ಕಸಾಪ ಚುನಾವಣೆಯಲ್ಲಿ ಹಣ ಮತ್ತು ಜಾತಿಯ ಪ್ರಾಬಲ್ಯ ನಾಚಿಕೆಗೇಡಿತನ
ಕೊಪ್ಪಳ, ಏ. ೨೬. ಕನ್ನಡ ಸಾಹಿತ್ಯ ಪರಿಷತ್ತಿಗೆ ಈ ತಿಂಗಳು ೨೯ ರಂದು ನಡೆಯುವ ಚುನಾವಣೆಯಲ್ಲಿ ಎಂದಿಗಿಂತಲೂ ಅಧಿಕವಾಗಿ ಜಾತಿ ಮತ್ತು ಹಣದ ಪ್ರಾಬಲ್ಯ ಅಧಿಕವಾಗಿದೆ, ಕೆಲವರು ಬಾಡೂಟವನ್ನೇ ನಂಬಿ ಸ್ಟರ್ಧೆ ಮಾಡಿದ್ದಾರೆ ಎಂದು ಮಂಜುನಾಥ ಜಿ. ಗೊಂಡಬಾಳ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾಹಿತ್ಯ ಪರಿಷತ್ತಿನ ಸರಕಾರದ ದುಡ್ಡು ಮತ್ತು ಅಧಿಕಾರಿಗಳನ್ನು ಬಳಸಿಕೊಂಡು ಮಾಡುವ ಸಾಹಿತ್ಯ ಸಮ್ಮೇಳನ ನಡೆಸಿದ ಮಾತ್ರಕ್ಕೆ ಉತ್ತಮ ಸಂಘಟಕರಾಗಲು ಹೇಗೆ ಸಾಧ್ಯ. ಅಷ್ಟಕ್ಕೂ ರಾಜಶೇಖರ ಅಂಗಡಿ ೬ ವರ್ಷ ತಾಲೂಕ ಅಧ್ಯಕ್ಷರಾಗಿ, ೩ ವರ್ಷ ಜಿಲ್ಲಾ ಖಜಾಂಚಿ ಯಾವ ಸಮ್ಮೇಳನ ಮಾಡಿದ್ದಾರೆ, ಎಷ್ಟು ಜನ ಸಾಹಿತಿಗಳನ್ನ, ಕನ್ನಡಪರ ಸಂಘಟಕರನ್ನ ಸನ್ಮಾನಿಸಿದ್ದಾರೆ, ಹಾಗೇ ಕಸಾಪ ಸದಸ್ಯರನ್ನಾಗಿ ಮಾಡಿದ್ದಾರೆ ಎಂಬುದನ್ನು ಜಿಲ್ಲೆಯ ಮತದಾರರು ಅರಿಯಬೇಕು, ಅವರಿಂದ ರಚನಾತ್ಮಕ ಕಾರ್ಯಗಳನ್ನು ಮಾಡಲು ಸಾಧ್ಯವೇ ಇಲ್ಲ, ಜಾತ್ಯಾತೀತ ವ್ಯಕ್ತಿ ಎಂದು ತಮ್ಮಷ್ಟಕ್ಕೆ ತಾವೇ ಹೇಳಿಕೊಳ್ಳುವ ಅವರು ನನ್ನನ್ನು ಕಸಾಪ ದಿಂದ ಹೊರಹಾಕಲು ಹವಣಿಸಿದ್ದು ಯಾಕೆ, ರಾಜಾಬಕ್ಷಿಯಂಥವರನ್ನು ದೂರವಿಟ್ಟಿದ್ದು ಯಾಕೆ. ತಮ್ಮಂತೆ ಕುಣಿಯುವರು ಮಾತ್ರ ಅವರ ಬಳಿ ಇರಬೇಕು ಎಂಬ ರಾಜಕೀಯ ವ್ಯಕ್ತಿಗಳ ದೋರಣೆ ಇರುವ ಇವರು ಕಸಾಪಕ್ಕೆ ಮಾರಕ ಎಂದು ಗೊಂಡಬಾಳ ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಕಟಗೊಂಡ ಪುಸ್ತಕಗಳು ಎಲ್ಲಿ : ಜಿಲ್ಲಾ ಕಸಾಪ ದಿಂದ ಪ್ರಕಟಗೊಂಡ ೧೫ ಕೃತಿಗಳ ಪ್ರತಿಗಳನ್ನು ಯಾರಿಗೆ ಕೊಟ್ಟಿದ್ದಾರೆ, ೩ ವರ್ಷ ಕಾರ್ಯದರ್ಶಿಯಾಗಿದ್ದ ನನಗೆ ಅವುಗಳ ಮುಖವನ್ನು ತೋರಿಸಿಲ್ಲ, ಅವುಗಳನ್ನು ಸಾಹಿತ್ಯ ಭವನದಲ್ಲಿಟ್ಟು ಮಳೆಯ ನೀರಿನಲ್ಲಿ ಹಾಳು ಮಾಡಿದ್ದಾರೆ, ಅದು ಸರ್ಕಾರದ ಹಣದ ಪೋಲು ಎನಿಸಲಿಲ್ಲವೆ, ಅವರನ್ನು ಬೆಂಬಲಿಸಿರುವ ಸಾಹಿತಿಗಳಿಗೆ.
