ಕೊಪ್ಪಳ : ನಮ್ಮ ಕೊಪ್ಪಳ ಹೋರಾಟದ ನೆಲೆ ಬೀಡು. ಇಲ್ಲಿ ಸಾಕಷ್ಟು ಪ್ರತಿಭಾವಂತ ಸಾಹಿತಿಗಳಿದ್ದಾರೆ.ಇಡೀ ಕನ್ನಡ ಸಾರಸ್ವತ ಲೋಕವನ್ನು ಪ್ರತಿನಿಧಿಸುವ ಕನ್ನಡ ಸಾಹಿತ್ಯ ಪರಿಷತ್ ಜಾತಿ,ಪಂಗಡಗಳನ್ನು ಮೀರಿ ಬೆಳೆಯಬೇಕಿದೆ. ಎಲ್ಲ ಜನಸಾಮಾನ್ಯರನ್ನೂ ತಲುಪಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರನ್ನೂ ಒಂದುಗೂಡಿಸಿಕೊಂಡು ಕೆಲಸ ಮಾಡುವ, ಹೋರಾಟ ಮಾಡುವ ಮತ್ತು ಎಲ್ಲರಿಗೂ ಸೂಕ್ತ ವೇದಿಕೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ, ವಿವಿಧ ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುತ್ತಿರುವ ನಾನು ಸಾಹಿತ್ಯ, ಶಿಕ್ಷಣ,ಸಂಗೀತ , ಜಾನಪದ ಕಲೆಗಳನ್ನು ಬೆಳೆಸಲು ಪ್ರಯತ್ನಿಸುತ್ತೇನೆ . ಜಿಲ್ಲೆಯಲ್ಲಿ ನನ್ನನ್ನು ಮತ್ತು ರಾಜ್ಯಕ್ಕೆ ಚಂಪಾರನ್ನು ಆಯ್ಕೆ ಮಾಡಬೇಕೆಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ವೀರಣ್ಣ ನಿಂಗೋಜಿ ಹೇಳಿದರು. ಅವರು ಕನ್ನಡನೆಟ್ ಡಾಟ್ ಕಾಂ ಕವಿಸಮೂಹ ನಗರದ ಈಶ್ವರ ಗುಡಿಯ ಪ್ರಾಂಗಣದಲ್ಲಿ ಹಮ್ಮಿಕೊಂಡಿದ್ದ ೯೫ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ ಡಾ.ಮಹಾಂತೇಶ ಮಲ್ಲನಗೌಡರ -ಪ್ರೇಯಸಿಗೆ, ವೀರಣ್ಣ ಹುರಕಡ್ಲಿ- ಕಾಲನಿಗೆ ಗೊತ್ತಿಲ್ಲ, ಬಸವರಾಜ ಸಂಕನಗೌಡರ-ಕನ್ನಡ ಶಾಹಿರಿಗಳು, ಎ.ಪಿ.ಅಂಗಡಿ- ಬೇಲಿ ಇಲ್ಲದ ಹೊಲ, ಪುಷ್ಪಾವತಿ-ಮಾತಾ ಮಹತ್ವ, ಪುಷ್ಪಲತಾ ಏಳುಬಾವಿ- ಕೈ ಮುಗಿಯುವೆನಮ್ಮ, ನೀಲಿ, ವಿಜಯಲಕ್ಷ್ಮೀ ಮಠದ- ಬೆಳದಿಂಗಳು, ನಾನು, ಡಾ.ರೇಣುಕಾ ಕರಿಗಾರ-ಪಾರು ಮಾಡು, ಶಾಂತಾದೇವಿ ಹಿರೇಮಠ-ಆಧುನಿಕ ಗಾದೆಗಳು, ಎನ್.ಜಡೆಯಪ್ಪ-ದಾಳ ನಾನಾಗಲಾರೆ, ವಾಸುದೇವ ಕುಲಕರ್ಣಿ-ವಕೀಲರದ ದುಂಡಾವರ್ತನೆ, ಮಹೇಶ ಬಳ್ಳಾರಿ- ಕಾಲ, ಇದು ಹೀಗೆಯೇ, ಕರಿಸಿದ್ದನಗೌಡ ಮಾಲಿ ಪಾಟೀಲ್- ನಾಯಿ ಗಂಡ, ಸ್ಥಾನ ಮಹಿಮೆ, ರಾಜೇಶ ಮುತ್ತಾಳ- ಕರಿಕೋಟು, ನಟರಾಜ ಸವಡಿ- ಸ್ನೇಹ ಬಣ್ಣ, ಎಸ್.ಎಂ.ಕಂಬಾಳಿಮಠ-ಕವಿಸಮಯ, ಶಾಂತು ಬಡಿಗೇರ-ನನ್ನ ಮಲ್ಲಿಗೆ, ಅಲ್ಲಮಪ್ರಭು ಬೆಟ್ಟದೂರು-ಆದ್ಯತೆ, ಪ್ರೀತಿ, ದಿ.ಬಾಬುಸಾಬ ಬಿಸರಳ್ಳಿಯವರ ೬೦ನೇ ಹುಟ್ಟುಹಬ್ಬದ ನಿಮಿತ್ಯ ಅವರ ಕಾಲ ಮತ್ತು ಚಿಂತನ ಕವನಗಳನ್ನು ಸಿರಾಜ್ ಬಿಸರಳ್ಳಿ ವಾಚನ ಮಾಡಿದರು. ಕಾರ್‍ಯಕ್ರಮದಲ್ಲಿ ಬಸವರಾಜ್ ಶೀಲವಂತರ, ರಾಕೇಶ ಕಾಂಬ್ಳೆಕರ, ಕೃಷ್ಣ ಸಂಗಟಿ, ಎಸ್.ವಿ.ಮ್ಯಾಳಿ, ಯಶವಂತ್, ಶಿವಪ್ರಸಾದ ಹಾದಿಮನಿ,ಅನಸೂಯಾ ಜಾಗೀರದಾರ,ಸುಮಂಗಲಾ ಪಿ.ವಿ, ನೇತ್ರಾವತಿ ಆರ್, ರತ್ನಾ ಟಿ.ಕೆ, ಉಮಾದೇವಿ ವಾಯ್.ಸಿ, ಸುಮಾ ಜಿ, ಅನಿತಾ ಬಿ.ಪಿ, ರತ್ನ ಬಿ ಉಪಸ್ಥಿತರಿದ್ದರು.
ಕಾರ್‍ಯಕ್ರಮದ ಸ್ವಾಗತವನ್ನು ಡಾ.ಮಹಾಂತೇಶ ಮಲ್ಲನಗೌಡರ, ವಂದನಾರ್ಪಣೆಯನ್ನು ಮಹೇಶ ಬಳ್ಳಾರಿ ಮಾಡಿದರೆ ಕಾರ್‍ಯಕ್ರಮವನ್ನು ಸಿರಾಜ್ ಬಿಸರಳ್ಳಿ ನಡೆಸಿಕೊಟ್ಟರು.
0 comments:
Post a Comment