PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ಪ್ರತಿವಾರದಂತೆ ಈ ವಾರವೂ ಕನ್ನಡನೆಟ್.ಕಾಂ ಕವಿಸಮೂಹ ತನ್ನ ಕವಿಸಮಯ ಕಾರ್‍ಯಕ್ರಮವನ್ನು ಹಮ್ಮಿಕೊಳ್ಳುತ್ತಲಿದ್ದು. ಈ ವಾರದ ೮೧ ನೇ ಕವಿಸಮಯವನ್ನು ನಗರದ ಪ್ರವಾಸಿ ಮಂದಿರದಲ್ಲಿ  ದಿನಾಂಕ ೨೦-೧೧-೨೦೧೧ ರವಿವಾರ ಸಂಜೆ  ೪.೩೦ಕ್ಕೆ ಹಮ್ಮಿಕೊಳ್ಳಲಾಗಿದೆ. 
ಈ ವಾರ ಮುಕ್ತ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ. ನಂತರ ಗವಿಸಿದ್ಧ ಎನ್.ಬಳ್ಳಾರಿಯವರ  ಕಾವ್ಯ ಕುರಿತು ಚರ್ಚೆ ನಡೆಯಲಿದೆ.
 ಹಿರಿಯ ಕವಿಗಳು,ಸಾಹಿತಿಗಳು  ಮಾತನಾಡಲಿದ್ದಾರೆ. 
ಆಸಕ್ತ ಎಲ್ಲ ಕವಿಗಳು ಭಾಗವಹಿಸಿ ತಮ್ಮ ಕವನ ವಾಚನ ಮಾಡಬಹುದು ಮತ್ತು ಸಾಹಿತ್ಯಾಸಕ್ತರು ಭಾಗವಹಿಸಲು ಕೋರಲಾಗಿದೆ. ಹೆಚ್ಚಿನ ವಿವರಗಳಿಗೆ ಸಿರಾಜ್ ಬಿಸರಳ್ಳಿ ೯೮೮೦೨೫೭೪೮೮,ಎನ್ ಜಡೆಯಪ್ಪ -೯೪೪೯೭೬೧೩೯೩, ಮಹೇಶ ಬಳ್ಳಾರಿ ೯೦೦೮೯೯೬೬೨೪ಸಂಪರ್ಕಿಸಲು ಕೋರಲಾಗಿದೆ.

Advertisement

0 comments:

Post a Comment

 
Top