PLEASE LOGIN TO KANNADANET.COM FOR REGULAR NEWS-UPDATES


ಕಾರ್ಖಾನೆಗಳಲ್ಲಿ ಕನ್ನಡಿಗರಿಗರ ಉದ್ಯೋಗ ನಿಡದಿರುವುದನ್ನು ವಿರೋಧಿಸಿ ಕರವೇ ಯಿಂದ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಎದುರಿಗೆ ಪ್ರತಿಭಟನೆ
ಕೊಪ್ಪಳ : ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಘಟಕದಿಂದ ಇಂದು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಎದುರು ರಸ್ತೆ ತಡೆ ಪ್ರತಿಭಟನೆಯನ್ನು  ಹಮ್ಮಿಕೊಳ್ಳಲಾಗಿತ್ತು ಜಿಲ್ಲೆಯಲ್ಲಿ ೨೫ ಕ್ಕೂ ಹೆಚ್ಚು ಕಾರ್ಖಾನೆಗಳೂ ಧಶಕಗಳಿಂದ ಕಾರ್ಯ ನಿರ್ವಹಿಸುತ್ತಿದು. ಕಾರ್ಖಾನೆ ಸ್ಥಾಪಿಸುವಾಗ ನೀಡಿರುವ ಮುಚ್ಚಳಿಕೆಯಂತೆ ಸಾರ್ವಜನಿಕ ಹಿತಾಶಕ್ತಿಯನ್ನು ಬದಿಗೊತ್ತಿ ಗ್ರಾಮಗಳಿಗೆ ಈ ಕಾರ್ಖಾನೆಗಳು ಹೊಲಸು ದೂಳಿನಿಂದ ಗ್ರಾಮೀಣ ಜನರ ಬಧುಕಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಇಷ್ಟೆಲ್ಲ ನಡೆಯುತ್ತಿದರು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯೊಂದಿಗೆ ಶ್ಯಾಮೀಲಾಗಿ ಜನರ ಹಿತಾ ಶಕ್ತಿಯನ್ನು ಬಲಿಕೊಡುತ್ತಿದ್ದೆ. ಈ ವಿಷಯವಾಗಿ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಬಹಳಷ್ಟುಸಲ ಗಮನಕ್ಕೆ ತಂದರು ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ಕರವೇ ಭಲವಾಗಿ ಕಂಡಿಸುತ್ತದೆ. ಕಾರ್ಖಾನೆಗಳನ್ನು ಸ್ಥಾಪಿಸುವಾಗ ಸ್ಥಲಿಯ ಜನರಿಗೆ ಉದ್ಯೊಗ ದೊರಕಿಸಿಕೊಡುವ ಭರವಸೆಯೊಂದಿಗೆ ಸರ್ವಜನಿಕರ ಭೂಮಿ ಮತ್ತ ಸ್ಥಳಿಯ ಜನರ ಭುಮಿಯನ್ನು ವಸಪಡಿಸಿಕೊಂಡು ಕಾರ್ಖಾನೆ ಮಾಲಿಕರು ಸ್ಥಳಿಯರಿಗೆ ಉದ್ಯೋಗ ನಿಡದೆ, ಅನ್ಯರಾಜ್ಯದ ಜನರಿಗೆ ಉದ್ಯೋಗನೀಡುತ್ತಿರುವುದು ಖಂಡನಿಯ. ಡಾ. ಸರೊಜಿನಿ ಮಹಿಸಿ ಅವರ ವರದಿಯಂತೆ ಸ್ಥಳಿಯರಿಗೆ ಶೇಕಡಾ ೮೫ ರಷ್ಠು ಉದ್ಯೊಗಗಳನ್ನು ನಿಡುವ ವ್ಯವಸ್ಥೆಗೊಳಿಸಬೆಕು. ಕಾರ್ಖಾನೆಯವರು ಮೂಲಭೂತ ಸೌಕರ್ಯಗಳನ್ನು ತೊಂದರೆಗೋಳಗಾಗಿರುವ ಗ್ರ್ರಾಮಗಳಿಗೆ ಒದಗಿಸಬೇಕು. ಕಾರ್ಖಾನೆಯ ಮಾಲಿಕರುಗಳು ಜಿಲ್ಲೆಯ ಜನರ ಸಹನೆಯೊಂದಿಗೆ ಚೆಲ್ಲಾಟವಾಡದೆ ಸ್ಥಳಿಯ ಜನರಿಗೆ ಉದ್ಯೋಗ ನೀಡಬೇಕು. ಭಾದಿತ ಗ್ರಾಮಗಳಿಗೆ ಮೂಲಬೂತ ಸೌಕರ್ಯ ವದಗಿಸಿ ಕೊಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ತಾಲುಕ ಘಟಕ ಮತ್ತು ಜಿಲ್ಲಾ ಘಟಕದಿಮದ ಮನವಿ ಪತ್ರವನ್ನು ಸಹಾಯಕ ಆಯುಕ್ತರಿಗೆ ಸಲ್ಲಿಸಲಾಯಿತು. ಈ ಪ್ರತಿಟನೆ ನೇತೃತ್ವವನ್ನು ಜಿಲ್ಲಾಧ್ಯಕ್ಷರಾದಸ ಬಸನಗೌಡ ಪೋಲಿಸಪಾಟೀಲ ತಾಲೂಕ ಕರವೇ ಅಧ್ಯಕ್ಷರಾದ ಶಿವನಗೌಡ ಪಾಟೀಲ ಹಲಗೇರಿ ನಗರ ಅಧ್ಯಕ್ಷರಾದ ಶಿವಶರಣಪ್ಪ ಚಂದನಕಟ್ಟಿ, ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ಗೀರಿಶಾನಂದ ಜ್ಞಾನ ಸುಂದರ ವಹಿಸಿದ್ದರು. ಈ ಸಂದರ್ಭದಲ್ಲಿ ಗೋವಿಂದರಾಜ ಈಳಗೇರ, ಮಾರುತಿ ಹೆಚ್, ಬೀಮಪ್ಪ ಕಿತ್ತೂರ, ನಬೀಸಾಬ ದೋಟಿಹಾಳ, ಹುಚ್ಚನಗೌಡ ಪಾಟೀಲ, ಹನಮಂತಪ್ಪ ಬೆಸ್ತರ, ಗವಿಸಿದ್ದಪ್ಪ ಕರ್ಕಿಹಳ್ಳಿ, ಕರಿಯಪ್ಪ ಡೊಳ್ಳಿನ ಇನ್ನು ಮೂಂತಾದವರು ಭಾಗವಹಿಸಿದ್ದರು. 

Advertisement

0 comments:

Post a Comment

 
Top