ಅವರ ಅವಧಿಯ ೯ ವರ್ಷಗಳಲ್ಲಿ ಕಸಾಪವನ್ನು ಹೋಬಳಿ ಮಟ್ಟಕ್ಕೆ ಪರಿಚಯಿಸದವರು, ಈಗ ಹೇಗೆ ಪರಿಚಯಿಸುತ್ತಾರೆ. ರಾಜಕೀಯವ್ಯಕ್ತಿಗಳಂತೆ ಚುನಾವಣೆ ಬಂದಾಗೊಮ್ಮೆ ಸುಳ್ಳು ಹೇಳಿ ಮತ ಪಡೆಯುವದು, ಅಧಿಕಾರಕ್ಕೆ ಬಂದು ತಮ್ಮಿಷ್ಟದಂತೆ ನಡೆದುಕೊಳ್ಳುವದು ಸರಿಯಲ್ಲ ಎಂದು ದೂರಿದ್ದಾರೆ. ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ನಡೆಸಿದ ಸಂದರ್ಭದಲ್ಲಿ ತಾವೂ ಕುಷ್ಟಗಿಯಲ್ಲಿ ಕಾರ್ಯಕ್ರಮ ಹಾಕಿಕೊಂಡಿದ್ದರು, ಸಮ್ಮೇಳನಕ್ಕೆ ಶೇಖರಗೌಡ ಮಾಲಿಪಾಟೀಲ ಅವರನ್ನು ಆಹ್ವಾನಿಸಲಾಗಿತ್ತು ಆದರೆ ಅವರು ಕೊಪ್ಪಳದಲ್ಲಿದ್ದರೂ ಸೌಜನ್ಯಕ್ಕೆ ಕಾರ್ಯಕ್ರಮಕ್ಕೆ ಬರಲಿಲ್ಲ, ಬದಲಾಗಿ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನನ್ನನ್ನು ಪರಿಗಣಿಸಲೇ ಇಲ್ಲಎಂಬುದು ದುರಂವೇ ಸರಿ ಎಂದವರು ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಬಲ : ಕಸಾಪ ರಾಜ್ಯಕ್ಕೆ ಸ್ಪರ್ಧಿಸಿರುವ ಖ್ಯಾತ ಚಲನಚಿತ್ರ ನಟ ಹಾಗೂ ಕಾರ್ಮಿಕ ಮುಖಂಡ ಅಶೋಕರವರಿಗೆ ಮತ್ತು ಕೊಪ್ಪಳ ಜಿಲ್ಲೆಗೆ ಸ್ಪರ್ಧಿಸಿರುವ ವೀರಣ್ಣ ನಿಂಗೋಜಿಯವರಿಗೆ ಬೆಂಬಲಿಸುವ ಮೂಲಕ ಜಿಲ್ಲೆಯ ಮರ್ಯಾದೆಯನ್ನು ಆಜೀವ ಸದಸ್ಯರು ಉಳಿಸಬೇಕು ಎಂದು ಅವರು ವಿನಂತಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಕಸಾಪ ಆಜೀವ ಸದಸ್ಯರು ಬೆಂಬಲಿಸಬೇಕೆಂದು ಎಸ್. ವಿ. ಪಾಟೀಲ ಗುಂಡೂರು, ವಾಣಿಶ್ರೀ ಎಸ್. ಪಾಟೀಲ, ವಿಜಯ ಅಮೃತರಾಜ್, ಮಂಜುನಾಥ ಜಿ. ಗೊಂಡಬಾಳ, ಸಿದ್ದಲಿಂಗಯ್ಯ ಹಿರೇಮಠ, ವಿಜಯಾ ಹಿರೇಮಠ, ವೀರಭದ್ರೇಶ್ವರ ಶರಣರು ತಲೆಕಾನಮಠ (ವಿಮತ), ಸಿದ್ದಲಿಂಗೇಶ್ವರಸ್ವಾಮಿ ಕಟಿಗೆಹಳ್ಳಿಮಠ ಕಾರಟಗಿ, ವೆಂಕಾರೆಡ್ಡಿ ಜವಳಗೇರಿ ಗುಂಡೂರು, ಪಂಪನಗೌಡ ಪೋ.ಪಾ. ಗುಂಡೂರು, ಜಿ. ರಾಮಕೃಷ್ಣ ಶ್ರೀರಾಮನಗರ, ಹೆಚ್. ಉಮಾಪತಿ ಸಿದ್ದಾಪೂರ, ಎಂ.ಡಿ.ಸಿರಾಜ್ ಸಿದ್ದಾಪೂರ, ರಮೇಶ ಗಬ್ಬೂರ ಗಂಗಾವತಿ ಇತರರು ಬೆಂಬಲ ವ್ಯಕ್ತಪಡಿಸಿದ್ದಾರೆ.
0 comments:
Post a Comment