PLEASE LOGIN TO KANNADANET.COM FOR REGULAR NEWS-UPDATES


ಮ್ಯಾರಾಥಾನ್ ಅಂದರೇ ಏನು ?
ಮ್ಯಾರಾಥಾನ್ ಓಟ ? ಅದು ನಮ್ಮಂತಹ ಹಿಂದುಳಿದ ಜಿಲ್ಲೆಯಲ್ಲಿ ಏರ್ಪಡಿಸುವುದು ಸಾಧ್ಯವೇ? 
ಸಾಧ್ಯವಿದೆ ಎಂದು ಕಳೆದ ನಾಲ್ಕು ವರ್ಷಗಳಿಂದ ಸಾಭೀತ ಮಾಡುತ್ತಿದೆ ಕುಕನೂರಿನ ಕುಶ್ ಸಂಸ್ಥೆ .
ಒಂದುಗೂಡಿ ಜನಪರ ಕೆಲಸ ಮಾಡುವ ಆಸಕ್ತಿ ,ನಿಸ್ವಾರ್ಥ ಸೇವೆ ಮಾಡುವ ಮನೋಧರ್ಮ ಇದ್ದರೆ ಏನೆಲ್ಲಾ ಮಾಡಬಹುದು ಎನ್ನುವದಕ್ಕೆ ಕುಕನೂರಿನ ಕುಶ್ ಸಂಸ್ಥೆ ಒಳ್ಳೆಯ ಉದಾಹರಣೆಯಾಗಿದೆ. ಯಾವುದೇ ಸ್ವಾರ್ಥವಿಲ್ಲದ ಗೆಳೆಯರ ಬಳಗ ಅದಕ್ಕೆಲ್ಲ ಸಹಾಯ, ಸಹಕಾರ ನೀಡಲು ಸಿದ್ದವಾಗಿರುವ ಆರೋಗ್ಯವಂತ ಮನಸ್ಥಿತಿಯ, ದೇಶ ಬಿಟ್ಟು ದೂರ ಇದ್ದರೂ ತನ್ನವರಿಗಾಗಿ ಸಹಾಯ ಮಾಡಬೇಕು ಎನ್ನುವ ದೇಶಪ್ರೇಮಿ ಯುವಕ ಮಹೆಬೂಬ್ ಪಾಷಾರ ಒಟ್ಟು ಪ್ರಯತ್ನವೇ ಕುಶ್ ಸಂಸ್ಥೆ.
ಕುಶ್ (ಕರ್ನಾಟಕ ಕ್ರೀಡೆ ಮತ್ತು ಆರೋಗ್ಯ ಸಂಸ್ಥೆ) ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ರಾಜ್ಯಮಟ್ಟದ ೫ ಕಿ.ಮಿ.ನ ಮ್ಯಾರಾಥಾನ್ ಓಟವನ್ನು ಹಮ್ಮಿಕೊಳ್ಳುತ್ತಿದೆ. ಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಆರೋಗ್ಯವೇ ಭಾಗ್ಯ, ಆರೋಗ್ಯಕ್ಕಾಗಿ ಓಟ ಎನ್ನುವ  ಘೋಷಣೆಗಳಡಿಯಲ್ಲಿ ಪ್ರತಿ ವರ್ಷ ಈ ಮ್ಯಾರಾಥಾನ್ ಹಮ್ಮಿಕೊಳ್ಳಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಈ ಮ್ಯಾರಾಥಾನ್ ನಲ್ಲಿ ಭಾಗವಹಿಸುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕಳೆದ ವರ್ಷ ೫೦೦ಕ್ಕೂ ಹೆಚ್ಚು  ಸ್ಪರ್ಧಾರ್ಥಿಗಳು  ರಾಜ್ಯದ ವಿವಿಧ ಭಾಗದಿಂದ ಈ ಮ್ಯಾರಾಥಾನ್ ನಲ್ಲಿ ಭಾಗವಹಿಸಿದ್ದರು ಎಂದರೇ ಇದರ ಖ್ಯಾತಿಯ ಅರಿವಾದೀತು. ಮಕ್ಕಳಿಗಾಗಿ ೬೦೦ ಮೀಟರ್ ಓಟದ ಸ್ಫರ್ದೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರಲ್ಲೂ ಸಹ ನೂರಾರು ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. 
