ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯ ಆಂಗವಾಗಿ ನಡೆಯುವ ಮಹಾದಾಸೋಹಕ್ಕಾಗಿ ಇಂದು ಸಹ ಭಕ್ತರಿಂದ ಸಿಹಿತಿನಿಸುಗಳು ಅರ್ಪಿತವಾಗುತ್ತಲಿವೆ. ಕೊಪ್ಪಳದ ಲಾಲ್ ಬಹದ್ದೂರ್ ಶಾಸ್ತ್ರೀ ಸರ್ಕಲ್‌ದ ಟ್ರ್ಯಾಕ್ಟರ್ ಮಾಲಕರ ಗೆಳೆಯರ ಬಳಗದಿಂದ ೨ ಕ್ವಿಂಟಾಲ್ ಸಕಿ , ೧ .೫ ಕ್ವಿಂಟಾಲ್ ಮೈದಾಹಿಟ್ಟು, ೬ ಡಬ್ಬಿ ಎಣ್ಣೆ, ೫೦ ಕೆ.ಜಿ ಡಾಲ್ಡಾತುಪ್ಪ, ಇತರೆ ವಸ್ತುಗಳನ್ನು ಬಳಸಿ ಅಂದಾಜು ೨೦೦೦೦ ಬಹದ್ದೂರಶಾವನ್ನು ತಯಾರಿಸಿ ಬ್ಯಾಂಡ್ ಮೇಳದೊಂದಿಗೆ ಟ್ರ್ಯಾಕ್ಟರ್ ಮೂಲಕ ಶ್ರೀಮಠಕ್ಕೆ ಅರ್ಪಿಸಿದರು. ಇದಲ್ಲದೇ ವಾರಕಾರ ಗಲ್ಲಿಯ ಭಕ್ತರಿಂದ ೫೪೦೦ ಬಹದ್ದೂರಷಾ, ಕವಲೂರು ಗ್ರಾಮದ ಭಕ್ತರಿಂದ ೪ ಕ್ವಿಂಟಲ್ ಗೋಧಿಹುಗ್ಗಿ ಈಗಾಗಲೇ ಶ್ರೀಮಠದ ದಾಸೋಹಕ್ಕೆ ಸಮರ್ಪಿತವಾಗಿವೆ. ದಾನಿಗಳಿಗೆಲ್ಲ ಪೂಜ್ಯ ಶ್ರೀಜ.ಗವಿಸಿದ್ದೇಶ್ವರ ಮಹಾಸ್ವಾಮಿಗಳು ಆಶಿರ್ವದಿಸಿದ್ದಾರೆ.
ಭರ್ಜರಿ ದಾಸೋಹ
ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯ ಆಂಗವಾಗಿ ಶ್ರೀಮoದಲ್ಲಿ ನಡೆಯುತ್ತಿರುವ ಮಹಾದಾಸೋಹವು
ವರ್ಷದಿಂದ ವರ್ಷಕ್ಕೆ ವಿಭಿನ್ನವಾಗಿ ಖ್ಯಾತಿಯಾಗುತ್ತಿದೆ. ಇಂದಿನ ದಿವಸದ ದಾಸೋಹದಲ್ಲಿ ಭಕ್ತರಿಗೆ ಸಿಹಿಬೂಂದಿ ಬಾದೂರಷಾ ಹಾಗೂ ಗೋಧಿಹುಗ್ಗಿ ವಿಶೇಷವಾಗಿತ್ತು. ಇದರಜೊತೆಗೆ ತುಪ್ಪ,ಅನ್ನ,ಸಾಂಬಾರ ಇವೆಲ್ಲವುಗಳು ಭಕ್ತರ ಹಸಿವಿನಂಗಳಕ್ಕೆ ಕೃಪೆಯಾದವು. ದಾಸೋಹ ಮಂಟಪದೊಳಗೆ ಜಾತ್ರೆಯಷ್ಟೇಜನರು ಪ್ರಸಾದ ಸ್ವೀಕರಿಸುತ್ತಾ ಇರುವದು ವಿಶೇಷವಾಗಿತ್ತು. ಇಂದಿನ ದಾಸೋಹದಲ್ಲಿ ಅಡುಗೆ ಸಿದ್ದಪಡಿಸುವ ಉಸ್ತುವಾರಿಯನ್ನು ಕೊಪ್ಪಳ ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದ ಸದ್ಭಕ್ತರು ವಹಿಸಿದ್ದರು.
ದಾಸೋಹದಲ್ಲಿ ಸಿಹಿಮೋತಿಚೂರು
ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯ ಆಂಗವಾಗಿ ಮಹಾದಾಸೋಹಕ್ಕಾಗಿ ಸಿಂಪಿಲಿಂಗಣ್ಣ ರಸ್ತೆಯಲ್ಲಿನ ಶ್ರೀಲಕ್ಷ್ಮಿ ಸ್ವಸಹಾಯಗುಂಪು ಹಾಗೂ ಶ್ರೀಗಜಾನನ ಗೆಳೆಯರ ಬಳಗವು ಜಂಟಿಯಾಗಿ ಮಹಾಸೋಹಕ್ಕಾಗಿ ಸುಮಾರು ೬ ಕ್ವಿಂಟಾಲ್ ಮೋತಿಚೂರು ( ಸಿಹಿಲಾಡು) ತಯಾರಿಸಿದ್ದಾರೆ. ಇಂದು ಸಂಜೆ ಶ್ರೀಮಠಕ್ಕೆ ಮೇಳದೊಂದಿಗೆ ಅಗಮಿಸಿ ದಾಸೋಹಕ್ಕೆ ಸಮರ್ಪಿತವಾಯಿತು. ಎರಡು ಸಂಘಟಣೆಗಳ ಪ್ರಮುಖರು ಉಪಸ್ಥಿತರಿದ್ದರು
0 comments:
Post a Comment