PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಎ. ೨೬, ವಿಶ್ವ ಎಜ್ಯುಕೇಶನಲ್ ಆಂಡ ವೆಲಫೇರ್ ಅಕಾಡೆಮಿ ಮತ್ತು ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆಯಿಂದ ಮೇ ೨೬ ಮತ್ತು ೨೭ ರಂದು ಕೊಪ್ಪಳದಲ್ಲಿ ಪ್ರಪ್ರಥಮ ಬಾರಿಗೆ ಅಖಿಲ ಕರ್ನಾಟಕ ಬಹುಭಾಷಾ ಕವಿ ಸಮ್ಮೇಳನ ಮತ್ತು ಸಾಂಸ್ಕೃತಿಕ ಉತ್ಸವವನ್ನು ನಡೆಸಲಾಗುವದು ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ. 

ಅವರು ನಗರದಲ್ಲಿಂದು ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಈ ವಿಷಯ ತಿಳಿಸಿದರು. ಸಮ್ಮೇಳನದಲ್ಲಿ ರಾಜ್ಯ ನೂರು ಜನ ಕವಿಗಳಿಗೆ ಕವನ ವಾಚಿಸಲು ಅವಕಾಶ ಕೊಡಲಾಗುವದು, ಅದರಲ್ಲಿ ಅರ್ಧದಷ್ಟು ಕನ್ನಡ ಕವಿಗಳಿಗೆ ಇನ್ನರ್ಧದಲ್ಲಿ ಇಂಗ್ಲೀಷ, ಹಿಂದಿ, ಉರ್ದು, ಮರಾಠಿ, ತೆಲುಗು, ತಮಿಳು ಮತ್ತು ತುಳು ಭಾಷೆಯ ಕವಿಗಳಿಗೆ ಅವಕಾಶ ನೀಡಲಾಗುವದು ನಂತರ ನೂರು ಕವಿತೆಗಳ ಕವನ ಸಂಕಲನ ತರಲಾಗುವದು. ಈ ನೂರರಲ್ಲಿ ಕೊಪ್ಪಳ ಜಿಲ್ಲೆಯ ೩೦ ಜನರಿಗೆ ಅವಕಾಶ ನೀಡಲಾಗುವದು. ಭಾಷಾ ಸೌಹಾರ್ಧತೆ ಕುರಿತು ಗೋಷ್ಟಿಯನ್ನು ನಡೆಸಲಾಗುವದು. ಎರಡೂ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವದು. 
೨೬ ರಂದು ಈ ಹಿಂದೆ ಪ್ರಕಟಿಸಿದ ಶ್ರೀ ಗವಿಸಿದ್ದೇಶ್ವರ ಕೊಪ್ಪಳ ಜಿಲ್ಲಾ ಯುವ ಪುರಸ್ಕಾರ ಮತ್ತು ಈ ಬಾರಿ ಕನ್ನಡಕ್ಕಾಗಿ ಸೇವೆ ಸಲ್ಲಿಸಿದ ಜಿಲ್ಲಯ ೧೦ ಜನರಿಗೆ ಕನ್ನಡ ಸೇವಾ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವದು. ೨೭ ರಮದು ವಿಶ್ವಜ್ಯೋತಿ ರಾಷ್ಟೀಯ ಭಾವೈಕ್ಯತಾ ಪ್ರಶಸ್ತಿ ಮತ್ತು ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವದು ಈ ಎಲ್ಲಾ ಪ್ರಶಸ್ತಿ ಪುರಸ್ಕೃತರ ಪರಿಚಯ ಪುಸ್ತಕವನ್ನು ಹೊರತರಲಾಗುವದು ಎಂದು ತಿಳಿಸಿದ್ದಾರೆ. ರಮೇಶ ಸುರ್ವೆ ಸಮ್ಮೇಳನಾಧ್ಯಕ್ಷರು : ಕೊಪ್ಪಳ ಜಿಲ್ಲೆ ಇಟಗಿಯವರಾದ ಶ್ರೀ ರಮೇಶ ಸುರ್ವೆಯವರು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಸುರ್ವೆರವರು ಹಲವಾರು ಕೃತಿಗಳನ್ನು ರಚಿಸಿದ್ದು, ೨೫ ವರ್ಷ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದಾರೆ. ಹಲವಾರು ಧ್ವನಿ ಸುರುಳಿಗಳನ್ನು ಹೊರತಂದಿದ್ದಾರೆ. ಹಲವಾರು ನಾಟಕ ನಿರ್ದೇಶನ ಮಾಡಿ, ಟೆಲಿ ಚಿತ್ರ ಮತ್ತು ಸಿನೆಮಾಗಳಲ್ಲಿ ನಟಿಸಿ, ಮಂದಾಕಿನಿ ಚಿತ್ರವನ್ನು ನಿರ್ದೇಶನ ಮಾಡಿ ಸೈ ಎನಿಸಿಕೊಂಡವರು. ಮೂರು ದಶಕಗಳ ಕಾಲ ಸಾಂಸ್ಕೃತಿಕ ಸಂಘಟಕರಾಗಿ ಅಪಾರ ಕೆಲಸ ಮಾಡಿದ್ದಾರೆ. ಅವರ ಸೇವೆಗಾಗಿ ಮಾದ್ಯಮ ಅಕಾಡೆಮಿ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಇಂದಿರಾ ಗಾಂಧಿ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿ ಸನ್ಮಾನಗಳನ್ನು ಪಡೆದಿದ್ದಾರೆ. 
ಸಮ್ಮೇಳನಕ್ಕೆ ಸಾಹಿತಿ-ನಟರು ಪಾಲ್ಗೊಳ್ಳುವರು : ಕೊಪ್ಪಳದಲ್ಲಿ ನಡೆಯುವ ಸಮ್ಮೇಳನದಲ್ಲಿ ರಾಜ್ಯದ ಅನೇಕ ಸಾಹಿತಿಗಳು ಮತ್ತು ಚಲನಚಿತ್ರ ಕಲಾವಿದರು, ನಟ-ನಟಿಯರು ಪಾಲ್ಗೊಳ್ಳುವರು. ಪತ್ರಿಕಾಗೋಷ್ಠಿಯಲ್ಲಿ ಶಿವಾನಂದ ಹೊದ್ಲೂರು, ವೈ.ಬಿ.ಜೂಡಿ, ವಿಠ್ಠಲ ಮಾಲಿಪಾಟೀಲ ಇದ್ದರು.


Advertisement

0 comments:

Post a Comment

 
Top