PLEASE LOGIN TO KANNADANET.COM FOR REGULAR NEWS-UPDATES

ಹುಬ್ಬಳ್ಳಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಹಂಪಿ ಎಕ್ಸ್ ಪ್ರೆಸ್ ಆಂದ್ರಪ್ರದೇಶದ ಪೆನಗೊಂಡ ಎಂಬಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ 8ಕ್ಕೂ ಹೆಚ್ಚು ಜನರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಹಲವಾರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.   ಭೋಗಿಗಳು ಡಿಕ್ಕಿ ಹೊಡೆದ ಪರಿಣಾಮ ಹತ್ತಿದ ಬೆಂಕಿಯಲ್ಲಿ ಮೂರು ಜನ ಸಜೀವ ದಹನವಾಗಿದ್ದಾರೆ.ಸಾವನ್ನಪ್ಪಿದವರಲ್ಲಿ ಕರ್ನಾಟಕದವರೇ ಹೆಚ್ಚಾಗಿದ್ದಾರ ಎಂದು ಹೇಳಲಾಗುತ್ತಿದೆ.  ಈ ದುರ್ಘಟನೆ ಬೆಳಗಿನ ಜಾವ 3.15ಕ್ಕೆ ಸಂಭವಿಸಿದೆ.  ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. 





ನಿಂತಿದ್ದ ಗೂಡ್ಸ್ ರೈಲಿಗೆ ಹಂಪಿ ಎಕ್ಸ್ ಪ್ರೆಸ್ ಡಿಕ್ಕಿ: 25 ಸಾವು; 70 ಮಂದಿಗೆ ಗಾಯ | ರಾಜ್ಯ , ಕೇಂದ್ರ ಸರ್ಕಾರದಿಂದ ಪರಿಹಾರ ಘೋಷಣೆ: 
ಗಾಯಗೊಂಡ ಹಲವರು ಸ್ಥಿತಿ ತೀರಾ ಗಂಭೀರವಾಗಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆ ಪೆನುಕೊಂಡ, ಹಿಂದೂಪುರ ಹಾಗೂ ಪುಟ್ಟಪರ್ತಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.ಇನ್ನೂ ಕೆಲವು ಪ್ರಯಾಣಿಕರು ಇನ್ನೂ ಜಖಂಗೊಂಡ ಬೋಗಿಯೊಳಗೆ ಸಿಲುಕಿದ್ದು,ಗ್ಯಾಸ್ ಕಟ್ಟರ್ ಬಳಸಿ ಬೋಗಿಯಲ್ಲಿ ಸಿಲುಕಿರುವವರನ್ನು ಹೊರೆ ತೆಗೆಯುವ ಕಾರ್ಯ ಭರದಿಂದ ಸಾಗುತ್ತಿದೆಗಾಯಾಳುಗಳನ್ನು ಪೆನಕೊಂಡ,ಅನಂತಪುರ, ಹಿಂದೂಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.ಇನ್ನೂ ಅನೇಕರು ರೈಲಿನಲ್ಲಿ ಸಿಲುಕಿಕೊಂಡಿದ್ದು ಅವರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ.ರೈಲು ಸಿಬ್ಬಂದಿಯ ನಿರ್ಲಕ್ಷ್ಯತನವೇ ಈ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ.1ನೇ ಪ್ಲಾಟ್‌ಫಾರಂನಲ್ಲಿ ಗೂಡ್ಸ್ ರೈಲು ನಿಂತಿದ್ದು ಹಂಪಿ ಎಕ್ಸ್‌ಪ್ರೆಸ್ ರೈಲಿನ ಸಿಬ್ಬಂದಿಗೆ ತಿಳಿಸದಿರುವುದೇ ಈ ಘಟನೆಗೆ ಕಾರಣವಾಗಿದೆ.






ಘಟನೆ ಹಿನ್ನೆಲೆ:ಸೋಮವಾರ ಸಂಜೆ 6ಗಂಟೆಗೆ ಹುಬ್ಬಳ್ಳಿಯಿಂದ ಹೊರಟ 16591ಸಂಖ್ಯೆಯ ಹುಬ್ಬಳ್ಳಿ-ಬೆಂಗಳೂರು ಹಂಪಿ ಎಕ್ಸ್ ಪ್ರೆಸ್ ರೈಲು ಗಾಡಿಯು ಮಂಗಳವಾರ ಬೆಳಿಗ್ಗೆ 6ಕ್ಕೆ ಬೆಂಗಳೂರು ತಲುಪಬೇಕಿತ್ತು.ಕರ್ನಾಟಕದಿಂದ ಹೊರಡುವ ಈ ರೈಲು ಮಾರ್ಗದ ಮಧ್ಯದಲ್ಲಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯನ್ನು ಬಳಸಿ ಬೆಂಗಳೂರಿನತ್ತ ಪ್ರಯಾಣಿಸುತ್ತದೆ.








