ಕೊಪ್ಪಳ : ಗವಿಸಿದ್ಧ ಎನ್.ಬಳ್ಳಾರಿ ಸಮಕಾಲೀನ , ಸಕಾಲಿಕ ವಿಷಯಗಳಿಗೆ ತೀವ್ರವಾಗಿ ಸ್ಪಂದಿಸುತ್ತಿದ್ದಂತಹ ಕವಿ. ಕೊಪ್ಪಳಕ್ಕೆ ಗೌರವ ತಂದು ಕೊಟ್ಟ ಕವಿ ನವ್ಯಕಾವ್ಯದಿಂದ ದಲಿತ ಬಂಡಾಯದ ಕವಿಯಾಗಿ ಮಾರ್ಪಟ್ಟವರು. ಜನತೆಗೆ ಮುಟ್ಟುವಂತಹ,ತಟ್ಟುವಂತಹ ಕವನಗಳನ್ನು ರಚಿಸಿದ್ದಾರೆ ಎಂದು ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ೭೯ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಭಾಗವಹಿಸಿ ಮಾತ ಗವಿಸಿದ್ಧ ಎನ್.ಬಳ್ಳಾರಿಯವರ ಕಾವ್ಯದ ಕುರಿತು ಮಾತನಾಡುತ್ತಿದ್ದರು. ಅವರು ಹೋರಾಟಗಳಲ್ಲಿ ಭಾಗವಹಿಸಿದ್ದು ಮತ್ತು ಕೊಪ್ಪಳ ಸಾಂಸ್ಕೃತಿಕ ಲೋಕದ ಜೊತೆಗಿನ ಅವರ ಮತ್ತು ತಮ್ಮ ಒಡನಾಟವನ್ನು ಅವರು ಹಂಚಿಕೊಂಡರು.
ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ ಎನ್.ಜಡೆಯಪ್ಪ-ಆಸೆ, ಸಂಪತ್ ಕುಮಾರ್ ಆಕಳವಾಡಿ- ಜೀವನ ಪಯಣ, ಚೇತನ್ ಸೊಲಗಿ- ಭಯೋತ್ಪಾದಕರು,ಅಲ್ಲಮಪ್ರಭು ಬೆಟ್ಟದೂರು- ಕನ್ನಡ ಧ್ವಜ ಹಾರಲಿ, ಪುಷ್ಪಾವತಿ- ನೀ ಯಾರಿಗಾದೆಯೋ ಎಲೆ ಮಾನವ, ಲಕ್ಷ್ಮೀ- ಕವಿ, ಶಿವಪ್ರಸಾದ ಹಾದಿಮನಿ- ಕನ್ನಡಿಗರು, ಬಸವರಾಜ ಚೌಡಕಿ- ಕನ್ನಡಮ್ಮನ ತೇರು, ಡಾ.ಮಹಾಂತೇಶ ಮಲ್ಲನಗೌಡರ- ಕನ್ನಡ ಜ್ಯೋತಿ, ವಾಸುದೇವ ಕುಲಕರ್ಣಿ- ಎದ್ದೇಳಿ ಕನ್ನಡಿಗರೇ, ಡಾ.ರೇಣುಕಾ ಕರಿಗಾರ- ಬಸವನೆಂದರೆ, ಡಾ. ವಿ.ಬಿ.ರಡ್ಡೇರ್- ಸ್ಮರಣೆ, ಲಿಂಗಾರಡ್ಡಿ ಆಲೂರ- ಕನ್ನ ಕೊರೆದವರ್‍ಯಾರು ಈ ನೆಲಕೆ, ಸಿರಾಜ್ ಬಿಸರಳ್ಳಿ- ಮತ್ತೊಮ್ಮೆ ತೇರು ಎಳೆಯೋಣ ಕವನಗಳನ್ನು ವಾಚನ ಮಾಡಿದರು.
ಕಾರ್‍ಯಕ್ರಮದಲ್ಲಿ ಮಹೇಶ ಬಳ್ಳಾರಿ, ಸಂಗಟಿ, ಸುರೇಶ ಮೇಟಿ, ಶಾಂತು ಬಡಿಗೇರ, ಹನುಮಂತಪ್ಪ ಅಂಡಗಿ, ಲಲಿತಾ ಭಾವಿಕಟ್ಟಿ, ಯಶವಂತ ಮೇಟ್ರಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸ್ವಾಗತವನ್ನು ಎನ್.ಜಡೆಯಪ್ಪ, ವಂದನಾರ್ಪಣೆಯನ್ನು - ಸಂಪತ್ ಕುಮಾರ್ ಆಕಳವಾಡಿ ಮಾಡಿದರೆ, ಕಾರ್‍ಯಕ್ರಮವನ್ನು ಸಿರಾಜ್ ಬಿಸರಳ್ಳಿ ನಡೆಸಿಕೊಟ್ಟರು.
0 comments:
Post a Comment