PLEASE LOGIN TO KANNADANET.COM FOR REGULAR NEWS-UPDATES

  ಜಿಲ್ಲೆಯಲ್ಲಿ ಏ.೧೫ ರಿಂದ ೧೮ ರವರೆಗೆ ಎರಡನೇ ಹಂತದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಇದರ ಪ್ರಯೋಜನ ಪಡೆಯಲಿದ್ದಾರೆ.  ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಗುಂಪುಗಳು, ಶಿಕ್ಷಕರು ಸೇರಿದಂತೆ ಸ್ವಯಂಸೇವಾ ಸಂಸ್ಥೆಗಳು ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕರಿಸಬೇಕು ಎಂದು ಅಪರ  ಜಿಲ್ಲಾಧಿಕಾರಿ ಬಿ.ಪಿ. ಆಡ್ನೂರು ಅವರು ಹೇಳಿದ್ದಾರೆ.
  ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ದಿನಾಂಕ: ೧೨-೦೪-೨೦೧೨ ರಂದು ಏರ್ಪಡಿಸಲಾಗಿದ್ದ  ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. 
  ಡಾ|| ರಮೇಶ ಮೂಲಿಮನಿ ಅವರು ಮೊದಲನೆ ಸುತ್ತಿನ ಪಲ್ಸ್ ಪೋಲಿಯೋ ಕಾರ್ಯಕ್ರಮದ ಪ್ರಗತಿಯನ್ನು ವಿವರವಾಗಿ ತಿಳಿಸುತ್ತಾ ಏಪ್ರಿಲ್ ತಿಂಗಳಲ್ಲಿ ಹೆಚ್ಚು ಬೇಸಿಗೆ ಇದ್ದು ಪಲ್ಸ್ ಪೋಲಿಯೋದ ಮೊದಲನೇ ದಿನದಿಂದೆ ಹೆಚ್ಚು ಮಕ್ಕಳಿಗೆ ಲಸಿಕೆ ಹಾಕಲು ತಿಳಿಸಿದರು. ಇದರ ಜೋತೆಗೆ ಎಲ್ಲಾ ಭೂತ್‌ಗಳಲ್ಲಿ ನೀರಿನ ವ್ಯವಸ್ಥೆ ಮಾಡಲು ಹಾಗೂ ಕಳೆದ ಸಾಲಿನಲ್ಲಿ ಕಡಿಮೆ ಪ್ರಗತಿ ಸಾಧಿಸಿದ ಆರೋಗ್ಯ ಕೇಂದ್ರಗಳಲ್ಲಿ ಹೆಚ್ಚಿನ ಗುರಿ ಸಾಧಿಸಲು ತಿಳಿಸಿದರು. ಮೊದಲನೇ ಸುತ್ತಿನಲ್ಲಿ ಭೂತ್ ಮಟ್ಟದಲ್ಲಿ ೧೬೪೪೭೪ ಮಕ್ಕಳನ್ನು ಮತ್ತು ಮನೆ ಬೇಟಿ ನೀಡಿದಾಗ  ೩೮೭೧೭ ಮಕ್ಕಳಿಗೆ ಲಸಿಕೆ ನೀಡಲಾಯಿತು ಎಂದು ಸಭೆಯಲ್ಲಿ ತಿಳಿಸಿದರು. 
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹದೇವಸ್ವಾಮಿ, ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು, ನಾಲ್ಕು ತಾಲೂಕುಗಳ ವೈದ್ಯಾಧಿಕಾರಿಗಳು,ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.


Advertisement

0 comments:

Post a Comment

 
Top