ಕೊಪ್ಪಳ ಜಿಲ್ಲೆಯಾಗಿ ಹದಿನಾಲ್ಕು ವರ್ಷಗಳು ಕಳೆದರೂ ರೈಲ್ವೆ ನಿಲ್ದಾಣ ಮಾತ್ರ ಹಿಂದಿನ ಬ್ರಿಟಿಷರ ಕಾಲದ ಮಾದರಿಯಲ್ಲಿಯೇ ಇದೆ. ರೈಲಿನಲ್ಲಿ ಸಂಚರಿಸುವ ಜನರ ಸಂಖ್ಯೆ ದಿನೆ ದಿನೆ ಹೆಚ್ಚುತ್ತಿದ್ದರೂ, ಜನರಿಗೆ ಬೇಕಾದ ಕನಿಷ್ಟ ಸೌಲಭ್ಯಗಳು ಕಲ್ಪಿಸುತ್ತಿಲ್ಲ. ಬಸ್ ದರ ಹೆಚ್ಚುತ್ತಿರುವದರಿಂದ ರೈಲು ಸಂಚಾರವನ್ನು ಹೆಚ್ಚಿನ ಜನ ಅವಲಂಬಿಸುತ್ತಿದ್ದಾರೆ. ಆದರೂ ಕೇಂದ್ರ ಸರ್ಕಾರ ಕೊಪ್ಪಳ ರೈಲು ನಿಲ್ದಾಣಕ್ಕೆ ಇನ್ನೂವರೆಗೂ ಮೂಲಭೂತ ಸೌಲಭ್ಯಗಳಿಗೆ ಮತ್ತು ಅಭಿವೃದ್ಧಿಗೆ ಸಂಪೂರ್ಣವಾಗಿ ನಿರ್ಲಕ್ಷಿಸಿದೆ.
ಪ್ಲಾಟ್‌ಫಾರ್ಮ್-೨, ನಿಲ್ದಾಣದಲ್ಲಿ ಮೇಲಸೇತುವೆ (ಫುಟ್ ಓವರ್ ಬ್ರಿಡ್ಜ್) ಶುದ್ಧ ಕುಡಿಯುವ ಸಿಹಿ ನೀರು ಪೂರೈಕೆ, ಪಾರ್ಕಿಂಗ್ ಜಾಗೆ ವಿಸ್ತಿರ್ಣೆ, ಆಟೋ ರಿಕ್ಷಾ ನಿಲ್ದಾಣ, ಸಿ.ಟಿ.ಬಸ್ ನಿಲ್ದಾಣಗಳ ವಿಸ್ತರಣೆ, ವಿಶ್ರಾಂತಿ ಗೃಹ, ಮೂತ್ರಾಲಯ, ಶೌಚಾಲಯ ವ್ಯವಸ್ಥೆ ಮಾಡಬೇಕು, ಡಿಜಿಟಲ್ ಕೋಚ್ ಪೊಜಿಶನ್ (ಯಾವ ಗಾಡಿಯ ಬೋಗಿ ಎಲ್ಲಿ ಬಂದು ನಿಲ್ಲುತ್ತದೆಂಬ ಸೂಚಿಸುವ ವ್ಯವಸ್ಥೆ) ಶೆಲ್ಟರ್ ವಿಸ್ತರ್ಣೆ (ಮೇಲ ಛಾವಣಿ), ಹೊಸ ಮಾದರಿಯ ವಸತಿ ಗೃಹಗಳ ನಿರ್ಮಾಣ, ನಿಲ್ದಾಣ ಮುಂದೆ ಸ್ವಾಗತ ಕಮಾನ ಫಲಕ ನಿರ್ಮಿಸಿಬೇಕು.
ಸುಮಾರು ಎರಡು ದಶಕಗಳನ್ನು ಕಳೆದರೂ ಗಿಣಗೇರಾ-ಮಹೆಬೂಬನಗರ ಹೊಸ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಅನೇಕ ನೆಪಗಳನ್ನು ಹೇಳುತ್ತ ಕುಂಟುತ್ತ ಸಾಗಿದನ್ನು ಮತ್ತು ಗುಂತಕಲ್-ಲೋಂಡ ರೈಲು ಜೋಡಿ ಮಾರ್ಗ ನಿರ್ಮಾಣ ಕಾಮಗಾರಿ ಹುಬ್ಬಳ್ಳಿ ಹತ್ತಿರದ ಹೆಬಸೂರ ದಿಂದ ಹೊಸಪೇಟೆಯವರೆಗೆ ಕೆಲಸನೇ ನಡೆದಿಲ್ಲ. ಕೊಪ್ಪಳ ನಗರದ ಗೇಟ್ ನಂ. ೬೪ ರಲ್ಲಿ ಮೇಲ್‌ಸೇತುವೆ / ಕೆಳಸೇತುವೆ ನಿರ್ಮಿಸುವುದು, ಇವುಗಳನ್ನು ಕಾಲಮಿತಿ ಯೋಜನೆಯಲ್ಲಿ ತೆಗದುಕೊಂಡು ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಬೇಕು.