ಆದರೆ ಸೋಮವಾರ ಹೊರಟ ರೈಲು ಗಾಡಿಯು ಬೆಳಗಿನ ಜಾವ 3ಕ್ಕೆ ಪೆನುಕೊಂಡ ರೈಲ್ವೇ ನಿಲ್ದಾಣದಲ್ಲಿ ಸಿಗ್ನಲ್ ಲೋಪದಿಂದ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆಯಿತು.ತಕ್ಷಣ ಮಹಿಳಾ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿತು.ದುರಂತದಲ್ಲಿ ಬೋಗಿ ಭಾಗಶಃ ಸುಟ್ಟು ಹೋಗಿದೆ.ಜತೆಗೆ ನಾಲ್ಕು ಬೋಗಿಗಳು ಹಳಿ ತಪ್ಪಿವೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.








ಅಪಘಾತದಲ್ಲಿ ಮೃತರಾದ ಬಹುತೇಕರು ಕರ್ನಾಟಕಕ್ಕೆ ಸೇರಿದವರಾಗಿದ್ದು ಅವರಲ್ಲಿ ನಾಲ್ವರು ಮಕ್ಕಳೂ ಸೇರಿದ್ದಾರೆ. ಕೆಲವು ಮೃತ ದೇಹಗಳು ಗುರುತು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಸ್ಥಳೀಯ ಪೊಲೀಸರು,ಅಗ್ನಿ ಶಾಮಕ ಸಿಬ್ಬಂದಿ ಹಾಗೂ ರೈಲ್ವೇ ಅಧಿಕಾರಿಗಳು ಘಟನೆ ನಡೆದ ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಹಾಗೂ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ನೇತೃತ್ವವನ್ನು ಅನಂತಪುರ ಜಿಲ್ಲೆಯ ಜಿಲ್ಲಾಧಿಕಾರಿ ದುರ್ಗಾ ದಾಸ್ ವಹಿಸಿಕೊಂಡಿದ್ದಾರೆ.


ಘಟನೆ ನಡೆದ ತಕ್ಷಣ ಕೇಂದ್ರ ರೈಲ್ವೇ ಮಂತ್ರಿ ಮುಕುಲ್ ರಾಯ್ ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆಗೆ ಆದೇಶಿಸಿದ್ದಾರೆ.ಸಚಿವರು ಮೃತರ ಕುಟುಂಬಕ್ಕೆ ತಲಾ 5ಲಕ್ಷ ರೂಪಾಯಿ,ತೀವ್ರ ಗಾಯಗೊಂಡವರಿಗೆ ತಲಾ 1ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ 50ಸಾವಿರ ರೂಪಾಯಿ ಪರಿಹಾರ ಘೋಷಿಸಿದರು


ರೈಲು ದುರಂತ:ಸತ್ತವರಲ್ಲಿ 15 ಮಂದಿ ಬಳ್ಳಾರಿಯವರು


ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪೆನುಕೊಂಡದಲ್ಲಿ ಮೇ 22ರಂದು ಬೆಳಗಿನ ಜಾವ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಮೃತರಾದ 16 ಪ್ರಯಾಣಿಕರಲ್ಲಿ 15 ಪ್ರಯಾಣಿಕರು ಬಳ್ಳಾರಿ ಜಿಲ್ಲೆಯವರೇ ಆಗಿದ್ದಾರೆ. ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬರುತ್ತಿದ್ದ ಹಂಪಿ ಎಕ್ಸ್‌ಪ್ರೆಸ್ ರೈಲು ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ದುರಂತ ಸಂಭವಿಸಿದೆ.


