PLEASE LOGIN TO KANNADANET.COM FOR REGULAR NEWS-UPDATES


ಬೆಂಗಳೂರು, ಎ.1: ಬ್ರಾಹ್ಮಣ ಸಮುದಾಯಕ್ಕೆ ದಲಿತ ಸಮುದಾಯದವರು ಗಾಯತ್ರಿ ಮಂತ್ರ ಬೋಧಿಸುವ ಕಾಲ ಬರಬೇಕಾಗಿದೆ ಎಂದು ಹಿರಿಯ ಸಾಹಿತಿ ದೇವನೂರು ಮಹಾದೇವ ಆಶಿಸಿದ್ದಾರೆ. ಇತ್ತೀಚೆಗೆ ಯು.ಆರ್. ಅನಂತಮೂರ್ತಿ ಆರೋಗ್ಯ ಸರಿಯಿಲ್ಲದೆ ಪ್ರಜ್ಞಾಹೀನರಾಗಿ ಮಲಗಿದ್ದರಂತೆ. ಅಂಥ ಸ್ಥಿತಿಯಲ್ಲಿ ಅವರಿಗೆ ಕನಸೊಂದು ಬಿದ್ದು, ಆ ಕನಸಿನಲ್ಲಿ ಅವರು ತನಗೆ ಗಾಯತ್ರಿ ಮಂತ್ರವನ್ನು ಬೋಧಿಸಿದ ಪ್ರಸಂಗ ನಡೆಯಿತಂತೆ. ಕನಸಿನಿಂದ ಎಚ್ಚರವಾದ ತಕ್ಷಣವೇ ಈ ವಿಚಾರವನ್ನು ಅನಂತಮೂರ್ತಿ ತನ್ನೊಂದಿಗೆ ಹಂಚಿಕೊಂಡರು. ನಾನು ‘ನೀವು ಕನಸಿನಲ್ಲಿಯೂ ನನ್ನಿಂದ ಗಾಯತ್ರಿ ಮಂತ್ರದ ಬೋಧನೆ ಪಡೆಯಬೇಕಾಗಿತ್ತು’ ಎಂದು ನನ್ನ ಅಳಲನ್ನು ತೋಡಿಕೊಂಡೆ.
ಅನಂತಮೂರ್ತಿಯವರ ಈ ಕನಸು ಕೆಳವರ್ಗದವರ ಮೇಲೆ ಬ್ರಾಹ್ಮಣರ ಬ್ರಾಹ್ಮಣ್ಯ ಜೀವಂತವಾಗಿರುವುದರ ಸಂಕೇತದಂತೆ ನನಗೆ ಕಂಡಿತು. ಈ ಬ್ರಾಹ್ಮಣ್ಯ ನಶಿಸಿ ದಲಿತರು ಮೇಲ್ವರ್ಗದವರಿಗೆ ಗಾಯತ್ರಿ ಬೋಧಿಸುವ ಕಾಲ ಬರಲಿ ಎಂದು ಆಶಿಸಿದರು.
 ಇದಕ್ಕೆ ತಮ್ಮ ಭಾಷಣದಲ್ಲಿ ಪ್ರತಿಕ್ರಿಯೆ ನೀಡಿದ ಅನಂತಮೂರ್ತಿಯವರು, ಆ ಕನಸು ಬೀಳಲು ಕಾರಣವೇನು ಎಂದು ಗೊತ್ತಿಲ್ಲ. ಆದರೆ, ಅದು ನನ್ನೊಳಗಿನ ಅಹಂಕಾರವನ್ನು ಪ್ರತಿನಿಧಿಸಿದಂತೆ ನನಗೆ ಕಂಡಿತು. ಒತೆಗೆ ದೇವನೂರರ ಮೇಲಿನ ಪ್ರೀತಿಯೂ ಕಾರಣ. ಏನೇಯಾದರೂ ಮೇಲುವರ್ಗದವರ ತಾರತಮ್ಯ ಜೀವಂತವಾಗಿದೆ ಎಂಬುದುಕ್ಕೆ ಈ ನನ್ನ ಕನಸೇ ಸಾಕ್ಷಿ ಎಂದರು.

Advertisement

0 comments:

Post a Comment

 
Top