ಕೊಪ್ಪಳ, ೨೪- ಬರಗಾಲ ನಿರ್ವಹಿಸುವಲ್ಲಿ ಸಂಪೂರ್ಣ ವಿಫಲವಾಗಿರುವ ಮುಖ್ಯಮಂತ್ರಿ ಸದಾನಂದಗೌಡ ಇಂದು ದಿ. ೨೫ ರಂದು ಬುಧವಾರದಂದು ಕೊಪ್ಪಳ ಜಿಲ್ಲೆಗೆ ನೀಡುತ್ತಿರುವ ಭೇಟಿ ವ್ಯರ್ಥವಾದದ್ದು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸವರಾಜ ರಾಯರೆಡ್ಡಿ ಹೇಳಿದರು.
೭೦ ವರ್ಷಗಳಲ್ಲಿ ಕಾಣದಷ್ಟು ಉಷ್ಣಾಂಶ ಈ ಬಾರಿ ಕಂಡಿದ್ದೇವೆ. ರಾಜ್ಯದಲ್ಲಿ ಭೀಕರ ಬರ ಬಿದ್ದಿದೆ. ರಾಜಸ್ಥಾನ ಬಿಟ್ಟರೆ ಅತಿ ಹೆಚ್ಚು ಬರಗಾಲ ಈ ಬಾರಿ ಕರ್ನಾಟಕದಲ್ಲಿz. ಜನ, ಜಾನುವಾರು ಸಂಕಷ್ಟದಲ್ಲಿರುವಾಗ ಬರ ಪರಿಹಾರ ಕಾಮಗಾರಿ ಆರಂಭಿಸದೆ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಆರೋಪ ಮಾಡುತ್ತಾ ಕಾಲಹರಣ ಮಾಡುತ್ತಿದೆ ಎಂದರು.
ಕೆಪಿಸಿಸಿಯ ಮೂರು ತಂಡಗಳು ರಾಜ್ಯದಲ್ಲಿ ಸಂಚರಿಸಿ ಸಿದ್ದಪಡಿಸಿದ ಬರ ಅಧ್ಯಯನದ ವರದಿಯನ್ನು ದಿ. ೨೮ ರಂದು ತುಮಕೂರನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸುತ್ತಿರುವ ಯುಪಿಎ ಸರ್ಕಾರದ ಮುಖ್ಯಸ್ಥೆ ಶ್ರೀಮತಿ ಸೋನಿಯಾ ಗಾಂಧೀಯವರಿಗೆ ಸಲ್ಲಿಸಲಾಗುವುದು ಎಂದರು.
ಬರಪರಿಹಾರಕ್ಕಾಗಿ ಈಗಾಗಲೇ ೩೭೧ ಕೋಟಿ ಹಣದ ಲೆಕ್ಕ ರಾಜ್ಯ ಸರ್ಕಾರ ತೋರಿಸುತ್ತಿದೆ. ಅದರಲ್ಲಿ ಎಸ್‌ಡಿಆರ್‌ಪಿ ವತಿಯಿಂದ ಕೇಂದ್ರ ೧೨೬ ಕೋಟಿ ರಾಜ್ಯ ಬರಿ ೪೨ ಕೋಟಿ ಬಿಡುಗಡೆ ಮಾಡಿದೆ. ಅದೇ ರೀತಿ ಎನ್‌ಡಿಆರ್‌ಎಫ್ ವತಿಯಿಂದ ಕೇಂದ್ರ ೭೦ ಕೊಟ್ಟಿದೆ. ಆದರೆ ರಾಜ್ಯ ಸರ್ಕಾರ ಬರಿ ೪೨ ಕೋಟಿ ಬಿಡುಗಡೆ ಮಾಡಿ ಜನರ ಹಿತ ಮರೆತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಿ. ೨೫ ರಂದು ಯಲಬುರ್ಗಾ ತಾಲೂಕಿನ ಶಿರೂರು ಗ್ರಾಮದಲ್ಲಿ ಪುನರ್ ವಸತಿ ಜನರಿಗೆ ಚೆಕ್ ವಿತರಣೆಗೆ ಬರುತ್ತಿರುವ ಮುಖ್ಯಮಂತ್ರಿ ಸದಾನಂದಗೌಡ ಕಾರ್ಯಕ್ರಮ ವ್ಯರ್ಥ. ಅಲ್ಲ್ಲಿ ಯಾವುದೇ ರೀತಿಯ ಜನಪರ ಕಾಳಜಿ ಇಲ್ಲ. ಬರ ಅಧ್ಯಯನ ವೀಕ್ಷಣೆ ಇಲ್ಲದೇ ಅಧಿಕಾರಿಗಳ ಸಭೆ ನಡೆಸದ ಸಿಎಂ ಭೇಟಿ ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದರು.