ಈ ರೈಲು ದುರಂತದಲ್ಲಿ ಸತ್ತವರಲ್ಲಿ ಬಳ್ಳಾರಿ ಜಿಲ್ಲೆಯ ಶಿರಗುಪ್ಪ ತಾಲೂಕಿನ ಕೆಂಚೇನಗುಡ್ಡ ಗ್ರಾಮದ ಒಂದೇ ಕುಟುಂಬದ ಐವರು ಸೇರಿದ್ದಾರೆ.ಇವರು ತೀವರ ಬಡ ಕುಟುಂಬದಿಂದ ಬಂದವರಾಗಿದ್ದು,ಕೂಲಿ ಕೆಲಸಕ್ಕೆಂದು ಬೆಂಗಳೂರಿಗೆ ಬರುತ್ತಿದ್ದರು.ಇವರನ್ನು ಗುರುತಿಸಿದ ಕುಷ್ಟಗಿ ತಾಲೂಕಿನ ಸ್ನೇಹಿತರೊಬ್ಬರು ಸತ್ತ ಸುದ್ದಿಯನ್ನು ಗ್ರಾಮದ ಸಂಬಂಧಿಕರಿಗೆ ತಿಳಿಸಿದ್ದಾರೆ.






ಸತ್ತವರ ಹೆಸರುಗಳು ಇಂತಿವೆ:ರುದ್ರ ನಾಯಕ್ (40), ಅವರ ಪತ್ನಿ ಸರೋಜ (35), ಮಕ್ಕಳಾದ ದೇವಿಬಾಯಿ (19), ಪಾವನಿ (15) ಮತ್ತು ಮುತ್ತಣ್ಣ (10). ಇವರಲ್ಲಿ ದೇವಿಬಾಯಿಯ ಮದುವೆ ಕುಷ್ಟಗಿ ತಾಲೂಕಿನ ಎಂಬಿ ತಾಂಡಾದ ಯುವಕನೊಂದಿಗೆ ನಿಶ್ಚಯವಾಗಿತ್ತು. ಮದುವೆಗೆ ಮುಂಚೆಯೇ ವಿಧಿ ಆಕೆಯನ್ನು ಬರಸೆಳೆದಿದೆ.






ಜಿಲ್ಲೆಯ ನಾಡಗುರ್ತಿ ಗ್ರಾಮದ ಲಕ್ಷಮ್ಮ (35) ಮತ್ತು ಆಕೆಯ ಮಗ ಮಲ್ಲೇಶಪ್ಪ (15) ಕೂಡ ದುರಂತ ಸಾವಿಗೀಡಾಗಿದ್ದಾರೆ.ದುರಂತ ಸಂಭವಿಸಿದ ಸುದ್ದಿ ತಿಳಿಯುತ್ತಿದ್ದಂತೆ ಸತ್ತವರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.ಕೇಂದ್ರ ರೈಲು ಖಾತೆ ಸಹಾಯಕ ಸಚಿವರಾಗಿರುವ ಕೆ.ಎಚ್.ಮುನಿಯಪ್ಪ ಕೂಡ ದೆಹಲಿಯಿಂದ ಅಪಘಾತ ನಡೆದ ಸ್ಥಳಕ್ಕೆ ಬರುತ್ತಿದ್ದಾರೆ.


ರಾಜ್ಯ ಸರ್ಕಾರದಿಂದ ಪರಿಹಾರ ಘೋಷಣೆ:


ಆಂಧ್ರದ ಅನಂತಪುರ ಜಿಲ್ಲೆಯಲ್ಲಿ ಅಪಘಾತಕ್ಕೀಡಾದ ಹಂಪಿ ಎಕ್ಸ್ ಪ್ರೆಸ್ ರೈಲಿನಲ್ಲಿ ಮೃತರಾದ ಕರ್ನಾಟಕದ ಪ್ರಯಾಣಿಕರ ಕುಟುಂಬದವರಿಗೆ ತಲಾ ಒಂದು ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ ತಲಾ 25ಸಾವಿರ ರೂಪಾಯಿ ಹಾಗೂ ಅವರ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.


ಜವಳಿ ಸಚಿವ ವರ್ತೂರು ಪ್ರಕಾಶ್ ನೇತೃತ್ವದ ತಂಡ ರಚಿಸಲಾಗಿದ್ದು, ಶೀಘ್ರವೇ ಘಟನೆ ನಡೆದ ಸ್ಥಳಕ್ಕೆ ತಂಡ ಧಾವಿಸಲಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.


ರೈಲ್ವೇ ಇಲಾಖೆ ಸಹಾಯವಾಣಿ ತೆರೆದಿದ್ದು, ಬೆಂಗಳೂರು ನಗರ, ಬಳ್ಳಾರಿ, ಹೊಸಪೇಟೆ ಹಾಗೂ ಹುಬ್ಬಳ್ಳಿ ಇವು ಕಾರ್ಯ ನಿರ್ವಹಿಸಲಿವೆ




ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ 
Helpline numbers - Bangalore: 080 22371166, 22156553, 22156554, Bellary: 08392 277704, Hubli: 0836-2345338.

Advertisement

0 comments:

Post a Comment

 
Top