ಈ ಮ್ಯಾರಾಥಾನ್‌ನ ಖರ್ಚು ವೆಚ್ಚದ  ಸಂಪೂರ್ಣ ಜವಾಬ್ದಾರಿಯನ್ನು ,ಪ್ರಾಯೋಜಕತೆಯನ್ನು  ಅಮೇರಿಕಾದಲ್ಲಿ ನೆಲೆಸಿರುವ ನಮ್ಮ ಭಾನಾಪೂರದವರೇ ಆದ ಮೆಹಬೂಬ ಪಾಷಾ ವಹಿಸಿಕೊಂಡು ಯಶಸ್ವಿಯಾಗಿ ನಿಭಾಯಿಸುತ್ತಾ ಬಂದಿದ್ದಾರೆ. ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಮೆಹಬೂಬ ಪಾಷಾ ಇಂದು ಅಮೇರಿಕಾದ ಎಂಫಸಿಸ್ ಕಂಪನಿಯಲ್ಲಿ ಉತ್ತಮ ಹುದ್ದೆಯಲ್ಲಿದ್ದು  ತಮ್ಮಿಂದ ಸಮಾಜಕ್ಕೆ ಮಾಡಬಹುದಾದ ಎಲ್ಲ ಸೇವೆಯನ್ನು ನಿಸ್ವಾರ್ಥದಿಂದ  ಮಾಡಿಕೊಂಡು ಬರುತ್ತಿದ್ದಾರೆ.  ಇವರಿಗೆ ಕುಕನೂರಿನ ಕುಶ್ ಸಂಸ್ಥೆಯ ಗೆಳೆಯರ ಬಳಗ ಹಾಗೂ ಹಿರಿಯರ ಬೆಂಬಲ, ಸಹಕಾರವಿದೆ. ಅವರೆಲ್ಲರೂ ಮೆಹಬೂಬಪಾಷಾ ಅಮೇರಿಕೆಯಲ್ಲಿದ್ದರೂ ಇಲ್ಲಿ ಮ್ಯಾರಾಥಾನ್ ಸ್ಪರ್ಧೆ ನಡೆಯುವಂತೆ ನೋಡಿಕೊಂಡಿದ್ದಾರೆ.
ಪ್ರತಿ ವರ್ಷ ಮ್ಯಾರಾಥಾನ್ ವಿಜೇತರಿಗೆ ನೀಡುವ ಬಹುಮಾನದ ಮೊತ್ತವನ್ನು ಹೆಚ್ಚಿಸುತ್ತಲೇ ಬಂದಿದ್ದಾರೆ. ಈ ವರ್ಷ ೫ ಕಿ.ಮಿ.ಮ್ಯಾರಾಥಾನ್ ವಿಜೇತರಿಗೆ ಪ್ರಥಮ ರೂ. ೧೦೦೦೦, ದ್ವಿತೀಯ ರೂ.೫೦೦೧ ಹಾಗೂ ತೃತೀಯ ರೂ.೩೦೦೦-೦೦ ಬಹುಮಾನ ನೀಡಲಾಗುತ್ತಿದೆ.ಅದೇ ರೀತಿ ೬೦೦ ಮೀಟದ ಓಟಕ್ಕೆ ಪ್ರಥಮ ರೂ.  ೨೦೦೦ ದ್ವಿತೀಯ ರೂ. ೧೫೦೧ ಹಾಗೂ ತೃತಿಯ  ೧೦೦೧ ರೂ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುತ್ತದೆ.
ಮೆಹಬೂಬ್ ಪಾಷಾ ಕೇವಲ ಮ್ಯಾರಾಥಾನ್ ಅಷ್ಟೇ ಅಲ್ಲದೇ ಹಲವಾರು ಬಡ ಪ್ರತಿಭಾವಂತ ಮಕ್ಕಳಿಗೆ ಓದಲು ಸಹಾಯ ಮಾಡಿದ್ದಾರೆ, ಮಾಡುತ್ತಿದ್ದಾರೆ. ಹಲವಾರು ಜನರಿಗೆ ತಮ್ಮ ಕೈಲಾದ ಸಹಾಯವನ್ನು ನೀಡುತ್ತಿದ್ದಾರೆ. ತಮ್ಮ ಸೇವೆಗೆ ಪ್ರಚಾರ ಬಯಸದ ಮೆಹಬೂಬ ಪಾಷಾ ಎಲೆಯ ಮರೆಯ ಕಾಯಿಯಂತೆ ಸದ್ದುಗದ್ದಲವಿಲ್ಲದೇ ತಮ್ಮ ಸೇವೆಯನ್ನು ನಡೆಸಿಕೊಂಡು ಬಂದಿದ್ದಾರೆ. 
ಈ ವರ್ಷ  ಮೆಹಬೂಬ್ ಪಾಷಾ  ಸ್ವತಃ ಕುಕನೂರಿಗೆ ಬಂದು ಈ ಮ್ಯಾರಾಥಾನ್ ಕಾರ್‍ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ನಾಳೆ ೧೨-೨-೨೦೧೨ ರಂದು ಮ್ಯಾರಾಥಾನ್ ಸ್ಪರ್ಧೆ ನಡೆಯಲಿದೆ.
ಮೆಹಬೂಬ ಪಾಷಾ ಹಾಗೂ ಅವರ ಗೆಳೆಯರ ಬಳಗ,ಕುಶ್ ಸಂಸ್ಥೆಯ ಬೆನ್ನು ತಟ್ಟಿ ಪ್ರೋತ್ಸಾಹಿಸಲು ಕುಕನೂರಿಗೆ ಬನ್ನಿ 
ಎಲ್ಲರೂ ಭಾಗವಹಿಸಿ ... ಮ್ಯಾರಾಥಾನ್ ಯಶಸ್ವಿಗೊಳಿಸಿ !!




 ಹೆಚ್ಚಿನ ವಿವರಗಳಿಗೆ : bpurexpress.blogspot.com, bhanapurexpress.com, bhanapurexpress.blogspot.com  ಗೆ ಭೇಟಿ ನೀಡಿ.

Advertisement

0 comments:

Post a Comment

 
Top