PLEASE LOGIN TO KANNADANET.COM FOR REGULAR NEWS-UPDATES


ಹೈದರಾಬಾದ್, ಆ. 20: ಪಾಕಿಸ್ತಾನದ ಸಿಂದ್ ಪ್ರಾಂತ್ಯದಲ್ಲಿನ ಹೈದರಾಬಾದ್‌ನಲ್ಲಿ ಪಾಕ್ ಪ್ರಜೆಗಳು ತಮ್ಮ ದೇಶದ ಸ್ವಾತಂತ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದ ಪೋಟೋವೊಂದನ್ನು ಕಿಡಿಗೇಡಿಗಳು ಇ-ಮೇಲ್‌ನಲ್ಲಿ ಹರಿದಾಡಲು ಬಿಟ್ಟು ಆಂಧ್ರ ಪ್ರದೇಶದ ಹೈದರಾಬಾದ್‌ನಲ್ಲಿನ ಮುಸ್ಲಿಮರು ಪಾಕಿಸ್ತಾನದ ಧ್ವಜಾರೋಹಣ ನಡೆಸಿದ್ದಾರೆ ಎಂದು ಸುಳ್ಳು ಸುದ್ದಿ ಹರಡಿದ್ದರಿಂದ ವಿಶ್ವ ಹಿಂದೂ ಪರಿಷತ್ ಪ್ರತಿಭಟನೆ ನಡೆಸಲು ಮುಂದಾದ ಘಟನೆ ನಡೆದಿದೆ.
ವಾಸ್ತವವನ್ನು ತಿಳಿಯದೆ ವಿಶ್ವ ಹಿಂದೂ ಪರಿಷತ್‌ನ ಕೆಲ ಕಾರ್ಯಕರ್ತರು ಸರಕಾರೇತರ ಸಂಸ್ಥೆಯೊಂದು ಆಯೋಜಿಸಿದ್ದ ಇಂಡೋ-ಪಾಕ್ ಸ್ನೇಹತ್ವ ಕಾರ್ಯಕ್ರಮದಲ್ಲಿ ಪಾಕ್ ಧ್ವಜಾರೋಹಣವಾಗಲಿದೆ ಎಂದು ಸಂಶಯ ವ್ಯಕ್ತಪಡಿಸಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿದರು. ಆದರೆ ಆ ಕಾರ್ಯಕ್ರಮದಲ್ಲಿ ಯಾವುದೇ ಧ್ವಜಾರೋಹಣವಾಗಲಿಲ್ಲ.
ಅಸ್ಸಾಂ ಹಿಂಸಾಚಾರದ ನಂತರ ಈಶಾನ್ಯ ರಾಜ್ಯದ ಜನತೆಯ ಮೇಲೆ ದಾಳಿ ನಡೆವ ಸಾಧ್ಯತೆಗಳ ವದಂತಿಗಳು ಮತ್ತು ಕೆಲ ಕಪೋಲಕಲ್ಪಿತ ಚಿತ್ರಗಳು ಪಾಕಿಸ್ತಾನದಲ್ಲಿ ಅಪ್‌ಲೋಡ್ ಆಗಿದೆ ಎಂದು ಕೇಂದ್ರದ ಗೃಹ ಕಾರ್ಯದರ್ಶಿ ಆರೋಪಿಸಿದ ನಂತರ ಹೈದರಾಬಾದ್‌ನಲ್ಲಿ ಭಾರತೀಯ ಮುಸ್ಲಿಂ ಯುವಕರು ಪಾಕಿಸ್ತಾನದ ಸ್ವ್ವಾತಂತ್ರ ದಿನಾಚರಣೆಯನ್ನು ಆಚರಿಸಿದರು ಎಂಬ ಸುಳ್ಳು ಚಿತ್ರ ಇ-ಮೇಲ್‌ನಲ್ಲಿ ಹರಿದಾಡಿದ್ದನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ತಡೆಯಲು ಯಾಕೆ ಯತ್ನಿಸಲಿಲ್ಲ ಎಂದು ಹೈದರಾಬಾದ್‌ನ ಕಾಂಗ್ರೆಸ್ ಸಮಿತಿ ಅಚ್ಚರಿ ವ್ಯಕ್ತಪಡಿಸಿದೆ.
