ಅಖಿಲ ಭಾರತ ಆಕಾಶವಾಣಿಯು ಹಮ್ಮಿಕೊಂಡಿರುವ ಸಾಂಸ್ಕೃತಿಕ ಉತ್ಸವ ಆಕಾಶವಾಣಿ ಹಬ್ಬ ದಲ್ಲಿ ಪಾಲ್ಗೊಂಡ ಹೊಸಪೇಟೆ ಎಫ್ ಎಮ್ ತನ್ನ ಹಬ್ಬದ ಕಾರ್ಯಕ್ರಮಗಳಿಗೆ ಭಾನುವಾರ ೧೨ ರಂದು ಸಂಜೆ, ಹೊಸಪೇಟೆಯ ಕಿರ್ಲೊಸ್ಕರ್ ಆಫೀಸರ್‍ಸ್ ಕ್ಲಬ್ ಆವರಣದಲ್ಲಿ ಚಾಲನೆ ನೀಡಿತು.
ಹಿರಿಯ ಗಾಂಧಿವಾದಿ ಕೆ. ನಾರಾಯಣ ಭಟ್ಟರು ಆಕಾಶಮಲ್ಲಿಗೆ ಸಸ್ಯಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡುತ್ತ ಅವರು ಆಕಾಶವಾಣಿಯು ಸತ್ಯ ವಾಣಿಯಾಗಿದೆ, ಸ್ಫೂರ್ತಿವಾಣಿಯಾಗಿದೆ, ಇದು ಪ್ರದರ್ಶನ ಅಲ್ಲ, ಜೀವನ ದರ್ಶನ, ಆತ್ಮ ದರ್ಶನವನಮ್ನ ಮಾಡಿಸುತ್ತದೆ. ಆಕಾಶವಾಣಿ ಎಂದರೆ ಶಬ್ದದ ಉಪಾಸನೆ. ಸ್ವಾತಂತ್ರ್ಯ ಸಂಗ್ರಾಮ ಹಾಗೂ ಸ್ವಾತಂತ್ರ್ಯೋತ್ತರ ಕಾಲದಲ್ಲಿಯೂ ಆಕಾಶವಾಇಯು ಶಬ್ದಗಳ ಮೂಲಕ ಜನ ನಾಡಿಗಳಲ್ಲಿ ಶಕ್ತಿ ತುಂಬುತ್ತ ಬಂದಿದೆ. ಮನಶುದ್ಧಿಕರಣ ಮಾಡುವ ಕೆಲಸ ಮಾಡಿದೆ,ನಿಲಯ ಎನ್ನುವ ಶಬ್ದವೆ ಆಕಾಶವಾಣಿಯ ಲಯಬದ್ಧತೆಯನ್ನು ಸಾರುತ್ತದೆ, ಇಂಥ ಶ್ರೇಷ್ಠ ಮಾಧ್ಯಮ ಇನ್ನೂ ಹೆಚ್ಚು ರೀತಿಯಲ್ಲಿ ಸಾರ್ಥಕವಾಗಿ ಬೆಳೆಯಲಿ ಎಂದರು.
ಮುಖ್ಯ ಅತಿಥಿಗಳಾಗಿದ್ದ ಕಿರ್ಲೋಸ್ಕರ್ ಫೆರಸ್ ಇಂಡ್ಸ್ಟ್ರೀಸ್‌ನ ಮಾನವ ಸಂಪನ್ಮೂಲ ಭಾಗದ ಉಪಾಧ್ಯಕ್ಷ ಬಿ. ಸತಿಶ ಶೆಟ್ಟಿ ಅವರು ಮಾತನಾಡಿ ಆಕಾಶವಾಣಿ ದೇಶದ ಒಂದು ಪ್ರಬಲ ಮಾಧ್ಯಮ, ಈ ದೇಶದ ಶೇಕಡಾ ತೊಂಬತ್ತರಷ್ಟು ಜನರನ್ನ ತಲುಪುತ್ತಿದೆ, ದ್ರಷ್ಯ ಮಾಧ್ಯಮದ ಪ್ರಬಲ ಪೈಪೋಟಿಯನ್ನೆದುರಿಸಲು ಹೊಸತನದೊಂದಿಗೆ ಎಫ್ ಎಮ್ ಗಳ ಮೂಲಕ ಆಕಾಶವಾಣಿಯು ಮತ್ತೆ ಚೇತರಿಸಿಕೊಳ್ಳುತ್ತಿದ್ದು, ಇನ್ನೂ ಸಾರ್ಥಕ ಸೇವೆ ಮಾಡಬೇಕಿದೆ ಎಂದರು.
