ಕೃಪೆ : ಪ್ರಜಾವಾಣಿ |
ಕೊಪ್ಪಳ : ಭಾರತ ದೇಶ ಹಲವು ಜಾತಿ, ಧರ್ಮಗಳಿಂದ ಕೂಡಿದ ರಾಷ್ಟ್ರ. ಜಾತ್ಯತೀತ ಮನೋಭಾವ ಎಲ್ಲ ಭಾರತೀಯರಲ್ಲೂ ಇರಬೇಕು. ಆದರೆ ದೇಶದ ಹಾಗೂ ನಾಡಿನ ಕೆಲ ಕೋಮು ಸಂಘಟನೆಗಳು ರಾಷ್ಟ್ರದಲ್ಲಿನ ಭ್ರಾತೃತ್ವ ಹಾಗೂ ಸೌಹಾರ್ದತೆಯನ್ನು ಕದಡುವ ಕೆಲಸಕ್ಕೆ ಕೈ ಹಾಕುತ್ತಿದ್ದು, ಇಂಥ ಸಂಘಟನೆಗಳನ್ನು ಹಾಗೂ ಇಂಥ ಕೃತ್ಯದಲ್ಲಿ ತೊಡಗಿರುವವರನ್ನು ಬಂಽಸಿ, ಉಗ್ರಶಿಕ್ಷೆ ವಿಽಸುವಂತಾಗಬೇಕು ಎಂದು ಪ್ರಗತಿಪರ ಚಿಂತಕರು ಆಗ್ರಹಿಸಿದ್ದಾರೆ.
ಬಿಜಾಪುರ ಜಿಲ್ಲೆಯ ಸಿಂಧಗಿಯಲ್ಲಿ ಹೊಸ ವರ್ಷದ ದಿನವೇ ಕೋಮು ಸೌಹಾರ್ದತೆಗೆ ಧಕ್ಕೆಯುಂಟು ಮಾಡಿದ ಶ್ರೀ ರಾಮ ಸೇನಾ ಕಾರ್ಯಕರ್ತರು ಕೋಮಿನ ಹೆಸರಿನಲ್ಲಿ ದೇಶದ್ರೋಹದ ಕೃತ್ಯ ಎಸಗಿದ್ದಾರೆ. ಈ ಹಿಂದೆ ಮಂಗಳೂರಿನಲ್ಲಿ ಚರ್ಚ್‌ಗಳ ಮೇಲೆ ದಾಳಿ ಮಾಡಿ ಕೆಂಗಣ್ಣಿಗೆ ಗುರಿಯಾಗಿದ್ದ ಶ್ರೀ ರಾಮಸೇನಾ ಹಾಗೂ ಇತರ ಕೋಮುವಾದಿ ಸಂಘಟನೆಗಳು ಇನ್ನೂ ಪಾಠ ಕಲಿತಿಲ್ಲ. ಪದೇ ಪದೇ ಕೋಮು ಸಾಮರಸ್ಯ ಕದಡುವ ಕೆಲಸಕ್ಕೆ ಕೈ ಹಾಕುತ್ತಿರುವ ಈ ರೀತಿಯ ಸಂಘಟನೆಗಳನ್ನು ರಾಷ್ಟ್ರದಲ್ಲಿ ಬಹಿಷ್ಕರಿಸಬೇಕು ಎಂದು ಅವರು ಕಿಡಿ ಕಾರಿದ್ದಾರೆ.
ರಾಜ್ಯದಲ್ಲಿ ಹಾಗೂ ರಾಷ್ಟ್ರದಲ್ಲಿ ಇಂಥ ಘಟನೆಗಳು ಮರುಕಳಿಸದಂತೆ ಸರಕಾರಗಳು ಕೂಡಾ ಜಾಗೃತಿ ವಹಿಸಬೇಕು. ಭಾರತೀಯರಲ್ಲಿ ಜಾತ್ಯತೀತ ಮನೋಭಾವ ಬೆಳೆಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿರುವ ಪ್ರಗತಿಪರರು, ನಾಡಿನ ಯುವ ಜನರು ಇಂಥ ಸಂಘಟನೆಗಳ ಜೊತೆ ಕೈ ಜೋಡಿಸದೇ, ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಜಾತಿ, ಧರ್ಮಗಳಿಗಿಂತ ಭಾರತೀಯ ಎಂಬ ಕಲ್ಪನೆಗೆ ಪ್ರಾಶಸ್ತ್ಯ ನೀಡುವಂತಾಗಬೇಕು ಎಂದು ಅವರು ತಿಳಿಸಿದ್ದಾರೆ.
ಸಿಂಧಗಿಯ ತಹಶೀಲ್ದಾರ ಕಚೇರಿ ಮೇಲೆ ಪಾಕ್ ಧ್ವಜ ಹಾರಿಸಿ ರಾಜ್ಯದಲ್ಲಿ ಕೋಮುಗಲಭೆ ಆರಂಭಿಸಲು ಹೊಂಚು ಹಾಕಿದ್ದ ಸಂಘಟನೆ ಹಾಗೂ ಕೃತ್ಯದಲ್ಲಿ ಪಾಲ್ಗೊಂಡಿದ್ದ ಕೋಮುವಾದಿಗಳನ್ನು ಶೀಘ್ರವೇ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಇಲಾಖೆಯ ಕಾರ್ಯ ಶ್ಲಾಘನೀಯ. ಬಂಽತರಿಗೆ ಉಗ್ರ ಶಿಕ್ಷೆಯಾಗುವ ಮೂಲಕ ಮುಂದಿನ ದಿನಗಳಲ್ಲಿ ಈ ರೀತಿಯ ಕೃತ್ಯ ಎಸಗುವವರಿಗೆ ಪಾಠ ಕಲಿಸುವಂತಾಗಬೇಕು ಎಂದು ಪ್ರಗತಿಪರ ಚಿಂತಕರಾದ ಮಹಾಂತೇಶ ಹಣದಾಳ, ಸಜ್ಜಾದ್ ಹುಸೇನ್, ಫಾಜೀಲ್ ಪಟೇಲ್, ನಾಗರಾಜ ಕಂದಾರಿ, ಆಸೀಪ್ ಇಕ್ಬಾಲ್, ಚಂದ್ರು ಕರ್ಕಿಹಳ್ಳಿ, ಅಜಿಮುದ್ದಿನ್, ಜಾಕೀರ್ ಹುಸೇನ್, ಜೀನೆಂದ್ರ ದಸ್ತೇನವರ್ ಮತ್ತಿತರರು ಆಗ್ರಹಿಸಿದ್ದಾರೆ.
0 comments:
Post a Comment