ಡಾ.ಎಚ್.ಎಸ್. ರಾಘವೇಂದ್ರ ,
,
ಧಾರವಾಡ: `ಏಕಾಂತದಲ್ಲಿ ಲೀನವಾಗಿ ಲೋಕಾಂತವನ್ನು ಮರೆಯುವ, ಲೋಕಾಂತದಲ್ಲಿ ಲೀನವಾಗಿ ಏಕಾಂತವನ್ನು ಮರೆಯುವ ಬರಹ ಕಾವ್ಯವಾಗುವುದಿಲ್ಲ. ಅದು ಏಕಾಂತ ಹಾಗೂ ಲೋಕಾಂತ ನಡುವಿನ ಸೇತುವೆ ಆಗಬೇಕು` ಎಂದು ಹಿರಿಯ ವಿಮರ್ಶಕ ಡಾ.ಎಚ್.ಎಸ್. ರಾಘವೇಂದ್ರ ರಾವ್ ಸಲಹೆ ನೀಡಿದರು.
ದಿವಂಗತ ವಿಭಾ ತಿರಕಪಡಿ ಸ್ಮರಣಾರ್ಥ ಗದುಗಿನ ಲಡಾಯಿ ಪ್ರಕಾಶನವು ಕವನ ಸಂಕಲನಕ್ಕೆ ನೀಡುವ `ವಿಭಾ ಸಾಹಿತ್ಯ ಪ್ರಶಸ್ತಿ`ಯನ್ನು ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಚನ್ನಪ್ಪ ಅಂಗಡಿ ಅವರಿಗೆ ಭಾನುವಾರ ಪ್ರದಾನ ಮಾಡಿ ಅವರು ಮಾತನಾಡಿದರು.
`ಅರ್ಥದ ದಾರಿ, ನಾದದ ದಾರಿ ಹಾಗೂ ರೂಪಕಗಳ ದಾರಿಗಳು ಏಕಕಾಲದಲ್ಲಿ ಮೇಳೈಸಿದ ಕಾವ್ಯ, ಕಾಲಬದ್ಧವಾಗಿಯೂ ಕಾಲಾತೀತವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.ವಿಭಾ ಸಾಹಿತ್ಯ ಪ್ರಶಸ್ತಿ ಪಡೆದ ಚನ್ನಪ್ಪ ಅಂಗಡಿ ಅವರ `ಭೂಮಿ ತಿರುಗುವ ಶಬ್ದ` ಕವನ ಸಂಕಲನವನ್ನು ಹಿರಿಯ ಕವಿ ಎಸ್.ಜಿ. ಸಿದ್ಧರಾಮಯ್ಯ ಬಿಡುಗಡೆ ಮಾಡಿ ಮಾತನಾಡಿ, ಜಾಗತೀಕರಣ ಹುಟ್ಟುಹಾಕಿದ ಸಾಂಸ್ಕೃತಿಕ ಬಿಕ್ಕಟ್ಟುಗಳಿಗೆ ದೇಸಿ ಸಂವೇದನೆಯಲ್ಲಿ ಪರ್ಯಾಯ ಗುರುತಿಸಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಕವಯಿತ್ರಿ ಸವಿತಾ ನಾಗಭೂಷಣ, ಪ್ರತಿಯೊಬ್ಬ ಕವಿಗೆ ಬೇರೆ ಭಾಷೆಯೇ ಇರುತ್ತದೆ. ಅದು ಆಯಾ ಕವಿಯ ಹೃದಯ ಭಾಷೆ ಎಂದರು.ಲಡಾಯಿ ಪ್ರಕಾಶನದ ಬಸೂ, ಪ್ರಶಸ್ತಿ ಸಮಿತಿ ಸಂಚಾಲಕಿ ಸುನಂದಾ ಕಡಮೆ ವೇದಿಕೆ ಮೇಲಿದ್ದರು. ಕೃಪೆ : ಪ್ರಜಾವಾಣಿ
0 comments:
Post a Comment