PLEASE LOGIN TO KANNADANET.COM FOR REGULAR NEWS-UPDATES


  :ಲೋಕೋಪಯೋಗಿ ಇಲಾಖೆಯು ಪ್ರತಿ ವರ್ಷದಂತೆ ಈ ವರ್ಷವೂ ಫೆ. ೨೨ ರಿಂದ ೨೪ ರವರೆಗೆ ಎರಡು ದಿನಗಳ ಕಾಲ ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆ ಮೇಲೆ ವಾಹನ ಸಂಚಾರ ಮಾದರಿ ಸಮೀಕ್ಷಾ ಕಾರ್ಯವನ್ನು ಹಮ್ಮಿಕೊಂಡಿದೆ.
  ಈ ಸಮೀಕ್ಷಾ ಕಾರ್ಯದಿಂದ ಸಂಗ್ರಹಿಸಿದ ಮಾಹಿತಿಯನ್ವಯ ಸರ್ಕಾರಕ್ಕೆ ರಸ್ತೆಗಳ ಸಂಚಾರ ಸಾಂದ್ರತೆ, ಸಂಚಾರ ತೀವ್ರತೆ ಕಂಡು ಹಿಡಿಯಲು ಅಲ್ಲದೆ ರಸ್ತೆಗಳ ಅಗಲಳತೆ ನಿರ್ಧರಿಸುವುದು, ರಸ್ತೆಗಳನ್ನು ಮೇಲ್ದರ್ಜೆಗೇರಿಸುವುದು ಮತ್ತು ರಸ್ತೆಗಳ ಸ್ಥಿತಿಗತಿ ಸುಧಾರಿಸಲು ಅನುಕೂಲವಾಗಲಿದೆ.  ಫೆ. ೨೨ ರಂದು ಬೆಳಿಗ್ಗೆ ೬ ಗಂಟೆಯಿಂದ ಫೆ. ೨೪ ರ ಬೆಳಿಗ್ಗೆ ೦೬ ಗಂಟೆಯವರೆಗೆ ರಾಜ್ಯಾದ್ಯಂತ ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ಸ್ಥಾಪಿಸಲಾಗುವ ಗಣತಿ ಕೇಂದ್ರಗಳಲ್ಲಿ ನಡೆಸಲಾಗುವುದು.  ಈ ಗಣತಿ ಕಾರ್ಯಕ್ಕೆ ಎಲ್ಲಾ ವಾಹನ ಚಾಲಕರ ಹಾಗೂ ಸಾರ್ವಜನಿಕರ ಸಹಾಯ, ಸಹಕಾರ ಅಗತ್ಯವಾಗಿದೆ.  ಸಂಚಾರ ಮಾದರಿ ಸಮೀಕ್ಷೆಗಾಗಿ ಸ್ಥಾಪಿಸಲಾಗುವ ಗಣತಿ ಕೇಂದ್ರಗಳ ಬಳಿ ವಾಹನಗಳ ರಸ್ತೆ ಸಂಚಾರ ಗಣತಿ ಕೇಂದ್ರವಿದೆ, ನಿಮ್ಮ ವಾಹನಗಳನ್ನು ನಿಧಾನವಾಗಿ ಚಲಿಸಿ ಎನ್ನುವ ಸೂಚನಾ ಫಲಕವನ್ನು ಹಾಕಲಾಗುವುದು.  ವಾಹನ ಚಾಲಕರು ಇಂತಹ ಪ್ರದೇಶದಲ್ಲಿ ವಾಹನವನ್ನು ನಿಧಾನವಾಗಿ ಚಲಿಸಿಕೊಂಡು, ಸಂಚಾರ ಮಾದರಿ ಸಮೀಕ್ಷೆಗೆ ಸಹಕರಿಸುವಂತೆ ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ (ಸಂಪರ್ಕ ಮತ್ತು ಕಟ್ಟಡಗಳು) ಇವರು  ತಿಳಿಸಿದ್ದಾರೆ.

Advertisement

0 comments:

Post a Comment

 
Top