ಹೆಚ್ಚುವರಿ ಎಸ್ಪಿ ಸಿಜಿ ಕ್ಯಾತನ್ ಅವರಿಂದ
ಬಳ್ಳಾರಿ, ಜ. ೧೮:ಪೊಲೀಸ್ ಇಲಾಖೆಯಲ್ಲೂ ರಂಗ ಕಲಾವಿದರು, ಸಾಹಿತಿಗಳು, ಗಾಯಕರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದರೆ ಕರ್ತವ್ಯ ಒತ್ತಡದಲ್ಲಿ ತಮ್ಮ ಪ್ರತಿಭೆ ಮೆರೆಯಲು ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾ ಹೆಚ್ಚುವರಿ ಎಸ್ಪಿ ಸಿ ಜಿ ಕ್ಯಾತನ್ ಅವರು ಹೇಳಿದರು.

ಸಂಘ ಸಂಸ್ಥೆಗಳು ಎಲೆ ಮರೆಯಂತಿರುವ ಪ್ರತಿಭಾವಂತರ ಕಲಾವಿದರಿಗೆ ವೇದಿಕೆ ಕಲ್ಪಿಸುವ ಅಗತ್ಯವಿದ್ದು ಈ ನಿಟ್ಟಿನಲ್ಲಿ ಡಾ. ಭರಣಿ ಸಾಂಸ್ಕೃತಿಕ ವೇದಿಕೆ, ಶ್ರೀ ಮಹಾದೇವ ತಾತಾ ಕಲಾ ಸಂಘ ಮಾದರಿಯಾಗಿವೆ ಎಂದು ಮುಕ್ತ ಕಂಠದಿಂದ ಶ್ಲಾಘಿಸಿದರು.
ಸಾರ್ವಜನಿಕರಲ್ಲಿ ಜಾಗೃತಿಯನ್ನುಂಟು ಮಾಡುವ ಕಾರ್ಯಕ್ರಮಗಳನ್ನು ಸಂಘ ಸಂಸ್ಥೆಗಳು ಹಮ್ಮಿಕೊಂಡರೆ ಪೊಲೀಸ್ ಇಲಾಖೆ ಅಗತ್ಯ ಸಹಕಾರ ನೀಡಲಿದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಮಹಾದೇವ ತಾತಾ ಕಲಾ ಸಂಘದ ಅಧ್ಯಕ್ಷ, ರಂಗ ಕಲಾವಿದ ಹಂದ್ಯಾಳ್ ಪುರುಷೋತ್ತಮ, ಹಿರಿಯ ರಂಗ ಕಲಾವಿದ ಗೆಣಕಿಹಾಳ್ ತಿಮ್ಮನಗೌಡ, ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಡಾ. ಲಕ್ಕಿ ಪೃಥ್ವಿರಾಜ್, ವೇದಿಕೆ ಅಧ್ಯಕ್ಷ, ಪತ್ರಕರ್ತ ಸಿ. ಮಂಜುನಾಥ್ ಉಪಸ್ಥಿತರಿದ್ದರು.
0 comments:
Post a Comment