PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ : ಬಹಳವರ್ಷಗಳಿಂದ ಪದವಿಪೂರ್ವ ಕಾಲೇಜು ಉಪನ್ಯಾಸಕರ ಹಾಗೂ ಪ್ರಾಚಾರ್ಯರ ವೇತನ ಶ್ರೇಣಿಯಲ್ಲಿ ಉಂಟಾದ ತಾರತಮ್ಯ ಹಾಗೂ ಶೈಕ್ಷಣಿಕ ಸೌಲಭ್ಯಗಳ ಕೊರತೆ, ಪಾಳಿ ಪದ್ದತಿಯ ರದ್ದತಿಯ ಕುರಿತು ಕಳೆದೆರಡು ದಿನಗಳಿಂದ ಹಮ್ಮಿಕೊಂಡಿರುವ  ವರ್ಗ ಬಹಿಷ್ಕಾರವನ್ನು ಹಾಕಿ ಈ ವಿಷಯವನ್ನು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತರಲು ದಿನಾಂಕ ೧೪-೧೨-೨೦೧೧ ರಂದು ಜಿಲ್ಲೆಯ ಉಪನ್ಯಾಸಕರು, ಪ್ರಾಚಾರ್ಯರಿಂದ ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಜಿಲ್ಲೆಯ ಉಪನ್ಯಾಸಕರು, ಪ್ರಾಚಾರ್ಯರು ಕಡ್ಡಾಯವಾಗಿ ಭಾಗವಹಿಸಬೇಕೆಂದು ಕೊಪ್ಪಳ ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷರಾದ ಡಾ. ವಿ. ಬಿ.ರಡ್ಡೇರ ಹೇಳಿದರು. 
ಅವರು ಕೊಪ್ಪಳದ ಬಾಲಕಿಯರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಬೆಂಗಳೂರ ಚಲೋ ಕಾರ್ಯಕ್ರಮ ಕುರಿತು ಹಮ್ಮಿಕೊಂಡ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 
ಕೊಪ್ಪಳದ ಬಾಲಕರ ಪದವಿ ಪೂರ್ವ ಮಹಾವಿದ್ಯಾಲಯದ ಪಾಚಾರ್ಯರಾದ ಎಸ್.ಬಿ. ರಾಜೂರ, ಭಾಗ್ಯನಗರ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಸಿ.ವಿ.ಜಡಿ, ಹಿರೇಸಿಂದೋಗಿ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಭಾರಿ ಪ್ರಾಚಾರ್ಯರಾದ ಹನಮಂತಪ್ಪ ಅಂಡಗಿ ಚಿಲವಾಡಗಿ, ಸರಕಾರಿ ನೌಕರರ ಸಂಘದ ನಿರ್ದೇಶಕರಾದ  ಐ.ಎಂ. ಚಿಕ್ಕರಡ್ಡಿ, ಕಿನ್ನಾಳ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಭಾರಿ ಪ್ರಾಚಾರ್ಯರಾದ ಎಸ್. ಜಿ. ಹೊಸಭಾವಿ, ಕೊಪ್ಪಳ ಜಿಲ್ಲಾ ಪದವಿಪೂರ್ವ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ರಾಜಶೇಖರ ಪಾಟೀಲ, ಕಾರ್ಯದರ್ಶಿಗಳಾದ ಆರ್.ಎಸ್. ಸರಗಣಾಚಾರ ವೇದಿಕೆ ಮೇಲೆ ಉಪಸ್ಥಿತರಿದ್ದರು. 
ಲಲಿತಾ ಅಂಗಡಿ ಪ್ರಾರ್ಥಿಸಿದರು. ಹೆಚ್.ಎಸ್. ತಿಮ್ಮಾರೆಡ್ಡಿ ಸ್ವಾಗತಿಸಿದರು. ಸೋಮನಗೌಡ ಎಂ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಎಂ. ಭೂಸನೂರಮಠ ನಿರೂಪಿಸಿದರು.  ಡಿ.ಎಫ್. ದೊಡ್ಡಮನಿ ವಂದಿಸಿದರು. 

Advertisement

0 comments:

Post a Comment

 
Top