PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ, - ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಸ್ಥಾನಕ್ಕೆ ಸ್ಪಧಿಸಿರುವ ತಾವು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮೂರು ಬಾರಿ ಪ್ರವಾಸ-ಪ್ರಚಾರ ಮಾಡಿದ್ದು, ಹೈದ್ರಾಬಾದ್ ಕರ್ನಾಟಕದ ನನಗೆ ಆಜೀವ ಸದಸ್ಯರಿಂದ ಹೆಚ್ಚಿನ ಒಲವು ಬೆಂಬಲ ವ್ಯಕ್ತವಾಗಿದೆ ಎಂದು ಕಸಾಪ ಕೇಂದ್ರ ಚುನಾವಣೆಯ ಅಭ್ಯರ್ಥಿ ಶೇಖರಗೌಡ ಮಾಲಿಪಾಟೀಲ ಹೇಳಿದರು.
ಅವರು ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದರು.
ಇತ್ತೀಚಿಗೆ ಕೊಪ್ಪಳಕ್ಕೆ ಬಂದಿದ್ದ ಇನ್ನೊರ್ವ ಅಭ್ಯರ್ಥಿ ಚಂಪಾ ತಮ್ಮ ಬಗ್ಗೆ ಮಾಡಿದ ಆರೋಪಗಳ ಬಗ್ಗೆ ಅವರು ಹಿರಿಯರು ನನ್ನ ಗುರುಗಳು ಅವರ ಬಾಯಲ್ಲಿ ನನ್ನ ಬಗ್ಗೆ ಸುಳ್ಳು ಆರೋಪ ಬಂದದ್ದು ವಿಷಾದನೀಯ ಎಂದರು.
ಗಂಗಾವತಿಯ ಸಮ್ಮೇಳನದ ಲೆಕ್ಕ ಕೊಟ್ಟಿಲ್ಲ ಎನ್ನುವ ಚಂಪಾರ ಆರೋಪದ ಬಗ್ಗೆ ಮಾತನಾಡಿದ ಶೇಖರಗೌಡ ನಾನು ಲೆಕ್ಕ ಕೊಟ್ಟಿದ್ದೇನೆ, ಲೆಕ್ಕ ಕೊಡದೇ ಕಸಾಪ ಕೇಂದ್ರಕ್ಕೆ ಸ್ಪರ್ಧಿಸಲು ಅನುಮತಿ ಬರಲ್ಲ ಎಂಬುದು ಕನಿಷ್ಟ ಮಾಹಿತಿ ಚಂಪಾರಿಗೆ ಇಲ್ಲದೆ ಹೋದದ್ದು, ದುರಂತ. ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಬರೀ ವಿವಾದ ಸೃಷ್ಟಿಸಿದ್ದರು ಎಂದು ಲೇವಡಿ ಮಾಡಿದರು.
ಕೆ.ಬಿ. ಬ್ಯಾಳಿಯವರ ಆರೋಪಕ್ಕೆ ಉತ್ತರಿಸಿದ ಅವರು ಬ್ಯಾಳಿಯವರು ತಮ್ಮ ಅವಧಿಯಲ್ಲಿ ಏನು ಮಾಡಿದ್ದಾರೆ ಎಂಬುದನ್ನು ತೋರಿಸಲಿ. ಒಂದೆ-ಒಂದು ಕಾರ್ಯಕ್ರಮ ಮಾಡದೇ ಅವರು ಮನೆಯವರನ್ನು ಕಸಾಪಕ್ಕೆ ಮತದಾರನ್ನು ಮಾಡಿದ್ದೆ ಅವರ ಸಾಧನೆ ಎಂದು ಟೀಕಿಸಿದರು.
ಗಂಗಾವತಿ ಸಮ್ಮೇಳದ ಸ್ಮರಣ ಸಂಚಿಕೆ ಕುರಿತು ಸ್ಮರಣ ಸಂಚಿಕೆ ಸಂಪಾದಕ ಹೆಚ್.ಎಸ್. ಪಾಟೀಲರ ಆರೋಪಕ್ಕೆ ಉತ್ತರಿಸಿದ ಅವರು ಇಂತಹ ಸುಳ್ಳು ಆರೋಪಕ್ಕೆ ತಾವು ಹೆದರುವುದಿಲ್ಲ. ಪಾಟೀಲರಿಂದಲೇ ಸ್ಮರಣ ಸಂಚಿಕೆ ಮುದ್ರಣ ತಡವಾಗಿದೆ. ಅವರು ಸರಿಯಾಗಿ ಕೆಲಸ ಮಾಡಿದ್ದರೆ ಈಗಾಗಲೇ ಸ್ಮರಣ ಸಂಚಿಕೆ ಹೊರಬಂದಿರುತ್ತಿತ್ತು. ಅದರ ಹಣನನ್ನು ಪ್ರತ್ಯೇಕ ತೆಗೆದಿರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ಅಭ್ಯರ್ಥಿ ರಾಜಶೇಖರ ಅಂಗಡಿ, ಸಾಹಿತಿ ವಿ.ಬಿ. ರಡ್ಡೇರ, ಮಹಾಂತೇಶ ಮಲ್ಲನಗೌಡರ, ಎಸ್.ಬಿ. ಗೊಂಡಬಾಳ, ವಿಠ್ಠಪ್ಪ ಗೊರಂಟ್ಲಿ, ಮಲ್ಲಪ್ಪ ಬೆಲೇರಿ, ರವೀಂದ್ರ ಬಾಕಳೆ, ಜಿ.ಎಸ್. ಗೋನಾಳ, ಈಶಪ್ಪ ಮಳಗಿ ಇನ್ನೀತರರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top