಸಾಬ ಬಂಡ್ರಾಳ ವಹಿಸಿಕೊಂಡಿದ್ದರು. ಅತಿಥಿಗಳಾಗಿ ಸಿಆರ್‌ಪಿ ಕೆ.ಪರಶುರಾಮ,ಶಾಲೆಯ ಮುಖ್ಯ ಗುರುಗಳಾದ ವೆಂಕಟಲಕ್ಷ್ಮೀ ಆಗಮಿಸಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಕಾರ್‍ಯದರ್ಶಿ ರಾಜಾಬಕ್ಷಿ ಎಚ್.ವಿ. ಮಾತನಾಡಿ ದೇವರಾಜ್ ಅರಸ್‌ರು ರಾಜ್ಯಕಂಡ ಅತ್ಯುತ್ತಮ ಆಡಳಿತಗಾರ. ತಮ್ಮ ಹಲವಾರು ಜನಪರ ಯೋಜನೆಗಳಿಂದ ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಬಡವರ ಹಾಗೂ ಹಿಂದುಳಿದ ವರ್ಗದವರಿಗಾಗಿ ಶ್ರಮಿಸಿದ ಧೀಮಂತ ನಾಯಕ ದೇವರಾಜ್ ಅರಸ್‌ರ ಆದರ್ಶಗಳನ್ನು ಪಾಲಿಸುವಂತಾಗಬೇಕು  ಇಂದಿನ ದಿನಮಾನಗಳಲ್ಲಿ ಅಂತಹ ರಾಜಕಾರಣಿಗಳ,ಮುಖ್ಯಮಂತ್ರಿಯ ಅವಶ್ಯಕತೆ ಇದೆ ಎಂದು ಹೇಳಿದರು.
ಕಾರ್‍ಯಕ್ರಮದಲ್ಲಿ ತಿರುಪತೆಪ್ಪ ಕುರಿ, ರಂಗಪ್ಪ ಉಡುಮಕಲ್ ಸೇರಿದಂತೆ ಗ್ರಾಮದ ಹಿರಿಯರು, ಶಾಲಾ ಮಕ್ಕಳು ಭಾಗವಹಿಸಿದ್ದರು. ಜನ್ಮದಿನಾಚರೆ ನಿಮಿತ್ಯ ಮಕ್ಕಳಿಗೆ ಸಿಹಿ ವಿತರಿಸಲಾಯಿತು. ಸ್ವಾಗತವನ್ನು ಪ್ರಭು ಗಾಳಿ,ನಿರೂಪಣೆಯನ್ನು  ಸ್ವಯಂ ಸೇವಕ ನಿಂಗಪ್ಪ , ವಂದನಾರ್ಪಣೆ ದಾದಾವಲಿ ಮಾಡಿದರು. 

Advertisement

0 comments:

Post a Comment

 
Top