ಕೊಪ್ಪಳ ಜಿಲ್ಲೆಯಲ್ಲಿ ಕ್ರೀಯಾಶೀಲತೆ ಬೆಳಗುತ್ತಿದೆ ಎಲ್ಲಲ್ಲೂ ಸಾಹಿತ್ಯ ಕಂಪು ಸೂಸುತ್ತಿದೆ ಎಂದು ಬಿ.ಎಸ್. ಪಾಟೀಲ ಸರಕಾರಿ ಅಭಿಯೋಜಕರು ಅಭಿವ್ಯಕ್ತ ಪಡಿಸಿದರು ಅವರು ನಗರದ ಜಿಲ್ಲಾ ಕ.ಸ.ಪ ಕಛೇರಿಯಲ್ಲಿ ನಡೇದ ಪುಸ್ತಕ ಬಿಡುಗಡೆ, ಸನ್ಮಾನ ಮತ್ತು ಕವಿ ಗೋಷ್ಠಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಾ ೩೭೧ ನೇ ಖಲಂ ಜಾರಿಗಾಗಿ ಅವರು ಒತ್ತಾಯಿಸಿದರು
ಭೀಮನಗೌಡ ಕೇಸರಟ್ಟಿ ವಿರಚಿತ ಆನೆಗೊಂದಿ ಸಂಗಮ ಅರಸರ ವಿಜಯ ನಾಟಕ ಕೃತಿಯನ್ನು ಹಿರಿಯ ಸಾಹಿತಿ ಹೆಚ್.ಎಸ್.ಪಾಟೀಲ ಬಿಡುಗಡೆ ಮಾಡಿದರು ಸ್ಥಳಿಯ ಚರಿತ್ರೆಯನ್ನು ಓದುವಂತ ಪಠ್ಯಪುಸ್ತಕಗಳು ನಿರ್ಮಾಣವಾಗಬೇಕು ಕೊಪ್ಪಳದ ನೆಲ,ಜೆಲದ ಹಿತಿಹಾಸವನ್ನು ಪ್ರತಿಬಿಂಬಿಸುವ ಕೃತಿ ಇದಾಗಿದೆ ಎಂದು ಅವರು ವ್ಯಕ್ತಪಡಿಸಿದರು
ಜಿ.ಎಸ್.ಗೋನಾಳರ ಸಂಪಾದಕತ್ವದಲ್ಲಿ ಪ್ರಕಟಗೊಂಡ ಚಿಗರು ಚುಟುಕು ಸಂಕಲನವನ್ನು ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಇವರು ಬಿಡುಗಡೆ ಮಾಡಿದರು ಚುಟುಕುಗಳು ಉಟದಲ್ಲಿ ಉಪ್ಪಿನಕಾಯಿಯಂತೆ ಸಾಹಿತ್ಯಾಭಿರುಚಿಗೆ ಮೇರುಗು ನೀಡುತ್ತವೆ ಎಂದು
ಇತ್ತೀಚಿಗೆ ಗಂಗಾವತಿಯಲ್ಲಿ ಯಶಸ್ವ್ವಿಯಾಗಿ ನಡೆಸಿದ ೭೮ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂಘಟಕರಾದ ಜಿಲ್ಲಾ ಕ.ಸ.ಪ ಅಧ್ಯಕ್ಷರಾದ ಶೇಖರಗೌಡ ಮಾಲೀಪಾಟಿಲರಿಗೆ ಕರುನಾಡ ಚೇತನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು ಹಾಗೆಯೇ ಅವರೊಂದಿಗೆ ಹಗಲಿರಳು ಶ್ರಮಿಸಿದ ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಪ್ರಮೋದ ತೂರವಿಹಾಳ, ಹೆಸ್.ವಿ.