ಹೆಚ್ಚುವರಿ ರೈಲುಗಳನ್ನು ಬಿಜಾಪೂರ-ಗುಂತಕಲ್, ವಾಯ ಗದಗ, ಕೊಪ್ಪಳ, ಬಳ್ಳಾರಿ ಮಾರ್ಗವಾಗಿ, ಮದ್ರಾಸ್-ಬಾಂಬೆ (ವಾಯ ಗುಂತಕಲ್, ಬಳ್ಳಾರಿ, ಕೊಪ್ಪಳ, ಗದಗ, ಬಿಜಾಪೂರ ಮಾರ್ಗವಾಗಿ) ಸೋಲಾಪೂರ-ಗುಂತಕಲ್, ( ವಾಯ ಗದಗ, ಕೊಪ್ಪಳ, ಬಳ್ಳಾರಿ ಮಾರ್ಗವಾಗಿ) ಬಿಜಾಪೂರ-ಬಳ್ಳಾರಿ ಇಂಟರ್‌ಸಿಟಿ ರೈಲು (ವಾಯ ಗದಗ, ಕೊಪ್ಪಳ ಮಾರ್ಗವಾಗಿ), ವಾಸ್ಕೋ-ಮದ್ರಾಸ (ಚೆನ್ನೈ) (ವಾಯ ಹುಬ್ಬಳ್ಳಿ, ಕೊಪ್ಪಳ, ಬಳ್ಳಾರಿ, ಗುಂತಕಲ್) ಮಾರ್ಗವಾಗಿ ಮುಂತಾದ ರೈಲುಗನ್ನು ಸಮಯ ಹೊಂದಾಣಿಕೆ ಮಾಡಿಕೊಂಡು ಸಂಚರಿಸಿದರೆ ಈ ಭಾಗದ ಜಿಲ್ಲೆಗಳು ಆಥಿಕವಾಗಿ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಈ ನಮ್ಮ ನ್ಯಾಯಬದ್ದ ಬೇಡಿಕೆಗಳನ್ನು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಸೇರಿಸಿ ಈಡೇರಿಸಲು ಒತ್ತಾಯಿಸಿ ರೈಲ್ವೆ ಜನಪರ ಹೋರಾಟ ಸಮಿತಿ ಕೊಪ್ಪಳ ರೈಲ್ವೆ ನಿಲ್ದಾಣದ ಪ್ರಬಂಧಕ ಪಿ.ಟಿ.ನಾಯಕ್ ಅವರಿಗೆ ನಿಯೋಗ ಮನವಿ ಪತ್ರ ಅರ್ಪಿಸಿದೆ. ನಮ್ಮ ಬೇಡಿಕೆಗಳನ್ನು ಈಡೇರಿಸದೇ ಹೋದರೆ ಮುಂದೆ ವಿವಿಧ ಹಂತದ ಹೋರಾಟಗಳನ್ನು ಆರಂಭಿಸಬೇಕಾಗುತ್ತದೆ
ನಿಯೋಗದಲ್ಲಿ ಜನಪರ ರೈಲ್ವೆ ಹೋರಾಟ ಸಮಿತಿಯ ಅಧ್ಯಕ್ಷ ಎಸ್.ಎ.ಗಫಾರ್, ಭಾರತ ಕಮ್ಯೂನಿಸ್ಟ್ ಪಕ್ಷದ ರಾಜ್ಯ ಸಹ ಕಾರ್ಯದರ್ಶಿ ಶೌಕತ್ ಅಲಿ ಆಲೂರ, ಏ.ಐ.ಟಿ.ಯು.ಸಿ. ಜಿಲ್ಲಾಧ್ಯಕ್ಷರು ಬಸವರಾಜ ಶೀಲವಂತರ್, ಕರ್ನಾಟಕ ರಾಜ್ಯ ಕೃಷಿ ಕಾರ್ಮಿಕರ ಸಂಘದ ರಾಜ್ಯ ಸಂಚಾಲಕ ಡಾ: ಕೆ.ಎಸ್. ಜನಾರ್ಧನ, ವೆಂಕಟರಾಮ, ಗಾಳೆಪ್ಪ ಮುಂಗೋಲಿ, ಶಿವಾನಂದ ಹೋದ್ಲೂರ, ಏ.ಬಿ.ದಿಂಡೂರ, ರಮೇಶ ಚಿಕೆನಕೊಪ್ಪ, ಮುಮ್‌ತಾಜ್, ಸುಮಿತ್ರಾ, ವಿಜಯಲಕ್ಷ್ಮೀ, ಶೈಲಾ ಶಶಿಮಠ ಮುಂತಾದವರು ಭಾಗವಹಿಸಿದರು.
0 comments:
Post a Comment