ಕೊಪ್ಪಳ, ೧೮- ಸಾಹಿತ್ಯ ಪರಿಷತ್‌ಗೆ ಅಕ್ಷರ ಲೋಕದವರೆ ಪದಾಧಿಕಾರಿಗಳಾಗಬೇಕು, ರಾಜ ಕೀಯ ಮತ್ತು ಬಂಡವಾಳ ಶಾಹಿ ಗಳ ಮುಕ್ತವಾಗುವುದು ಅಗತ್ಯ ವಾಗಿದ್ದು, ಈ ಹಿನ್ನೆಲೆಯಲ್ಲಿ ಕಸಾಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸು ವುದಾಗಿ ಹಿರಿಯ ಸಾಹಿತಿ ಚಂದ್ರ ಶೇಖರ ಪಾಟೀಲ್ ಹೇಳಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಜರುಗಿದ ಸುದ್ದಿ ಗೋಷ್ಠಿ ಉದ್ದೇಶಿಸಿ ಮಾತನಾಡು ತ್ತಿದ್ದರು, ಕನ್ನಡ ಸಾಹಿತ್ಯ ಪರಿಷತ್‌ಗೆ ಶೇ.೯೯ರಷ್ಟು ಅಕ್ಷರ ಲೋಕದವರೇ ಪದಾಧಿಕಾರಿ ಗಳಾದಾಗ ಮಾತ್ರ ಉದ್ದೇಶ ಈಡೇರಲು ಸಾಧ್ಯ, ಕಳೆದ ಬಾರಿ ಕಸಾಪ ಅಧ್ಯಕ್ಷನಾಗಿ ಶಿವಮೊಗ್ಗ ಸೇರಿದಂತೆ ೩ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿದ್ದೇನೆ, ಆಗ ಕೆಲವು ಅಗತ್ಯವಾಗಿ ಮಾಡಲೇ ಬೇಕಾದ ಕೆಲಸಗಳು ಉಳಿದಿದ್ದು, ಆದ್ದರಿಂದ ಮತ್ತೇ ಚುನಾವಣೆಗೆ ಸ್ಪರ್ಧಿಸುವುದಾಗಿ ತಿಳಿಸಿದರು.
ಸ್ಪರ್ಧೆ : ಬರುವ ಫೆಬ್ರುವರಿ ತಿಂಗಳಲ್ಲಿ ಜರುಗುವ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ತಿಳಿಸಿದ ಇವರು ನಿರ್ಧಾರದಿಂದ ಹಿಂದೇ ಸರಿಯುವ ಪ್ರಶ್ನೆಯ ಇಲ್ಲವೆಂದು ತಿಳಿಸಿದರು.
ಕರ್ನಾಟಕದ ಗಡಿ, ಭಾಷೆ, ಉದ್ಯೋಗ, ಶಿಕ್ಷಣ ಮತ್ತು ಮಾಧ್ಯಮ ಸೇರಿದಂತೆ ಕನ್ನಡ ಶಾಲೆ ಮುಚ್ಚು ವ ನೂರಾರು ಪ್ರಶ್ನೆಗಳಿದ್ದು, ಅದರ ವಿರುದ್ಧ ಹೋರಾಟ ನಡೆಸುವ ಭರವಸೆ ನೀಡಿದರು.
ರಾಷ್ಟ್ರೀಯ ಪಕ್ಷಗಳಿಗೆ ರಾಜ್ಯದ ಹಿತಾಸಕ್ತಿಬೇಕಾಗಿಲ್ಲ, ರಾಜ್ಯದಲ್ಲಿ ರುವ ಏಕೈಕ ಪ್ರಾದೇಶಿಕ ಪಕ್ಷ ಸರಿಯಾಗಿ ಕೆಲಸ ಮಾಡುತ್ತಿಲ್ಲ, ರಾಜ್ಯದ ಹಲವಾರು ಸಮಸ್ಯೆಗಳು ಬಂದಾಗ ಎಲ್ಲ ಮುಗಿಯುವ ಸಂದರ್ಭ ದಲ್ಲಿ ಕಸಾಪ ಪದಾಧಿ ಕಾರಿಗಳು ಹೇಳಿಕೆ ಕೊಡುತ್ತಾರೆ ಇದು ಎಷ್ಟೇರ ಮಟ್ಟಿಗೆ ಸರಿ ಎಂದರು.
ಕನ್ನಡ ಸಮ್ಮೇಳನಕ್ಕೆ ಸರ್ಕಾರ ಹಣ ನೀಡುವುದು ಅದರ ಜವಾ ಬ್ದಾರಿ, ಅದು ಕನ್ನಡಿಗರ ಹಣ ಹೀಗಾಗಿ ಕನ್ನಡ ಕೆಲಸಗಳಿಗೆ ಬಳಕೆ ಯಾಗುವುದುರಲ್ಲಿ ತಪ್ಪೇನು ಎಂದು ಹೇಳಿದರು.
ಈ ಸಂದರ್ಭದಲ್ಲಿ ವೆಂಕ ಟೇಶ, ಹೆಚ್.ಎಸ್. ಪಾಟೀಲ್, ಪತ್ರಕರ್ತರಾದ ಹುಸೇನಪಾಷಾ, ರಮೇಶ ಹೂಗಾರ, ಇತರರು ಉಪಸ್ಥಿತರಿದ್ದರು
0 comments:
Post a Comment