PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಭಾಗ್ಯನಗರ  ಮಧ್ಯದ  ರ‍್ವೇಲೆ ಲೆವಲ್  ಕ್ರಾಸಿಂಗ  ಸಂಖ್ಯೆ ೬೨ ಕ್ಕೆ ಮೇಲ್ಸೇತುವೆ / ಕೆಳಸೆತುವೆ  ಶಿಘ್ರ ಕಾಮಗಾರಿ  ಪ್ರಾರಂಭಕ್ಕೆ  ಒತ್ತಾಯ
  ಕೊಪ್ಪಳ - ಭಾಗ್ಯನಗರ ಮಧ್ಯ ಬರುವ ರ‍್ವೇಲೆ ಗೇಟ್ ಸಂಖ್ಯೆ ೬೨ ಕ್ಕೆ   ಮೇಲ್ಸೇತುವೆ ನಿರ್ಮಿಸುವಂತೆ ನಮ್ಮ ಹೋರಾಟ ಸಮೀತಿ ವತಿಯಿಂದ ದಿನಾಂಕ ೨೬/೦೭/೨೦೦೬ ರಿಂದ ೦೪/೦೯/೨೦೦೬ ರವರೆಗೆ  ೪೧ ದಿನ ಸದರಿ ಉಪವಾಸ ಸತ್ಯಾಗ್ರಹ ನೇಡಸಲಾಗಿತ್ತು. ನಂತರ, ರಾಜ್ಯ ಸರ್ಕಾರವು ತನ್ನ ಪಾಲಿನ ರೂ ೨,೫ಕೋಟಗಳನ್ನು ದಿನಾಂಕ ೧೮/೧೨/೨೦೦೬ ರಂದು ಸರ್ಕಾರಿ ಆದೇಶ ಸಂಖ್ಯೆ ಐ.ಡಿ.ಡಿ/೧೨೬/ ಓSW/೨೦೦೬ ರ ಪ್ರಕಾರ ಬೀಡುಗಡೆ ಮಾಡಿರುತ್ತದೆ. ಕೇಂದ್ರ ಸರ್ಕಾರವು ೨೦೦೮ ಮತ್ತು ೨೦೦೯ ರ ರೇಲ್ವೇ ಬಜೆಟನಲ್ಲಿ ೪.೩ ಕೋಟಿ ಹಣ ಬಿಡುಗಡೆ ಮಾಡಿದ್ದು. ಒಟ್ಟು ರೂ ೬.೫೩ ಕೋಟಿ  ಮಂಜೂರಾಗಿರುತ್ತದೆ.
ಹಣ ಬಿಡುಗಡೆಯಾಗಿ, ಅನೇಕ ತಿಂಗಳುಗಳು  ಕಳೆದರು ಸಹ, ರೇಲ್ಲೇ ಇಲಾಖೆ ಇಲ್ಲ ಸಲ್ಲದ  ಕಾರಣಗಳನ್ನು ಮುಂದೆ ಮಾಡಿ ಕಾಮಗಾರಿಯನ್ನು  ಪ್ರಾರಂಭಿಸುವದನ್ನು ಮುಂದೆ ಹಾಕುತ್ತಾ ಬಂದಿರುತ್ತದೆ. ಈ ಬಗ್ಗೆ ಹೋರಾಟ ಸಮೀತಿಯವರು ಹಲಾವಾರು ಬಾರಿ ಸಂಭಂದಿಸಿದ ಅಧಿಕಾರಿಗಳನ್ನು ಬೇಟಿ ಕೊಟ್ಟು  ಒತ್ತಾಯಿಸಿದಾಗ ಅವರಿಂದ ಹಾರಿಕೆಯ ಉತ್ತರ ಬಂದಿರುತ್ತದೆ. ರೇಲ್ವೇ ಇಲಾಖೆಯ ಈ ದಿವ್ಯ ನಿರ್ಲಕ್ಷದಿಂದಾಗಿ ಭಾಗ್ಯನಗರ- ಕೊಪ್ಪಳ ಜನತೆ  ತೀವ್ರ ತೊಂದರೆ ಅನುಭವಿಸುವದಂತಾಗಿದೆ 
ಇದೆ ದಿನಾಂಕ ೦೭/೦೩/೨೦೧೨ ರಂದು  ಹುಬ್ಬಳಿಯ ರೇಲ್ವೇ ವಲಯ ಕಛೇರಿಯಲ್ಲಿ  ಈ ಕುರಿತು  ನಿರ್ಣಯಕ್ಕೆ  ಸಭೆ ಕರೆದಿರುವದಾಗಿ ತಿಳದಿದೆ. ಕಾರಣ, ಸದರಿ ದಿನದಂದು ನೆಡೆಯುವ ಸಭೆಯಲ್ಲಿ  ಬಹು ದಿನದ ಸಮಸ್ಯೆಯ ಇತ್ಯರ್ಥಕ್ಕಾಗಿ ಪರಿಹಾರ  ಕಂಡು ಕೊಳ್ಳಬೇಕೆಂದು ರ‍್ವೆಲ್ವೇ  ಗೇಟ್ ನಂಬರ ೬೨ ಮೇಲ್ಸೇತುವೆ ಹೋರಾಟ ಸಮಿತಿ ಒತ್ತಾಯಿಸಿದೆ

Advertisement

0 comments:

Post a Comment

 
Top