ಈ ಚಿತ್ರವನ್ನು ಇ-ಮೇಲ್‌ನಲ್ಲಿ ಸ್ವೀಕರಿಸಿದ ಭಾರತೀಯ ಸೇನೆಯ ನಿವೃತ್ತ ಅಧಿಕಾರಿಯೊಬ್ಬರು ಅದನ್ನು ಪ್ರಧಾನ ಮಂತ್ರಿಗಳ ಕಾರ್ಯಾಲಯಕ್ಕೆ ರವಾನಿಸಿ ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.
ಇಷ್ಟೆಲ್ಲಾ ಆದರೂ ಆಂಧ್ರ ಪ್ರದೇಶದ ಪೊಲೀಸರಿಗೆ ಮಾತ್ರ ಈ ಇ-ಮೇಲ್‌ಗಳ ಕುರಿತು ಯಾವುದೇ ಮಾಹಿತಿ ಇಲ್ಲ, ಸೈಬರ್ ಕ್ರೈಂ ವಿಭಾಗದ ಪೊಲೀಸರಿಗೂ ಈ ಕುರಿತು ಮಾಹಿತಿ ಇಲ್ಲ. ನಮಗೆ ಈ ಕುರಿತು ಯಾವುದೇ ಮಾಹಿತಿಗಳು ದೊರೆತಿಲ್ಲ ಎಂದು ಹೈದರಾಬಾದ್ ನಗರದ ಕೇಂದ್ರ ವಿಭಾಗದ ಡಿಸಿಪಿ ತರುಣ್ ಜೋಶಿ ನಿರಾಯಾಸವಾಗಿ ಹೇಳುತ್ತಾರೆ.
ಕಾಂಗ್ರೆಸ್ ನಿಯಂತ್ರಣದಲ್ಲಿರುವ ಆಂಧ್ರ ಪ್ರದೇಶದಲ್ಲಿ ಪಾಕಿಸ್ತಾನದ 65ನೆ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲು ಸರಕಾರ ಅನುಮತಿ ನೀಡುತ್ತದೆ. ಜಗತ್ತಿನ ಯಾವುದೇ ದೇಶ ಕೂಡಾ ಮತ್ತೊಂದು ದೇಶದ ಸ್ವಾತಂತ್ರ ದಿನಾಚರಣೆ ಆಚರಿಸುವುದಕ್ಕೆ ಅನುಮತಿ ನೀಡುವುದಿಲ್ಲ. ಅದರೆ ನಮ್ಮ ದೇಶದಲ್ಲಿ ಮಾತ್ರ ಅನುಮತಿ ನೀಡುವ ಮೂಲಕ ಭಾರತೀಯರನ್ನು ಅವಮಾನಿಸಲಾಗಿದೆ.
ಭಾರತವನ್ನು ಕಾಂಗ್ರೆಸ್ ಮತ್ತು ಅವರ ಚಮಚಾಗಳು ಆಳುತ್ತಿರುವುದರಿಂದ ಹೀಗಾಗಿದ್ದು, ನೀವು ಭಾರತದ ಸುರಕ್ಷತೆಯ ಒಲವುಳ್ಳವರಾಗಿದ್ದರೆ ಇದನ್ನು ವ್ಯಾಪಕವಾಗಿ ಪಸರಿಸಿ ಎಂದು ಇ-ಮೇಲ್‌ನಲ್ಲಿ ತಿಳಿಸಲಾಗಿದೆ. - vb

Advertisement

0 comments:

Post a Comment

 
Top