ನ.30: ಬೆಲೆಯೇರಿಕೆಯಿಂದ ತತ್ತರಿಸುತ್ತಿರುವ ಗ್ರಾಹಕರಿಗೆ ‘ಭೀಮನ ಹೊಟ್ಟೆಗೆ ಕಾಸಿನ ಮಜ್ಜಿಗೆ’ ಎಂಬಂತೆ ಪೆಟ್ರೋಲ್‌ನ ಬೆಲೆಯನ್ನು ತೆರಿಗೆಗಳ ಹೊರತಾಗಿ ಲೀಟರ್‌ಗೆ ರೂ. 0.65ರಷ್ಟು ಇಳಿಸಲು ತೈಲ ಕಂಪೆನಿಗಳು ನಿರ್ಧರಿಸಿವೆ. ಇದರಿಂದಾಗಿ ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ ಲೀ.ಗೆ ರೂ.0.78ರಷ್ಟು ಇಳಿಯಲಿದೆ. ಇದು ಇಂದು ಮಧ್ಯ ರಾತ್ರಿಯಿಂದ ಜಾರಿಗೆ ಬರಲಿದೆ. ಸರಕಾರ ಪೆಟ್ರೋಲ್ ಬೆಲೆ ಇಳಿಸುತ್ತಿರುವುದು ತಿಂಗಳಲ್ಲಿ ಎರಡನೆಯ ಸಲವಾಗಿದೆ. ಕಳೆದ ನ.16ರಂದು ಅದು ಪೆಟ್ರೋಲ್ ಬೆಲೆಯನ್ನು ಲೀ.ಗೆ ರೂ.2.22ರಷ್ಟು ಇಳಿಸಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆ ಹಾಗೂ ರೂಪಾಯಿ ಸುಭದ್ರಗೊಂಡುದು ಪೆಟ್ರೋಲ್ ಬೆಲೆ ಇಳಿಕೆಗೆ ಕಾರಣವೆನ್ನಲಾಗಿದೆ.
Petrol Price
0 comments:
Post a Comment