ಹೊಪೇಟೆಯ ಮುನೀರ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ಎಂ ನದಾಫ್ ಅವರು ಮಾತನಾಡಿ ಆಕಾಶವಾಣಿಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ಬಿತ್ತರವಾಗುತ್ತಿವೆ, ಸಾಂಸ್ಕೃತಿಕ, ವೈಚಾರಿಕ, ಸುದ್ದಿ, ಮಾಹಿತಿ ಎಲ್ಲವನ್ನೊಳಗೊಂಡ ಉತ್ತಮ ಕಾರ್ಯಕ್ರಮಗಳು ಮೂಡಿಬರುತ್ತಿವೆ, ಆರೋಗ್ಯ ಕುರಿತು ಹೆಚ್ಚು ಹೆಚ್ಚು ಕಾರ್ಯಕ್ರಮಗಳು ಮೂಡಿಬರಬೇಕಿದೆ ಎಂದರು.
ಆಕಾಶವಾಣಿಯ ಅಪರೂಪದ ಭಾವಚಿತ್ರಗಳ ಪ್ರದರ್ಶನ ಆಕಾಶವಾಣಿ ಅಲ್ಬಮ್ನ್ನ ಉದ್ಘಾಟಿಸಿದ, ಆಕಾಶವಾಣಿಯ ಅಭಿಮಾನಿ ಕೇಳುಗ ಜಾಫರ್ ಅವರು ಮಾತನಾಡಿ ಕಳೆದ ಒಂದು ದಶಕದಿಂದಲೂ ಹೊಸಪೇಟೆ ಕಾರ್ಯಕ್ರಮಗಳನ್ನ ಕೇಳುತ್ತಿದ್ದೇನೆ, ರೇಡಿಯೊ ಕೇಳುತ್ತಲೆ ಕೆಲಸ ಮಾಡಬಹುದು, ಅದು ನಮ್ಮ ಬುದ್ಧಿ ಭಾವಗಳನ್ನ ವಿಸ್ತರಿಸಲು ನೆರವಾಗುತ್ತಿದೆ, ಅಪರ ಗೆಳೆಯರ ಬಳಗವನ್ನ ಸೃಷ್ಟಿಸಿದೆ ಎಂದರು. ಆಕಾಶವಾಣಿ ಹಬ್ಬ ಪ್ರತಿ ವರುಷ ನಡೆತಯಲಿ ಎಂದರು.
ಹಬ್ಬದ ಮೊದಲ ಕಾರ್ಯಕ್ರಮವಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲಸಾಹಿತ್ಯ ಪುರಸ್ಕಾರಕ್ಕೆ ಭಾಜನರಾದ ಡಾ. ನಾ ಡಿಸೋಜ ಅವರ ಮಕ್ಕಳ ಕಾದಂಬರಿಗಳನ್ನಾಧರಿಸಿದ ಗೆಳೆಯರ ಬಳಗಕ್ಕೆ ಜೈ ದೃಷ್ಯ ರೂಪಕವನ್ನ ಸಪ್ತಗಿರಿ ಶಾಲೆಯ ಮಕ್ಕಳು ಪ್ರದರ್ಶಿಸಿದರು.
0 comments:
Post a Comment