PLEASE LOGIN TO KANNADANET.COM FOR REGULAR NEWS-UPDATES


ನವೆಂಬರ್ ೨೦, ೧೯೮೯ರಲ್ಲಿ ವಿಶ್ವ ಸಂಸ್ಥೆಯು ಜಗತ್ತಿನ ಎಲ್ಲಾ ಮಕ್ಕಳಿಗೆ ಬದುಕುವ, ರಕ್ಷಣೆಯ, ವಿಕಾಸ ಹೊಂದುವ ಮತ್ತು ಭಾಗವಹಿಸುವ ಹಕ್ಕುಗಳನ್ನು ನೀಡಿತು. ಭಾರತ ಸರಕಾರ ೧೯೯೨ ಡಿಸೆಂಬರ್, ೧೧ ರಂದು ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಸಹಿ ಮಾಡಿತು. ಈ ಒಡಂಬಡಿಕೆಯಲ್ಲಿ ೫೪ ಪರಿಚ್ಛೇಧಗಳಿವೆ. ಅದರಲ್ಲಿ ಸೂಚಿಸಿರುವ ಪ್ರಮುಖ ಹಕ್ಕುಗಳು ಈ ಕೆಳಗಿನಂತಿವೆ:-
ತಾಯಿಯ ಗರ್ಭದಿಂದ ೧೮ ವರ್ಷದೊಳಗಿನ ಎಲ್ಲಾ ಮನಷ್ಯ ಜೀವಗಳು ಮಕ್ಕಳು.
ಮಕ್ಕಳಲ್ಲಿ ಯಾವುದೇ ತಾರತಮ್ಯ ಮಾಡಬಾರದು.
ಪ್ರತೀ ಮಗುವಿಗೂ ಜೀವಿಸುವ ಹಕ್ಕಿದೆ.
ಯಾವುದೇ ಮಗುವನ್ನು ಸರ್ಕಾರದ ಮತ್ತು ಪೋಷಕರ ಅನುಮತಿ ಇಲ್ಲದೆ ಸ್ಥಳಾಂತರ ಮಾಡುವಂತಿಲ್ಲ.
ಮಕ್ಕಳಿಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕು.
ಮಾಹಿತಿ ಪಡೆಯುವ ಹಕ್ಕು. ಸಂಘಟಿತರಾಗುವ ಹಕ್ಕು.
ದುರುಪಯೋಗದಿಂದ ರಕ್ಷಣೆಯ ಹಕ್ಕು.
ನಿರಾಶ್ರಿತ ಮತ್ತು ನಿರ್ವಸಿತರಾಗುವುದರಿಂದ ರಕ್ಷಣೆಯ ಹಕ್ಕು.
ವಿಶೇಷ ಅಗತ್ಯತೆಯುಳ್ಳ ಮಕ್ಕಳಿಗೆ ರಕ್ಷಣೆಯ ಮತ್ತು ಸೌಲಭ್ಯದ ಹಕ್ಕು.
ಉತ್ತಮ ಆರೋಗ್ಯ ಹೊಂದುವ ಹಕ್ಕು.
ಶಿಕ್ಷಣದ ಹಕ್ಕು. ಭಾಗವಹಿಸುವ ಹಕ್ಕು.
ಬಾಲಕಾರ್ಮಿಕ ಪದ್ದತಿ ನಿಷೇಧ/ಅದರ ವಿರುದ್ಧ ರಕ್ಷಣೆಯ ಹಕ್ಕು.
ಮಾದಕ ದ್ರವ್ಯಗಳಿಂದ ದೂರ ಮತ್ತು ರಕ್ಷಣೆಯ ಹಕ್ಕು.
ಲೈಂಗಿಕ ಶೋಷಣೆಯಿಂದ ರಕ್ಷಣೆಯ ಹಕ್ಕು.
ಮಕ್ಕಳ ಮಾರಾಟ ಮತ್ತು ಅಕ್ರಮ ಬಂಧನದಿಂದ ರಕ್ಷಣೆಯ ಹಕ್ಕು.
ಎಲ್ಲಾ ರೀತಿಯ ಶೋಷಣೆ, ಹಿಂಸೆ, ವಲಸೆ ಮತ್ತು ದಬ್ಬಾಳಿಕೆಯಿಂದ ರಕ್ಷಣೆ. 


ಮಕ್ಕಳ ಹಕ್ಕುಗಳ ಒಡಂಬಡಿಕೆಯಲ್ಲಿ ಸೂಚಿಸಿರುವ ಎಲ್ಲಾ ಹಕ್ಕುಗಳು ಜಿಲ್ಲೆಯ ಎಲ್ಲಾ ಮಕ್ಕಳಿಗೆ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಪೋಷಕರು, ಅಧಿಕಾರಿಗಳು, ಸಾರ್ವಜನಿಕರು ಪ್ರಯತ್ನಿಸಬೇಕು.    ಎಲ್ಲಾ ಮಕ್ಕಳಿಗೆ ವಿಶ್ವ ಮಕ್ಕಳ ಹಕ್ಕುಗಳ ದಿನಾಚರಣೆಯ ಶುಭಾಶಯಗಳು. 

Advertisement

0 comments:

Post a Comment

 
Top