PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-೦೧ : ಕನ್ನಡದ ನೆಲ-ಜಲಕ್ಕೆ ತನ್ನದೇ ಆದ ಐತಿಹ್ಯವಿದೆ. ಪುರಾತನವಾದ ಭಾಷೆ ಮತ್ತು ಸಾಹಿತ್ಯ ನಮ್ಮದು. ಕನ್ನಡ ಸಾಹಿತ್ಯ ಮತ್ತು ಭಾಷೆಯ ಬೆಳವಣಿಗೆಯಲ್ಲಿ ನಮ್ಮ ಕೊಪ್ಪಳದ ಪಾತ್ರವೂ ಮಹತ್ವದ್ದಾಗಿದೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ನಮ್ಮೂರಿನ ಹಿರಿಮೆಯನ್ನು ಅನೇಕ ಪ್ರಾಚೀನ ಗ್ರಂಥಗಳು ಸಾರಿವೆ. ಕನ್ನಡ ನಾಡು, ನುಡಿಯ ಬೆಳವಣಿಗೆಯಲ್ಲಿ ಜಿಲ್ಲೆಯ ಸಾಹಿತ್ಯ ಮಹತ್ವದ ಕೊಡುಗೆಯನ್ನು ನೀಡಿದೆ. ಶಾಲಾ ಮಕ್ಕಳು ಸಹಿತ ಸಾಹಿತ್ಯ, ಬರವಣಿಗೆಯ ಕಡೆಗೆ ತಮ್ಮ ಗಮನವನ್ನು ಕೊಟ್ಟು ಮುಂದಿನ ದಿನಮಾನಗಳಲ್ಲಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಬೇಕು ಎಂದು ನಿವೃತ್ತ ಶಿಕ್ಷಕ ಹಾಗೂ ಸಾಹಿತಿ ಎಚ್.ಎಸ್. ಪಾಟೀಲ್ ನುಡಿದರು.

ಅವರಿಂದು ನಗರದ ಪ್ರತಿಷ್ಠಿತ ಲಯನ್ಸ್ ಕ್ಲಬ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಸಂಯುಕ್ತ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ, ಈ ಮೇಲಿನಂತೆ ನುಡಿದರು.

ಇದೇ ಸಂದರ್ಭದಲ್ಲಿ ಎಚ್.ಎಸ್. ಪಾಟೀಲರನ್ನು ಅವರ ಕನ್ನಡ ನಾಡು, ನುಡಿಯ ಸೇವೆಗಾಗಿ ಲಯನ್ಸ್ ಕ್ಲಬ್ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಪರವಾಗಿ ಆಡಳಿತ ಮಂಡಳಿಯ ಕಾಯದರ್ಶಿ ಲಯನ್ ಬಸವರಾಜ್ ಬಳ್ಳೊಳ್ಳಿ ಮತ್ತು ಶಾಲಾ ಪ್ರಾಚಾರ್ಯ ಎ. ಧನಂಜಯನ್ ಅವರು ಸನ್ಮಾನಿಸಿದರು.
ರಾಜ್ಯೋತ್ಸವದ ಮಹತ್ವ ಕುರಿತು ಕು. ವಿಶ್ವ ಮತ್ತು ಶಿಕ್ಷಕ ಮಹೇಶ ಬಳ್ಳಾರಿ ಮಾತನಾಡಿದರು. ರಾಜ್ಯೋತ್ಸವ ಅಂಗವಾಗಿ ಜರುಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಕನ್ನಡ ನಾಡಿನ ಕುರಿತ ಸುಮಧುರ ಹಾಡಿನ ವಿದ್ಯಾರ್ಥಿಗಳ ನೃತ್ಯರೂಪಕ ಗಮನ ಸೆಳೆಯಿತು. ಕು. ಸ್ಪಂದನಾ, ಕು. ಭಾಗ್ಯಶ್ರೀ, ಕು. ಪ್ರಿಯಾ ಪುರಂದರೆ ಮತ್ತು ಕು. ಚೈತ್ರಾ ಕವನ ವಾಚನ ಮಾಡಿದರು. ಅತಿಥಿಗಳ ಪರಿಚಯವನ್ನು ಶಿಕ್ಷಕ ಪರಮೇಶ್ವರಯ್ಯ ತಳಗಡೆಮಠ ಮಾಡಿದರು. ಕು. ರಶ್ಮಿ ವೇದಪಾಠಕ ಕಾರ್ಯಕ್ರಮ ನಿರೂಪಿಸಿದರೆ, ಕು. ಬೀನಾ ಪಾಟೀಲ ಸ್ವಾಗತ, ಕು. ಶಿವಶಂಕರ ವಂದನಾರ್ಪಣೆ ಮಾಡಿದರು. ಬಹುಮಾನ ವಿತರಣಾ ನಿರೂಪಣೆಯನ್ನು ಕು. ದೀಪಾ ಜೋಶಿ, ಕು. ಪಾರ್ವತಿ ನಾಲ್ವಾಡ, ಕು. ಪೂಜಾ, ಕು. ಜ್ಯೋತಿ, ಕು. ನಬೀಲಾ ಮತ್ತು ಕು. ಪ್ರಿಯಾಂಕ ಮಾಡಿದರು. ವೇದಿಕೆಯ ಮೇಲೆ ಶಾಲಾ ಹಿರಿಯ ಶಿಕ್ಷಕರಾದ ಎಸ್.ಸಿ. ಹಿರೇಮಠ, ಶ್ರೀಮತಿ ಭಾಗ್ಯಲಕ್ಷ್ಮೀ ಮತ್ತು ವೀರೇಶ ಕೊಪ್ಪಳ ಉಪಸ್ಥಿತರಿದ್ದರು. 

Advertisement

0 comments:

Post a Comment

 
Top