: ಗಂಗಾವತಿ ತಾಲೂಕಿನಲ್ಲಿ ಜನಸ್ಪಂದನ ಸಭೆಗಳನ್ನು ನಡೆಸುವ ದಿನಾಂಕ ಹಾಗೂ ಗ್ರಾಮಗಳ ವಿವರವನ್ನು ಗಂಗಾವತಿ ತಹಸಿಲ್ದಾರ್ ಸಿ.ಡಿ. ಗೀತಾ ಅವರು ನಿಗದಿಪಡಿಸಿದ್ದಾರೆ.
ನಿಗದಿತ ವೇಳಾ ಪಟ್ಟಿಯನ್ವಯ ೨೦೧೨ ರ ಜನವರಿ ೭ ರಂದು ಮರಳಿ ಹೋಬಳಿಯ ಹೊಸಕೇರಾ ಗ್ರಾಮದಲ್ಲಿ ಜನಸ್ಪಂದನ ಸಭೆ ನಡೆಸಲಾಗುವುದು. ಅದೇ ರೀತಿ ಫೆ. ೦೪ ರಂದು ಗಂಗಾವತಿ ಹೋಬಳಿಯ ಹನುಮನಹಳ್ಳಿ, ಮಾರ್ಚ್ ೦೩ ರಂದು ಕಾರಟಗಿ ಹೋಬಳಿಯ ಹುಳ್ಕಿಹಾಳ ಗ್ರಾಮದಲ್ಲಿ ಜನಸ್ಪಂದನ ಸಭೆ ನಡೆಸಲು ನಿಗದಿಪಡಿಸಲಾಗಿದೆ. ಈ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರು ತಮ್ಮ ಕುಂದುಕೊರತೆಗಳ ಕುರಿತ ಅರ್ಜಿ ಹಾಗೂ ಅಹವಾಲುಗಳನ್ನು ಜನಸ್ಪಂದನ ಸಭೆಯ ಸಂದರ್ಭದಲ್ಲಿ ಸಲ್ಲಿಸಬಹುದಾಗಿದೆ. ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಜನಸ್ಪಂದನ ಸಭೆಯಲ್ಲಿ ತಪ್ಪದೆ ಭಾಗವಹಿಸುವಂತೆ ಗಂಗಾವತಿ ತಹಸಿಲ್ದಾರ್ ಸಿ.ಡಿ. ಗೀತಾ ತಿಳಿಸಿದ್ದಾರೆ.
0 comments:
Post a Comment