ಕೊಪ್ಪಳ ; ಸಾಹಿತ್ಯ ಸಂಸ್ಕೃತಿ ಹಾಗೂ ಸಾಕ್ಷಿ ಪ್ರಜ್ಞೆಯ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಬದವಾಗಿದೆಯಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಅಬ್ಯರ್ಥಿ ಪ್ರೊ. ಚಂಪಾ ಹೇಳಿದರು.
ನಗರದ ಜ. ಚ.ನಿ. ಜನ್ಮ ಶತಮಾನೋತ್ಸವ ಸಭಾಂಗಣದಲ್ಲಿ ಜಿಲ್ಲಾ ಕಸಾಪ ಆಜೀವ ಸದಸ್ಯರ ಹಾಗೂ ಕನ್ನಡ ಅಭಿಮಾನಿಗಳ ಸಭೆಯಮ್ಮು ಉದ್ದೇಶಿಸಿ ಮಾತನಾಡಿದ ಅವರು ಸಾಹಿತ್ಯ ಪರಿಷತ್ ಶತಮಾನೋತ್ಸವ ದತ್ತ ಸಾಗಿದೆ. ಈ ಸಂದರ್ಬದಲ್ಲಿ ಪ್ರಾತಿನಿಧಿಕ ಸಮಿತಿಯನ್ನು ರಚಿಸಿ ಯೋಜನೆಗಳ ಬಗ್ಗೆ ಸರಕಾರಕ್ಕೆ ಮನವರಿಕೆ ಮಾಡಿ ಅರ್ಥಪೂರ್ಣ್‌ಸಮಾರಂಬಗಳನ್ನು ರಾಜ್ಯ ಹಾಗೂ ಹೊರದೇಶಗಳಲ್ಲಿಯೂ ಸಹ ಕನ್ನಡ ಚಟುವಟಿಕೆಗಳ ಬಗ್ಗೆ ತಮ್ಮ ಕಾಲಾವದಿಯಲ್ಲಿ ಅವಕಾಶ ಕಲ್ಪಿಸಲಗುವುದು ಆದ್ದರಿಂದ ನನ್ನನ್ನು ಹಾಗೂ ಜಿಲ್ಲೆಗೆ ಸ್ಪರ್ದಿಸಿದ ವೀರಣ್ಣ ನಿಂಗೋಜಿಯವರನ್ನು ಆಯ್ಕೆಗೊಳಿಸಬೇಕೆಮದು ಕರೆನಿಡಿದರು. ಪರಿಷತ್ತಿನಲ್ಲಿ ಜಾತಿ ಮಾಫಿಯಾವನ್ನು ಹತ್ತಿಕ್ಕಲು ಎಲ್ಲಾ ಸಮುದಾಯದ ಜನರು ಆಜೀವ ಸದಸ್ಯತ್ವವನ್ನು ಪಡೆಯಬೇಕೆಂದರು. ಕ್ರೀಯಾಶಿಲ ಜನರ ಭಾಗವಹಿಸುವಿಕೆಯಿಂದ ಸಾಹಿತ್ಯ ಪರಿಷತ್ತಿನಲ್ಲಿ ಖೊಟ್ಟಿ ಮತದಾನ ತೆಗಟ್ಟಲು ಸಾಧ್ಯವಾಗುವುದು ಎಂದರು.
ಕ.ಸಾ.ಪ. ಮಾಜಿ ಅಧ್ಯಕ್ಷರಾದ ಡಾ. ಕೆ. ಬಿ.ಬ್ಯಾಳಿ, ಸಿ.ಹೆಚ್. ನಾರಿನಾಳ, ಮುನಿಯಪ್ಪ ಹುಬ್ಬಳ್ಳಿ , ಆರ್.ಎಸ್. ಸರಗಣಾಚಾರಿ, ಶ್ರಿಪಾದಪ್ಪ ಅಧಿಕಾರಿ, ಅಮರಪ್ಪ ನಾಲತ್ವಾಡ, ಅಂದಪ್ಪ ಚಿಲಗೋಡ, ಅಜಿಮೀರ ನಂದಾಪೂರ, ಕಳಕೇಶ ಬಳಿಗಾರ ಹಾಗೂ ಇನ್ನಿತರರು ಮಾತನಾಡಿ ಕೇಂದ್ರಕ್ಕೆ ಪ್ರೋ. ಚಂಪಾ ಜಿಲ್ಲೆಗೆ ವೀರಣ್ಣ ನಿಂಗೋಜಿಯವರನ್ನು ಬೆಂಬಲಿಸಲು ಕೋರಿದರು.
ಹೆಚ್.ಎಸ್. ಪಾಟೀಲ, ಶಂಕರ ಹೂಗಾರ, ರವಿತೇಜ ಅಬ್ಬಿಗೇರಿ, ಡಾ ಆರ್.. ಎಮ ಪಾಟೀಲ, ಜಿಲ್ಲಾ ಚು.ಸಾ.ಪ. ಅಧ್ಯಕ್ಷ ಹನುಮಂತಪ್ಪ ಅಂಡಗಿ , ವಿಜಯಾನಂದ ಗದ್ದಿಕೇರಿ, ಎಮ.ಪಿ,ದೊಡ್ಡ್ಮನಿ, ಸುರೇಶ ಮಡಿವಾಳರ, ರಾಮಕೃಷ್ಣ ಬಾವಿಕಟ್ಟಿ, ಎಂ.ಎಂ. ಕಂಬಾಳಿಮಠ, ಮಲ್ಲಪ್ಪ ಹಿರೇವಡೆಯರ, ಅಬ್ದುಲ ರಹೀಮ ಬಳಿಗಾರ, ವೇಮಲಿ, ಅಮರೇಸ ಪಲ್ಲೆಸದ, ಶಿವಪುತ್ರಪ್ಪ ಕಾಡನ್ಣವರ, ಹನಮಂತಪ್ಪ ಉಪ್ಪಾರ, ಶಿವಪುತ್ರಪ್ಪ. ಜಿ, ರವೀಂದ್ರ, ಶರಣಪ್ಪ ಉಮಚಗಿ, ಹಾಗೂ ನೂರಾರು ಅಜೀವ ಸದಸ್ಯರು ಈ ಸಭೆಯಲ್ಲಿ ಉಪಸ್ಥಿತರಿದ್ದರು.
ನಿವೃತ್ತ ಪ್ರ್ರಾಚಾರ್ಯರಾದ ಅಲ್ಲಮಪ್ರಬು ಬೆಟದೂರ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷಸ್ಥಾನದ ಅಬ್ಯರ್ಥಿ ವೀರಣ್ಣ ನಿಂಗೋಜಿ ಸ್ವಾಗತಿಸಿದರು. ಸಾಹಿತಿ ಅಕ್ಬರ ಸಿ. ಕಾಲಿಮಿರ್ಚಿ ವಂದಿಸಿದರು.
0 comments:
Post a Comment