ಗೋಂಡಬಾಳ, ರಾಜಶೇಖರ ಅಂಗಡಿ, ರವಿಂದ್ರ ಬಾಕಳೆ, ಬಸವರಾಜ ಕೊಟೆ, ಬಸವರಡ್ಡಿ ಆಡೂರ, ಬಸಪ್ಪ ದೇಸಾಯಿ, ಇವರುಗಳಿಗೂ ಕರುನಾಡ ಚೇತನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಶೇಖರಗೌಡ ಮಾಲೀಪಾಟಿಲವರು ಸನ್ಮಾನಿತರ ಪರವಾಗಿ ಮಾತನಾಡಿ ಸಾಹಿತ್ಯಾಭಿಮಾನಿಗಳ ಸಹಕಾರ ಪರಿಶ್ರಮದಿಂದ ಗಂಗಾವತಿಯಲ್ಲಿ ಸಮ್ಮೇಳನ ಯಶಸ್ವಿಯಾಗಿದೆ ಎಂದು ಸ್ಮರಿಸಿ ಮಾತನಾಡಿದರು
ನಂತರ ನಡೇದ ಕವಿಗೋಷ್ಠಿಯಲ್ಲಿ ಎ.ಪಿ.ಅಂಗಡಿ, ಶಿರಾಜ ಬಿಸರಳ್ಳಿ, ಶಾರದಾ.ಎಸ್.ರಜಪೂತ ಸರೋಜ ಬಾಕಳೆ, ಎನ್.ಜಡೀಯಪ್ಪ, ಪುಸ್ಪಾ ಏಳಬಾವಿ, ವಿರೇಶ ಉಲ್ಲೂರ, ಗವಿಸಿದ್ದಪ್ಪ ಬಾರಕೇರ, ಡಾ|| ರೇಣುಕಾ ಕರಿಗಾರ, ಎಂ.ಡಿ.ಹುಸೇನ, ವಿರಣ್ಣ ಹುರಕಡ್ಲಿ, ಪುಸ್ಪಾವತಿ ಮೂಲಿಮನಿ, ಬಸವರಡ್ಡಿ ಆಡೂರ, ರತ್ನಾಬಾಯಿ ಘೋರ್ಪಡೆ, ಬಸವರಾಜ ದೊಟಿಹಾಳ ಶ್ರೀನಿವಾಸ ಚಿತ್ರಗಾರ, ಮುಂತಾದವರು ಕವನ ವಾಚಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಡಾ. ಮಹಾತೇಂಶ ಮಲ್ಲಗೌಡರ ಮಾತನಾಡಿ ಸಾಹಿತ್ಯ ಸಂಸೃತಿ ಜಿಲ್ಲೆಯಲ್ಲಿ ಎಮ್ಮರವಾಗಿ ಬೆಳೆಯಬೇಕಾಗಿದೆ ಇದಕ್ಕೆ ಪೂರಕವಾಗಿ ನಗರದಲ್ಲಿ ಹಲವಾರು ಕಾರ್ಯಕ್ರಮಗಳು ನೇಡೆಯುತ್ತಿರುವುದು ಅತ್ಯಂತ ಸಂತೋಷದ ಸಂಗತಿ ಎಂದು ನುಡಿದರು ವೇದಿಕೆಯ ಮೇಲೆ ಸಂಗಮೇಶ ಡಂಬಳ, ಹನುಮಂತಪ್ಪ ಅಂಡಗಿ, ಹೆಚ್.ಎಸ್. ವಾಲ್ಮೀಕಿ ಇತರರು ಉಪಸ್ಥಿತರಿದ್ದರು ಜಿಲ್ಲಾ ಸಿರಿಗನ್ನಡ ವೇಧಿಕೆ ವಿಶಾಲ ಪ್ರಕಾಶನ, ನೇಹಾ ಸಂಸ್ಖೃತಿಕ ವೇದಿಕೆ, ನಿಮೀಷಾಂಬ ಪ್ರಕಾಶನ, ವರಸಿದ್ದಿ ವಿನಾಯಕ ಶಿಕ್ಷಣ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಜರುಗಿತು
ಪರುಶರಾಮ ಬಣ್ಣದ, ಲಚ್ಚಣ್ಣ ಹಳೇಪೆಟ್ಟೆ ಕನ್ನಡ ನಾಡಗೀತೆಗಳನ್ನು ಹಾಡಿದರು ಶ್ರೀನಿವಾಸ ಚಿತ್ರಗಾರ ಸೂಬಾಸರಡ್ಡಿ ನಿರೂಪಿಸಿದರು ಪ್ರಾಸ್ತಾವಿಕವಾಗಿ ಜಿ.ಎಸ್. ಗೋನಾಳ ಮಾತನಾಡಿದರು ಕೊನೆಯಲ್ಲಿ ಪಕೀರಪ್ಪ ವಜ್ರಬಂಡಿಯವರು ವಂಧಿಸಿದರು
0 comments:
Post a Comment