ನಾಟಕಗಳು ಹಳ್ಳಿಗಳಲ್ಲಿ ಜನಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿವೆ. ದೊಡ್ಡ ದೊಡ್ಡ ಚಿತ್ರನಟರು ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದೆ ನಾಟಕಗಳಿಂದ. ಹಳ್ಳಿಯ ನಾಟಕಗಳನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಇದು ಜನರಿಗೆ ಜೀವನ ಪ್ರೀತಿಯನ್ನು ಮತ್ತು ಸ್ಪೂರ್ತಿಯನ್ನು ನೀಡುತ್ತಿವೆ ಎಂದು ಸಯ್ಯದ್ ಪೌಂಡೇಷನ್ ಅಧ್ಯಕ್ಷ,ಜೆಡಿಎಸ್ ಮುಖಂಡರಾದ ಕೆ.ಎಂ.ಸಯ್ಯದ್ ಹೇಳಿದರು.
ತಾಲೂಕಿನ ಬೈರಾಪೂರ ಗ್ರಾಮದಲ್ಲಿ ದುರ್ಗಾದೇವಿ ಜಾತ್ರೆಯ ಅಂಗವಾಗಿ ಶ್ರೀ ಮಾರುತೇಶ್ವರ ಯುವ ನಾಟ್ಯ ಸಂಘ ಬೈರಾಪೂರ ಹಮ್ಮಿಕೊಂಡಿದ್ದ 'ಭಂಡ ಧನಿಕರಿಗೆ ಮಿಂಡ ಬಡವ' ಅರ್ಥಾತ್ ನರಹಂತಕರಿಗೆ ನಾಂದಿ ಎನ್ನುವ ಸಾಮಾಜಿಕ ನಾಟಕವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾರ್‍ಯಕ್ರಮದಲ್ಲಿ ಜೆಡಿಎಸ್ ಮುಖಂಡರಾದ ಪ್ರದೀಪಗೌಡ ಮಾಲಿಪಾಟೀಲ್, ಗ್ರಾ.ಪಂ.ಅಧ್ಯಕ್ಷರಾದ ಯಲ್ಲಪ್ಪ ಮುಕ್ಕಣ್ಣವರ ಮಾತನಾಡಿದರು. ಗೋಣೇಶ ಉಪ್ಪಾರ, ಹನುಮಂತಪ್ಪ ಸಂಗಣ್ಣವರ, ಸುಭಾಸ ಮೇಟಿ ಸೇರಿದಂತೆ ಗ್ರಾಮ ಪಂಚಾಯತ್ ಸದಸ್ಯರು, ಊರಿನ ಗುರು ಹಿರಿಯರು ಪಾಲ್ಗೊಂಡಿದ್ದರು.
ಭರ್ಜರಿಯಾಗಿ ನಡೆದ ನಾಟಕ ಜನರ ಮನಸ್ಸನ್ನು ಸೂರೆಗೊಂಡಿತು.
0 comments:
Post a Comment