ಕೊಪ್ಪಳ ಡಿ.೧೮: ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಕೂಟ ದೇವಾಲಯಗಳ ಚಕ್ರವರ್ತಿ ಐತಿಹಾಸಿಕ ಇಟಗಿ ಉತ್ಸವ ಅಚರಣೆ ಈ ಹಿಂದೆ ನಿರ್ದರಿಸಿದಂತೆ ದಿ. ೨೨ರಂದೇ ಇಟಗಿಯಲ್ಲಿ ಆಚರಿಸಲು ಜಿಲ್ಲಾ ನಾಗರಿಕರ ವೇದಿಕೆ ಕೊಪ್ಪಳದಲ್ಲಿ ರವಿವಾರ ಹಮ್ಮಿಕೊಂಡಿದ್ದ ತುರ್ತು ಸಭೆಯಲ್ಲಿ ನಿರ್ಧರಿಸಲಾಯಿತು.
ಈ ಬಾರಿ ಸರಕಾರ ಮತ್ತು ಜಿಲ್ಲಾಡಳಿತ ದಿ. ೨೩.೨೪ರಂದು ಇಟಗಿ ಉತ್ಸವ ಆಚರಣೆಗೆ ಮುಂದಾಗಿದ್ದು, ಈಗಾಲೆ ಸರಕಾರದ ವತಿಯಿಂದ ಈ ಉತ್ಸವ ಆಚರಣೆಗೆ ಜಿಲ್ಲಾಢಳಿತಕ್ಕೆ ೧೫ ಲಕ್ಷ ಮತ್ತು ಕೊಪ್ಪಳ ಜಿಲ್ಲಾ ನಾಗರಿಕ ವೇದಿಕೆಗೆ ೫ ಲಕ್ಷ ಕೂಡ ಬಿಡುಗಡೆ ಮಾಡಿರುವದಕ್ಕೆ ವೇದಿಕೆ ಜಿಲ್ಲಾಡಳಿತ ಮತ್ತು ಸರಕಾರಕ್ಕೆ ಅಬಿನಂದಿಸಿದೆ.
ಈಗಾಗಲೆ ನಮ್ಮ ವೇದಿಕೆ ವತಿಯಿಂದ ೨೨ರಿಂದ ೨೫ರವರೆಗೆ ಇಟಗಿ ಆಚರಣೆ ಸಂಪೂರ್ಣ ಸಿದ್ದತೆಗೆ ಕೈಗೊಂಡಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಕಲಾವಿದರ, ಅತಿಥಿ ಗಣ್ಯರು ಬರುತ್ತಿದ್ದಾರೆ. ಹೀಗಾಗಿ ಸರಕಾರದ ಕಾರ್ಯಕ್ರಮ ಮತ್ತು ವೇದಿಕೆ ಕಾರ್ಯಕ್ರಮಗಳ ನಡುವೆ ಗೋಂದಲ ಉಂಟಾಗುವುದು ಬೇಡ ಎಂದು ಕಾರ್ಯಕ್ರಮದಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದೆ. ದಿ. ೨೨ರಂದು ಸಂಜೆ ಗ್ರಾಮದಲ್ಲಿರುವ ಶಾಸಕ ಈಶಣ್ಣ ಗುಳಗಣ್ಣವರ್ ರವರ ಮನೆ ಆವರಣದಲ್ಲಿರುವ ಖಾಲಿ ಜಾಗೆಯಲ್ಲಿ ಉತ್ಸವ ಆಚರಣೆ ಬೃಹತ್ ವೇದಿಕೆ ನಿರ್ಮಿಸಲಾಗುವುದು. ಮತ್ತು ದಿ. ೨೩ ಮತ್ತು ೨೪ ರಂದು ದೇವಸ್ಥಾನ ಹತ್ತಿರದ ಮುಖ್ಯ ವೇದಿಕೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಉತ್ಸವ ಆಚರಣೆಗೆ ಸಂಪೂರ್ಣ ಸಹಕಾರ ನೀಡುವುದು. ನಂತರ ದಿ. ೨೫ ರಂದು ನಮ್ಮ ವೇದಿಕೆ ವತಿಯಿಂದ ಉತ್ಸವದ ಸಮಾರೋಪ ಸಮಾರಂಭ ಸಂಜೆ ಜರುಗಿಸಲಾಗುವುದು, ಕೊಪ್ಪಳ ಜಿಲ್ಲಾ ನಾಗರಿಕ ವೇದಿಕೆ ಬೆಂಗಳೂರಿನ ಅಧ್ಯಕ್ಷರಾದ ಮಹೇಶ ಸುರ್ವೆಯವರ ನೇತೃತ್ವದಲ್ಲಿ ಈ ಇಟಗಿ ಉತ್ಸವ ಯಶಸ್ವಿಯಾಗಿ ಅಚರಿಸಲು ವೇದಿಕೆ ಈಗಾಗಲೆ ಸಿದ್ದತೆ ಕೈಗೊಂಡಿದೆ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಅಧ್ಯಕ್ಷ ಎಂ. ಸಾದಿಕ್‌ಅಲಿ ಮತ್ತು ಜಿಲ್ಲ ಪ್ರದಾನ ಕಾರ್ಯದರ್ಶಿ ಹನುಮಂತ ಹಳ್ಳಿಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment