PLEASE LOGIN TO KANNADANET.COM FOR REGULAR NEWS-UPDATES



ಮೈಸೂರು: `ಸಜಹವಾಗಿ ಸಂತೋಷವಾಗಿದೆ. ಅನೇಕ ಪ್ರಶಸ್ತಿ, ಪುರಸ್ಕಾರಗಳನ್ನು ಮೀರಿದ ದೊಡ್ಡ ಗೌರವ ಇದಾಗಿದೆ`- ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಡಿಸೆಂಬರ್ 9 ರಿಂದ 11 ರ ವರೆಗೆ ನಡೆಯುವ 78 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ (ಸಿ.ಪಿ.ಕೆ.) ಅವರ ಪ್ರತಿಕ್ರಿಯೆ.

`ನನಗೆ ನಾಡು ಸಲ್ಲಿಸಿದ ಬಹುದೊಡ್ಡ ಗೌರವವಾಗಿದೆ. ಹಿಂದೆ ಸಮ್ಮೇಳನಾಧ್ಯಕ್ಷರಾಗಿದ್ದ ಮಹಾನೀಯರು ಹಾಗೂ ಸಾಹಿತಿಗಳ ಆಶೀರ್ವಾದ ನನ್ನ ಮೇಲೆ ಇರುವುದರಿಂದ ಈ ಮನ್ನಣೆ ದೊರೆತಿದೆ. ಹಿಂದೆ ಸಮ್ಮೇಳನಾಧ್ಯಕ್ಷರಾಗಿದ್ದ ಮಹಾನೀಯರಿಗೆ ಹೋಲಿಸಿದರೆ ನಾನು ಸಣ್ಣವನು. ನನಗೆ ಇಂತಹ ಗೌರವ ಹಿಂದೆಯೇ ಬರಬೇಕಿತ್ತು ಎನ್ನುವ ಮಾತನಾಡುವುದಿಲ್ಲ. ಏಕೆಂದರೆ ಅರ್ಹರೂ ಇನ್ನೂ ಇದ್ದಾರೆ. ಇದನ್ನು ಮರೆಯಬಾರದು` ಎಂದರು.

`ಆಯಾ ಪ್ರಾಂತ್ಯದವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು ಎನ್ನುವುದನ್ನು ಸರಿಯಲ್ಲ. ಹೀಗೆ ಮಾಡಿದರೆ ಐಕ್ಯತೆ, ಭಾವೈಕ್ಯ ಎನ್ನುವ ಪದಕ್ಕೆ ಅರ್ಥ ಇಲ್ಲದಂತಾಗುತ್ತದೆ` ಎಂದ ಅವರು, `ಅರ್ಹತೆ ಪ್ರಶ್ನೆ ಇಲ್ಲ. ಆದರೆ ನನ್ನ ಆಯ್ಕೆಯನ್ನು ಸಮರ್ಥಿನೀಯ. ಅದನ್ನು ನಾನು ಸಮರ್ಥಿಸಿಕೊಳ್ಳಬಲ್ಲೆ` ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

0 comments:

Post a Comment

 
Top