PLEASE LOGIN TO KANNADANET.COM FOR REGULAR NEWS-UPDATES


  ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಾಂಗಕ್ಕೆ ಸೇರಿದವರಿಗೆ ನಗರಸಭೆಯ ಪ್ರಸಕ್ತ ಸಾಲಿನ ಅನುದಾನದಲ್ಲಿ ಶೇ. ೨೨. ೭೫ ರ ಯೋಜನೆಯಲ್ಲಿ ವಿವಿಧ ಸೌಲಭ್ಯ ಮಂಜೂರಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
  ಕೊಪ್ಪಳ ನಗರದಲ್ಲಿನ ಪ.ಜಾತಿ, ಪ.ಪಂಗಡದವರಿಗೆ ವಯಕ್ತಿಕ ಶೌಚಾಲಯಕ್ಕಾಗಿ ೧೦ ಲಕ್ಷ ರೂ., ಅಡುಗೆ ಅನಿಲ ಸಂಪರ್ಕ ಕೊಡಿಸುವುದಕ್ಕಾಗಿ- ೧೯. ೯೦ ಲಕ್ಷ ರೂ., ಸ್ವಯಂ ಉದ್ಯೋಗ ಮಾಡಲು ಆರ್ಥಿಕ ನೆರವು ನೀಡುವ ಸಲುವಾಗಿ- ೫ ಲಕ್ಷ ರೂ., ಹಾಗೂ ನಮ್ಮ ಮನೆ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ವಂತಿಕೆ ಭರಿಸಲು ಸಾಧ್ಯವಿಲ್ಲದ ಪ.ಜಾತಿ, ಪ.ಪಂಗಡದ ಫಲಾನುಭವಿಗಳಿಗೆ ಸಹಾಯಧನಕ್ಕಾಗಿ ೧೦ ಲಕ್ಷ ರೂ.ಗಳ ಅನುದಾನವನ್ನು ೨೦೧೧-೧೨ ನೇ ಸಾಲಿನಲ್ಲಿ ಮೀಸಲಿರಿಸಲಾಗಿದೆ.  ಈ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಲು ಚಾಲ್ತಿ ಸಾಲಿನ ಜಾತಿ, ಆದಾಯ ಪ್ರಮಾಣಪತ್ರ, ಕುಟುಂಬ ಪಡಿತರ ಚೀಟಿಯ ಸಂಪೂರ್ಣ ಜೆರಾಕ್ಸ್ ಪ್ರತಿ, ಇತ್ತೀಚಿನ ೩ ಭಾವಚಿತ್ರಗಳು, ಚಾಲ್ತಿ ಸಾಲಿನ ಆಸ್ತಿಕರ ಪಾವತಿ ಮಾಡಿದ ರಸೀದಿ ಹಾಗೂ ನಮೂನೆ-೩ ರ ಪ್ರತಿ, ಚುನಾವಣಾ ಆಯೋಗದ ಗುರುತಿನ ಚೀಟಿ/ ಆಧಾರ್ ಕಾರ್ಡ್, ನಮ್ಮ ಮನೆ ಯೋಜನೆ ವಂತಿಕೆ ಭರಿಸಲು ಸರ್ಕಾರದಿಂದ ನೀಡಿರುವ ಬಿ.ಪಿಎಲ್ ಪಡಿತರ ಚೀಟಿ ಲಗತ್ತಿಸಬೇಕು.  ಸ್ವಯಂ ಉದ್ಯೋಗದ ಆರ್ಥಿಕ ನೆರವು ಪಡೆಯಲು ಸ್ವಯಂ ಉದ್ಯೋಗ ಮಾಡುತ್ತಿರುವ ಬಗ್ಗೆ ಅಂದರೆ ಮೊಬೈಲ್ ರಿಪೇರಿ/ಟಿ.ವಿ. ರಿಪೇರಿ/ಎಲೆಕ್ಟ್ರಿಕಲ್ ಸಾಮಗ್ರಿ ರಿಪೇರಿ ಅಥವಾ ಇನ್ನಿತರೆ ಬಗ್ಗೆ ತರಬೇತಿ ಪಡೆದ ಪ್ರಮಾಣ ಪತ್ರ ಹಾಜರುಪಡಿಸಬೇಕು.  ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಪೌರಾಯುಕ್ತರು, ನಗರಸಭೆ, ಕೊಪ್ಪಳ ಇವರಿಗೆ ಮಾರ್ಚ್ ೧೯ ರ ಒಳಗಾಗಿ ಸಲ್ಲಿಸುವಂತೆ  ತಿಳಿಸಿದೆ.

Advertisement

0 comments:

Post a Comment

 
Top