ಜಿಲ್ಲೆ ಬರಗಾಲಕ್ಕೆ ತುತ್ತಾಗಿದ್ದರೂ ಜಿಲ್ಲೆಗೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಿಸದ ಮುಖ್ಯಮಂತ್ರಿಗಳು ಕಡೇ ಪಕ್ಷ ಪಕ್ಕದ ಜಿಲ್ಲೆಯ ಸಚಿವರಲ್ಲಿ ಯಾರಾದರನ್ನು ನಿಯೋಜಿಸಬಹುದಿತ್ತು. ಆದರೆ ಯಡಿಯೂರಪ್ಪನಂತೆ ಜನ ವಿರೋಧಿತನ ಮುಂದುವರೆಸಿರುವ ಸದಾನಂದಗೌಡ ಅವರ ಮಾದರಿಯಲ್ಲಿ ಕಾಲಹರಣದ ತಂತ್ರ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಯಡಿಯೂರಪ್ಪ ಮುಖ್ಯಮಂತ್ರಿಯಾದಾಗಿನಿಂದ ಹೆಲಿಕಾಪ್ಟರ್ ಬಿಟ್ಟು ಇಳಿಯಲಿಲ್ಲ ಅವರ ಹೆಲಿಕಾಪ್ಟರ್ ಬಾಡಿಗೆ ೩೨ ಕೋಟಿ ಆಗಿದೆ. ಈ ಹಿಂದೆ ರಾಜ್ಯದಲ್ಲಿ ದೇವರಾಜ ಅರಸ್, ರಾಮಕೃಷ್ಣ ಹೆಗಡೆ, ಎಂ.ಎಸ್. ಕೃಷ್ಣರ ಅವಧಿಯಲ್ಲಿ ಬರಗಾಲ ಬಂದಿತ್ತು. ಆಗ ಅವರ‍್ಯಾರು ಹೆಲಿಕಾಪ್ಟರ್‌ನಲ್ಲಿ ತಿರುಗಿ ಜನರ ಹಣ ವ್ಯರ್ಥ ಮಾಡಲಿಲ್ಲ. ಬದಲಾಗಿ ರಸ್ತೆಗುಂಟ ರಾಜ್ಯದ ತುಂಬ ಪ್ರವಾಸ ಮಾಡಿ ಜನರ ಸಮಸ್ಯೆಗೆ ಸ್ಪಂದಿಸಿದ್ದರು ಎಂದರು.
ಡಿ.ವಿ. ಸದಾನಂದಗೌಡರು ಮುಖ್ಯಮಂತ್ರಿಯಾದ ಮೇಲೆ ಸರ್ಕಾರ ಇದೆಯೋ ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ ಸಂಪುಟದ ಸಚಿವರು ಸದಾನಂದಗೌಡರ ಮಾತುಕೊಳ್ಳುತ್ತಿಲ್ಲ ಎಂದು ಆರೋಪಪಿಸಿದರು.
ಈ ಸಂದರ್ಭದಲ್ಲಿ ಡಿಸಿಸಿ ಅಧ್ಯಕ್ಷ ಬಸವರಾಜ ಹಿಟ್ನಾಳ, ಮಾಜಿ ಅಧ್ಯಕ್ಷ ಶಾಂತಣ್ಣ ಮುದಗಲ್ಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಬಿ. ನಾಗರಾಳ ಮತ್ತಿತರರು ಉಪಸ್ಥಿತರಿದ್ದರು.
0 comments:
Post a Comment