PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ಗುಲಬರ್ಗಾ ವಿಭಾಗದ ಎಲ್ಲ ಜಿಲ್ಲೆಗಳಲ್ಲಿ ಹಾಗೂ ಬೆಳಗಾವಿ ವಿಭಾಗದ ಭಾಗಲಕೋಟ ಮತ್ತು ಬಿಜಾಪುರ ಜಿಲ್ಲೆಯ ರಾಜ್ಯ ಸರಕಾರಿ ಕಛೇರಿಗಳ ವೇಳೆಯನ್ನು ಬೆಳಗ್ಗೆ ೮ ರಿಂದ ೧-೩೦ ಗಂಟೆಯವರೆಗೆ ನಿಗದಿಪಡಿಸಿ ದಿನಾಂಕ ೩೦-೦೩-೨೦೧೨ ರಂದು ರಾಜ್ಯ ಸರಕಾರವು ಆದೇಶ ಹೊರಡಿಸಿರುವುದನ್ನು  ರದ್ದು ಪಡಿಸಿ ದಿನಾಂಕ ೧೦-೦೪-೨೦೧೨ ರಂದು ಪುನಃ ಆದೇಶ ಹೊರಡಿಸಿರುವುದು ವಿಷಾದನೀಯ. ಕಳೆದ ೩೦ ವರ್ಷಗಳಿಂದ ಈ ಜಿಲ್ಲೆಗಳಲ್ಲಿ ಬೇಸಿಗೆ ಕಾಲದಲ್ಲಿ ಕಛೇರಿ ವೇಳೇಯು ಬೆಳಗ್ಗೆ ೮ ರಿಂದ ೧-೩೦ ಗಂಟೆಗೆ ಜಾರಿಯಲ್ಲಿರುವುದು. ಬೇಸಿಗೆ ಕಾಲದಲ್ಲಿ ಬರಗಾಲ, ನೆರೆಹಾವಳಿ ಇಂತಹ ಅನೇಕ ಸಂಧರ್ಬಗಳಲ್ಲಿ ಕಛೇರಿ ವೇಳೆ ಹೊರತು ಪಡಿಸಿ ದಿನದ ೨೪ ಗಂಟೆ ನೌಕರರು ಕಾರ್ಯನಿರ್ವಹಿಸುತ್ತಿರುವುದು ಗಮನಿಸಬೇಕಾದ ಅಂಶವಾಗಿರುತ್ತದೆ. ತುರ್ತು ಪರಸ್ಥಿತಿಯಲ್ಲಿ ಹಾಗೂ ಇಲಾಖೆಯ ಮುಖ್ಯವಾದ ಕೆಲಸಗಳಲ್ಲಿ ಕಛೇರಿ ಸಮಯವೆನ್ನದೆ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬೇಸಿಗೆಯಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ೪೫ ಡಿಗ್ರಿಗಿಂತ ಅಧಿಕ ಉಷ್ಣಾಂಷ ಧಾಖಲಾಗುತ್ತಿರುವುದರಿಂದ ಕರ್ತವ್ಯ ನಿರ್ವಹಿಸುವುದು ಕಷ್ಠದಾಯಕ ವಾಗಿದೆ ಕಾರಣ ಕಳೆದ ೩೦ ವರ್ಷಗಳಿಂದ ರೂಡಿಯಲ್ಲಿರುವ ಕಛೇರಿ ವೇಳೆಯನ್ನು ಬದಲಾಯಿಸಿ ಆದೇಶ ಹೊರಡಿಸಿರುವುದನ್ನು ಸರಕಾರವು ಕೂಡಲೇ ಹಿಂಪಡೆದು ಕಛೇರಿ ವೇಳೇಯನ್ನು ಬೆಳಗ್ಗೆ ೮-ರಿಂದ ೧-೩೦ ಗಂಟೆವರೆಗೆ ನಿಗದಿಪೆಡೆಸಿ ಮರು ಆದೇಶ ಹೊರಡಿಸಲು ರಾಜ್ಯ ಸರಕಾರಿ ನೌಕರರ ಸಂಘದ ಪದಾದಿಕಾರಿಗಳ ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.  ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷರಾದ   ಶಂಬುಲಿಂಗನಗೌಡ ಹಲಗೇರಿ ಪ್ರಧಾನ ಕಾರ್ಯದರ್ಶಿಗಳಾದ ನಾಗರಾಜ ಜುಮ್ಮಣ್ಣನವರ, ಹಾಗೂ ನೌಕರ ಸಂಘದ ಪದಾದಿಕಾರಿಗಳು ಹಾಜರಿದ್ದರು.

Advertisement

1 comments:

  1. ಕೇವಲ ರಾಜ್ಯ ಸರ್ಕಾರಿ ನೌಕರರಿಗೆ ಬಿಸಿಲು ಇದೆನೋ,ಅಥವಾ ಕೇಂದ್ರ ಸರ್ಕಾರದ ನೌಕರರಿಗೆ, ಬ್ಯಾಂಕ್ ನೌಕರರಿಗೆ ಬಿಸಿಲು ಇದೆನೋ ತಿಳಿಯದಾಗಿದೆ, ಸರ್ಕಾರಿ ನೌಕರರು ಕಚೇರಿಯಲ್ಲಿ ಇಲ್ಲದಿದ್ದರೂ ನೇರವಾಗಿ ಮನೆಗೆ ಹೋಗುತ್ತಾರಾ? ಎನ್ಜಿಓ ಗಳಿಗೆ, ಬಹುತೇಕರು, ಕೆಲವರು ಮಾತ್ರ ಮನೆಗೆ ದಾರಿ ಹಿಡಿಯುತ್ತಾರೆ.ಮಂಜಾನೆಯಿಂದ ಸಂಜೆವರೆಗೂ ಕೂಲಿಕಾರರು ಖಾಸಗಿ ಉದ್ಯೋಗಿಗಳು ಕಾರ್ಯನಿರ್ವಹಿಸುದಿಲ್ಲವೆ ? ಈ ಸಮಯದ ಬದಲಾವಣೆಯಿಂದ ಗ್ರಾಮೀಣ ಭಾಗದ ಜನರು ಎಷ್ಟು ಕಷ್ಟ ಅನುಭವಿಸುತ್ತಿದ್ದಾರೆನ್ನುವುದು ಸರಕಾರಿ ನೌಕರರಿಗೆ ಗೊತ್ತಿದೆಯಾ ?

    ReplyDelete

 
Top