PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ:ಸಂಸ್ಥಾನ ಶ್ರೀಗವಿಮಠದಲ್ಲಿ ಜಾತ್ರೆಯ ಅಂಗವಾಗಿ ನಡೆದ ಮೂರನೆಯ ದಿನದ ವಿಶೇಷತೆ ಎಂದರೆ ಹಾಸ್ಯಕಾರ್ಯ್ರಕ್ರಮ.  ಸಮಾರೋಪ ಕಾರ್ಯಕ್ರಮದ ನಂತರ ಸುಮಾರು ಮೂವತ್ತು ಸಾವಿರದಷ್ಟು ನೆರೆದ ಜನಸ್ತೋಮವನ್ನು ರಂಜಿಸುವಲ್ಲಿ ಇದು ಸಾರ್ಥಕವಾಯಿತು. ಆರಂಭದಲ್ಲಿ ಬೆಂಗಳೂರಿನ ರಿಚರ್ಡಲೂಯಿಸ್,ಮೈಸೂರಿನ ಆನಂದ ತಮ್ಮದೆ ಅದ ಶೈಲಿಯಲ್ಲಿ  ಜನರನ್ನು ರಂಜಿಸಿದರು. ನಂತರ ಆರಂಭಿಸಿದ ಲೋಕಲ್ ಪಿಚ್  ಪ್ಲೇಯರ್ ಈ ಜಿಲ್ಲೆಯ ಗಂಗಾವಾತಿಯ ಬಿ.ಪ್ರಾಣೇಶ ಅವರು ವೇದಿಕೆಗೆ ಬರುತ್ತಿದ್ದಂತೆಯೇ ಜನರು ಹರ್ಷ ಹಾಗು ಸಂಭ್ರಮ ವ್ಯಕ್ತಪಡಿಸಿದರು. ಪ್ರಾಣೇಶ ಅವರು ಎಂದಿನ ಶೈಲಿಯಲ್ಲಿ ಉತ್ತರ ಕರ್ನಾಟಕದ ಭಾಷೆಯಲ್ಲಿ ಮಾತನಾಡಿ ಜನರನ್ನು ರಂಜಿಸಿದರು. ಉತ್ತರ ಕರ್ನಾಟಕದ ಭಾಷೆ,ಸಂಸ್ಕೃತಿ, ಆಚಾರ-ವಿಚಾರಗಳು ಶ್ರೇಷ್ಟವಾಗಿವೆ. ನನ್ನನ್ನು ಇಷ್ಟು ಎತ್ತರ ಬೆಳೆಸುವಲ್ಲಿ ಉತ್ತರಕರ್ನಾಟಕ ಹಾಗೂ ಇಲ್ಲಿನ ಜನರೇಕಾರಣರಾಗಿದ್ದಾರೆಂದು ಮನದಾಳದ ಮಾತನ್ನು ಆಡಿ ಹಾಸ್ಯ ಚಟಾಕೆಯ ಮೂಲಕ ಜನರನ್ನು ರಂಜಿಸಿದರು. ಕೊನೆಗೆ ಪೂಜ್ಯ ಶ್ರೀಗಳು ಈ ಎಲ್ಲ ಕಲಾವಿದರನ್ನು ಸನ್ಮಾನಿಸಿದರು. 

Advertisement

0 comments:

Post a Comment

 
Top