PLEASE LOGIN TO KANNADANET.COM FOR REGULAR NEWS-UPDATES

                                                                                                                                                                 
 : ಶ್ರೀಧರ ಮೂರ್ತಿ 
ಕೊಪ್ಪಳ,ಜ.  ಸಾದು ಸಂತರಲ್ಲಿ ಅತ್ಯಂತ ಶ್ರೇಷ್ಠರಾದ ಸ್ವಾಮಿ ವಿವೇಕಾನಂದರು ಆದರ್ಶ ವ್ಯಕ್ತಿಯಾಗಿದ್ದರು, ಮಾನವೀಯತೆ, ವಿಚಾರ, ಬುದ್ದಿಶಕ್ತಿ, ಯುವಕರಿಗೆ ಪ್ರೇರಣಾದಾಯಕವಾಗಿದೆ. ಯುವಕರ ನರ ನಾಡಿಯಲ್ಲಿ ಸ್ವಾಮಿ ವಿವೇಕಾನಂದ ವಿಚಾರಗಳು ಸಂಚರಿಸಬೇಕು ಇಂತವರ ಮೌಲ್ಯಗಳನ್ನು ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಮುಖ್ಯಗುರು ಡಿ.ಶ್ರೀಧರ ಮೂರ್ತಿ ಸಲಹೆ ನೀಡಿದರು. 
ಅವರು ಶನಿವಾರದಂದು  ನಗರದ ಬನ್ನಿಕಟ್ಟಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ ೧೫೦ ನೇ ಜಯಂತಿ ವರ್ಷಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಭಾರತ ತಪಸ್ವಿಗಳ ದೇಶ ಪುಣ್ಯ ತಪೋಭೂಮಿ ಸ್ವಾಮಿ ವಿವೇಕಾನಂದರು ಬದುಕಿದ್ದು ಕಡಿಮೆ ಸಾದಿಸಿದ್ದು ಬೆಟ್ಟದಷ್ಟು ಧರ್ಮ ಪ್ರಚಾರದ ಜೋತೆಗೆ ದೇಶ ಕಿರ್ತಿಯನ್ನು ಹೊರದೇಶಕ್ಕೆ ಕೊಂಡೊಯದ ಮಹಾ ಚೇತನ ಅಂತವರು ಹುಟ್ಟಿದ್ದು ನಮ್ಮ ದೇಶ ಇಂದಿನ ಯುವ ಜನರಿಗೆ ದಾರಿ ದೀಪವಾಗಲು ನಾವೆಲ್ಲರೂ ಮಾರ್ಗದರ್ಶನ ಪ್ರೋತ್ಸಾಹ ಪಡೆಯುವುದು ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಪರಮಾನಂದ ಯಾಳಗಿ ಮಾತನಾಡಿ ದೇಶ ಶ್ರೀಮಂತಿಕೆ ಮತ್ತು ಭಾರತ ಸಂಸ್ಕೃತಿಯನ್ನು ಪ್ರಪಂಚದ ಮೂಲೆ ಮೂಲೆಯಲ್ಲಿ ಸಾರಿದ ಮಹಾನ ವ್ಯಕ್ತಿ ಸ್ವಾಮಿ ವಿವೇಕಾನಂದರು ವರ್ಷಕ್ಕೊಮ್ಮೆ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ ಮಾಡಿದರೆ ಸಾಲದು ಅವರು ನಡೆದ ಬಂದ ದಾರಿಯಲ್ಲಿ ನಾವುಗಳು ಸ್ಪಲ್ಪವಾದರೂ ನಡೆದರೆ ಅವರ ಅಮೃತವಾಣಿಯನ್ನು ಪ್ರತಿ ನಿತ್ಯ ೧೦ ನಿಮಿಷವಾದ ಕೇಳಬೇಕು ಅಂದಾಗ ಮಾತ್ರ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ ಸಾರ್ಥವಾಗುತ್ತೆ ಎಂದ ಅವರು ವಿದ್ಯಾರ್ಥಿ ಜೀವನದಲ್ಲಿ ಮಕ್ಕಳು ಸ್ವಾಮಿ ವಿವೇಕಾನಂದರ ಆದರ್ಶ ತತ್ವವನ್ನು ಬೆಳೆಸಿಕೊಂಡು ಮುಂದಿನ ಭವಿಷ್ಯದಲ್ಲಿ ಜೀವನ ಸುಗಮವಾಗಿ ನಡೆಸಲು ಅವರ ಆದರ್ಶ ಪಾಲನೆ ಅವಶ್ಯವಾಗಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. 
ಈ ಸಂದರ್ಭದಲ್ಲಿ ಜಯರಾಜ ಭೂಸದ, ವೀರಯ್ಯ ಒಂಟಿಗೋಡಿಮಠ, ರಾಮರೆಡ್ಡಿ, ವಿ.ಮಂಜುಳಾ, ಶೋಭಾ ಗಡಾದ, ತಾಹೇರಾಬೇಗಂ ಮತ್ತಿತರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಸಿಹಿ ಊಟ ನೀಡಲಾಯಿತು.  

Advertisement

0 comments:

Post a Comment

 
Top