PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ವಿಜಯಲಕ್ಷ್ಮೀಯವರ ಕವನಗಳು ಸರಳ ಹಾಗೂ ನೇರವಾಗಿ ಜನರನ್ನು ಮುಟ್ಟುತ್ತವೆ. ಯಾವುದೇ ಸಂಕೀರ್ಣತೆ ಇಲ್ಲದೆ,ಯಾವುದೇ ಕಟ್ಟುಪಾಡುಗಳಿಗೆ ಒಳಗಾಗದೇ ದಿಟ್ಟತನದಿಂದ ಬರೆಯುತ್ತಾರೆ. ಅವರ ಕವನಗಳಲ್ಲಿ ರೋದನೆಯಿದೆ,ಪ್ರತಿರೋಧವಿದೆ. ಕಾವ್ಯ ಎನ್ನುವುದು ಅನುಭವಿಸುವಂಥದ್ದು. ಮಾತುಗಳಲ್ಲಿ ಹೇಳಲಾಗದು, ಕನ್ನಡದ ಇತರೆ ಕವಿಗಳ ಅಧ್ಯಯನ ಬೇಕು, ಮುಂದಿನ ದಿನಗಳಲ್ಲಿ ವಿಜಯಲಕ್ಷ್ಮೀಯವರ ಕಾವ್ಯ  ಇನ್ನಷ್ಟು ಮೊನಚಾಗಲಿ ಎಂದು ಹಿರಿಯ ಸಾಹಿತಿ ಡಾ.ಮಹಾಂತೇಶ ಮಲ್ಲನಗೌಡರ ಹೇಳಿದರು. ಅವರು ಕನ್ನಡನೆಟ್ ಡಾಟ್ ಕಾಂ ಕವಿಸಮೂಹ ನಗರದ ಪ್ರವಾಸಿ ಮಂದಿರದ ಎದುರಿನ ಈಶ್ವರ ಗುಡಿಯಲ್ಲಿ ಹಮ್ಮಿಕೊಂಡಿದ್ದ ೧೦೬ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಮಾತನಾಡುತ್ತಿದ್ದರು. 
ಈ ವಾರ ಕವಿಯತ್ರಿ ವಿಜಯಲಕ್ಷ್ಮೀ ಮಠದರ ಕಾವ್ಯ ವಾಚನ ಮತ್ತು ವಿಮರ್ಶೆಯನ್ನು ಹಮ್ಮಿಕೊಳ್ಳಲಾಗಿತ್ತು. ಅವರ ಕಾವ್ಯದ ಕುರಿತು ಶಿವಪ್ರಸಾದ ಹಾದಿಮನಿ,ಅನಸೂಯಾ ಜಾಗೀರದಾರ, ಸಿರಾಜ್ ಬಿಸರಳ್ಳಿ ಮಾತನಾಡಿದರು. ನಮ್ಮ ಜಿಲ್ಲೆಯ ಕವಿಗಳ,ಕವಿಯತ್ರಿಯರ ಕಾವ್ಯದ ಮಿತಿಗಳು ಹಾಗೂ ವರ್ತಮಾನದ ಕಾವ್ಯದ ಕುರಿತು ಚರ್ಚೆ ನಡೆಯಿತು.
  ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ  ಬಸವರಾಜ ಸಂಕನಗೌಡ್ರ- ನಾವು ನೊಂದವರು, ಚಂದ್ರು ಕನಕಗಿರಿ- ಕಡ್ಲೇಕಾಯಿ ಅಜ್ಜಿ (ಕಥೆ),ವಾಸುದೇವ ಕುಲಕರ್ಣಿ- ಸರ್.. ನೀವು ಸಾಲಿ ತಪ್ಪಿಸಿರಿ (ಕಥೆ), ಶಿವಪ್ರಸಾದ ಹಾದಿಮನಿ- ಚುಟುಕುಗಳು, ಪುಷ್ಪಾವತಿ ಎಂ.- ಭವಿಷ್ಯ, ಎ.ಪಿ.ಅಂಗಡಿ- ಬಾರೋ ಮಳೆರಾಯ, ಎಂ.ಡಿ.ಹುಸೇನ್- ಭ್ರಷ್ಟರು, ವಿದ್ಯೆ, ಅನಸೂಯಾ ಜಾಗೀರದಾರ- ಮೌನದೊಳಗಿನ ಮಾತು, ಸಿರಾಜ್ ಬಿಸರಳ್ಳಿ- ಡಾ.ವಿನಯಾರ ಸೀರೆ ಎಂದರೆ ಎಂಥ ಹುಚ್ಚು ನನಗೆ, ಪ್ರತಿಭಾ ನಂದಕುಮಾರರ- ನಾವು ಹುಡುಗಿಯರೇ ಹೀಗೆ  ಕವನಗಳನ್ನು ವಾಚನ ಮಾಡಿದರು.  
ಕಾರ್‍ಯಕ್ರಮದಲ್ಲಿ  ಗೋಪಾಲ ಮಾನ್ವಿ, ಬಸವರಾಜ್ ಶೀಲವಂತರ, ಹನುಮಂತಪ್ಪ ಅಂಡಗಿ, ಸುದೀಂದ್ರ ರಾವ್, ಕೃಷ್ಣಪ್ ಸಂಗಟಿ,ಶಿವಾನಂದ ಹೊದ್ಲೂರ, ವಿಮಲಾ ಇನಾಂದಾರ್, ಭುಜಂಗಸ್ವಾಮಿ ಇನಾಂದಾರ್, ಗಂಗಾ, ಶಾಂತಾದೇವಿ ಹಿರೇಮಠ, ಶರಣಪ್ಪ ದಾನಕೈ, ವಿಜಯಲಕ್ಷ್ಮೀ ದಾನಕೈ ಸೇರಿದಂತೆ ಇತರರು ಉಪಸ್ಥಿತರಿದ್ದರು. 
ಸ್ವಾಗತವನ್ನು ಶಿವಪ್ರಸಾದ ಹಾದಿಮನಿ , ವಂದನಾರ್ಪನೆಯನ್ನು ಬಸವರಾಜ್ ಸಂಕನಗೌಡ್ರ ಮಾಡಿದರೆ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಿರೂಪಿಸಿದರು. 

Advertisement

0 comments:

Post a Comment

 
Top