ಕೊಪ್ಪಳ. ಮೇ. ೧೪, ವಿಶ್ವ ಎಜ್ಯುಕೇಶನಲ್ ಆಂಡ ವೆಲಫೇರ್ ಅಕಾಡೆಮಿ ಮತ್ತು ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆಯಿಂದ ಕೊಪ್ಪಳದಲ್ಲಿ ಹಮ್ಮಿಕೊಂಡಿರುವ ಪ್ರಥಮ ಅಖಿಲ ಕರ್ನಾಟಕ ಬಹುಭಾಷಾ ಕವಿ ಸಮ್ಮೇಳನ ಮತ್ತು ಸಾಂಸ್ಕೃತಿಕ ಉತ್ಸವದ ಪೂರ್ವಭಾವಿ ಸಭೆ ಸಾಂಸ್ಕೃತಿಕ ಕಾರ್ಯಕ್ರಮ ನೀಡಬಹುದು ಎಂದು ಸಂಯೋಜಕ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಪತ್ರಕರ್ತರು, ಚಲನಚಿತ್ರ ನಿರ್ದೆಶಕರು, ಸಾಂಸ್ಕೃತಿಕ ಸಂಘಟಕ ರಮೇಶ ಸುರ್ವೆರವರು ಸಮ್ಮೇಳನಾಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನವನ್ನು ಅನಿವಾರ್ಯ ಕಾರಣಗಳಿಂದ ಜೂನ್ ೯ ಮತ್ತು ೧೦ ರಂದು ಕೊಪ್ಪಳದ ಸಾಹಿತ್ಯ ಭವನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ನಗರದ ಪ್ರವಾಸಿ ಮಂದಿರದ ಎದುರುಗಡೆ ಇರುವ ಶ್ರೀ ಈಶ್ವರ ದೇವಸ್ಥಾನದಲ್ಲಿ ಸಮ್ಮೇಳನ ಕುರಿತು ಹಲವಾರು ಜನರು ಸಲಹೆ ಸೂಚನೆಗಳನ್ನು ನೀಡಿದರು. ಸಮ್ಮೇಳನದಲ್ಲಿ ವಿವಿಧ ಭಾಷೆಯನ್ನು ಮಾತನಾಡುವ ಮತ್ತು ಮಾತೃ ಭಾಷೆಯಾಗಿರುವ ಕೆಲವು ಸಾಹಿತಿಗಳನ್ನು ಆಹ್ವಾನಿಸುವದು, ಸಮ್ಮೇಳನದಲ್ಲಿ ಪಾಲ್ಗೊಂಡವರಿಗೆ ಮದ್ಯಾಹ್ನದ ಊಟದ ವ್ಯವಸ್ಥೆ ಮತ್ತು ಎರಡು ದಿನ ಪಾಲ್ಗೊಳ್ಳುವರಿಗೆ ವಸತಿ ಸೌಕರ್ಯ ಮಾಡುವದು, ಸಮ್ಮೇಳನದ ನೆನಪಲ್ಲಿ ಸ್ಮರಣ ಸಂಚಿಕೆ ತರುವದು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಜನರನ್ನು ಸೇರಿಸಿಕೊಳ್ಳುವದು, ಸಾಧ್ಯವಾದರೆ ಇನ್ನೊಂದು ಸಭೆಯನ್ನು ಕರೆಯುವದು ಹೀಗೆ ಹಲವಾರು ಸಲಹೆಗಳನ್ನು ನೀಡಿದರು. ಇದಕ್ಕೂ ಮೊದಲು ಸಮ್ಮೇಳನದ ಸಂಚಾಲಕ ಸ್ವರಭಾರತಿ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಸಮ್ಮೇಳನದ ಕುರಿತು ಮಾಹಿತಿ ನೀಡಿದರು. ಸಭೆಯಲ್ಲಿ ಡಾ. ಮಹಾಂತೇಶ ಮಲ್ಲನಗೌಡರ, ಹನುಮಂತಪ್ಪ ಅಂಡಗಿ ಚಿಲವಾಡಗಿ, ಶಿವಾನಂದ ಹೊದ್ಲೂರ, ಶರಣಬಸಪ್ಪ ಬಿಳಿಯಲಿ, ಮೂರ್ತಿ ಇಟಗಿ, ಬಸವರಾಜ ಸಂಕನಗೌಡರ, ಶಿವಪ್ಪ ಹಡಪದ, ಎ.ಪಿ.ಅಂಗಡಿ, ಶಿವನಗೌಡ ಪಾಟೀಲ ಹಲಗೇರಿ, ಶಿವಪ್ರಸಾದ ಹಾದಿಮನಿ, ಶರಣಬಸಪ್ಪ ದಾನಕೈ, ಶ್ರೀನಿವಾಸ ಚಿತ್ರಗಾರ, ಶಾಂತಾದೇವಿ ಹಿರೇಮಠ, ವಿಜಯಲಕ್ಷ್ಮೀ ಕೊಟಗಿ, ಎನ್. ಜಡೆಪ್ಪ ಇತರರು ಇದ್ದರು.
ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಕವಿಗೋಷ್ಠಿ ಗೆ ಹೆಸರು ನೊಂದಾಯಿಸಲು ಕೊನೆ ಅವಕಾಶ : ಸಮ್ಮೇಳನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಇಚ್ಛೆಯುಳ್ಳ ರಾಜ್ಯದ ಕಲಾವಿದರು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು. ರಾಜ್ಯ ೩೦ ಜಿಲ್ಲೆಗಳ ಕವಿಗಳು ತಮ್ಮ ಆಸಕ್ತಿಯನ್ನು ಮೇ ೨೦ ರೊಳಗೆ ದೂರವಾಣಿ ಮೂಲಕ ಹೆಸರು ನೊಂದಾಯಿಸಿಕೊಂಡು ರಾಜ್ಯಮಟ್ಟದ ಬಹುಭಾಷಾ ಕವಿ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಅವರು ವಿನಂತಿಸಿದ್ದಾರೆ. ಪಾಲ್ಗೊಂಡ ಕಲಾವಿದರಿಗೆ ಮತ್ತು ಕವಿಗಳಿಗೆ ನೆನಪಿನ ಕಾಣಿಕೆ ಹಾಗೂ ಪ್ರಮಾಣ ಪತ್ರ ನೀಡಲಾಗುವದು ಎಂದು ಗೊಂಡಬಾಳ ತಿಳಿಸಿದ್ದಾರೆ. ಮೊ : ೯೪೪೮೩೦೦೦೭೦.
ಸಮ್ಮೇಳನದ ಲಾಂಛನ ಸಿದ್ಧತೆ : ಸಮ್ಮೇಳನಕ್ಕೆ ಜಿಲ್ಲೆಯನ್ನು ಸ್ಮರಿಸುವ ಮತ್ತು ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಲಾಂಛನವನ್ನು ಸಿದ್ಧಗೊಳಿಸಲಾಗುತ್ತಿದೆ. ಕೊಪ್ಪಳ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರು ಹಾಗೂ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ಹೆಚ್ಚಿನ ಪಾಲ್ಗೊಂಡು ಸಮ್ಮೇಳನ ಯಶಸ್ವಿಗೊಳಿಸಬೇಕು ಎಂದು ಅವರು ವಿನಂತಿಸಿದ್ದಾರೆ.
0 comments:
Post a Comment