ಕೊಪ್ಪಳ ಡಿ.೧೨: ಅಖಿಲ ಭಾರತ ಕನ್ನಡ ಪತ್ರಿಕಾ ಸಂಪಾದಕರ ಸಮಾವೇಶ ಸುರ್ವೆ ಪತ್ರಿಕೆಯ ಬೆಳ್ಳಿ ಹಬ್ಬದ ಸುಸಂದರ್ಭದಲ್ಲಿ ಬೆಂಗಳೂರಿನ ಡಾ. ರಾಜಕುಮಾರ ಕಲಾ ಕ್ಷೇತ್ರದಲ್ಲಿ ಬೃಹತ್ ಸಮಾವೇಶ ದಿ. ೧೮ ರಿಂದ ೨೧ರ ವರೆಗೆ ಜರುಗಲಿದ್ದು, ಇದರಲ್ಲಿ ವಿಶ್ವೇಶ್ವರಯ್ಯ ಇದರಲ್ಲಿ ಹಲವು ಪತ್ರಕರ್ತರಿಗೆ, ಕಲಾವಿದರಿಗೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಾದಕರಿಗೆ ವಿವಿಧ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ.
ಈ ಕಾರ್ಯಕ್ರಮದಲ್ಲಿ ನಮ್ಮ ಲೋಕದರ್ಶನ ಪತ್ರಿಕೆಯ ಕೊಪ್ಪಳ ಜಿಲ್ಲಾ ವರದಿಗಾರ ಹಾಗೂ ವ್ಯವಸ್ಥಾಪಕ ಮತ್ತು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿರುವ ಎಂ. ಸಾಧಿಕ್‌ಅಲಿ ಇವರಿಗೆ ವಿಶ್ವೇಶ್ವರಯ್ಯ ಪ್ರಶಸ್ತಿ ಲಬಿಸಿದೆ. ದಿ. ೨೦ರ ಮಂಗಳವಾರ ಸಂಜೆ ಜರುಗಲಿರುವ ಕಾರ್ಯಕ್ರಮದಲ್ಲಿ ವಿಶ್ವೇಶ್ವರಯ್ಯ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಕಾರ್ಯಕ್ರಮ ಸಂಘಟಕ ರಮೇಶ ಸುರ್ವೆ ತಿಳಿಸಿದ್ದಾರೆ. ಈ ಸಮಾರಂಭದ ಸಮ್ಮೇಳನಾಧ್ಯಕ್ಷರಾಗಿ ಪುಸ್ತಕಮನೆ ಹರಿಹರ ಪ್ರಿಯ ಸೇರಿದಂತೆ ಚಲನ ಚಿತ್ರ ನಟರು, ಪತ್ರಿಕೆಗಳ ಸಂಪಾದಕರು, ಪತ್ರಕರ್ತರು, ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.
0 comments:
Post a Comment