ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯ ಆಂಗವಾಗಿ ಕೈಲಾಸಮಂಟಪದಲ್ಲಿ ಇಂದು ದಿನಾಂಕ ೧೭ ರಂದು ಸಾಯಂಕಾಲ ೭ ಗಂಟೆಗೆ ಬಸವಮಹಾಮಾನವ ಎಂಬ ನಾಟಕ ಪ್ರದರ್ಶನವಿರುತ್ತದೆ. ಗಂಗಾವತಿಯ ಶರಣ ಸಂಸ್ಕೃತಿ ಕಲಾ ವೇದಿಕೆಯ ತಂಡದಿಂದ ಪ್ರದರ್ಶನಗೊಳ್ಳಲಿರುವ ಈ ನಾಟಕವು ಮಹಾನ್ ಮಾನವತಾವಾದಿ ಬಸವಣ್ಣನವರ ಜೀವನದಲ್ಲಿನ ಕ್ರಾಂತಿಕಾರಕ ಸಂಗತಿಗಳನ್ನು ಕುರಿತು ಸಮಗ್ರ ವಿಷಯವನ್ನು ಒಳಗೊಂಡಿರುತ್ತದೆ. ರಚನೆ ಅಯ್ಯಪ್ಪಯ್ಯ ಹೂಡಾ ರಾಯಚೂರು, ನಿರ್ದೇಶನ ಎಂ.ಪರುಶುರಾಮಪ್ರಿಯ.ಗಂಗಾವತಿ ಮಾಡಿರುತ್ತಾರೆ. ಕಾರಣ ಕೊಪ್ಪಳದ ಮಹಾಜನತೆ ಈ ನಾಟಕ ಪ್ರದರ್ಶನವನ್ನು ನೋಡಬೇಕಾಗಿ ಶ್ರೀಗವಿಮಠದ ಪ್ರಕಟಣೆ ತಿಳಿಸಿದೆ.
0 comments:
Post a Comment