ಕೊಪ್ಪಳ, ೧೬- ಗಂಗಾವತಿಯಲ್ಲಿ ಜರುಗಲಿರುವ ಅಖಿಲಭಾರತ ೭೮ ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲೆಯ ಸರಕಾರಿ ನೌಕರರ ಒಮದು ದಿನದ ವೇತನವನ್ನು ವಂತಿಗೆ ರೂಪದಲ್ಲಿ ನೀಡಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಂಭುಲಿಂಗನಗೌಡ ಹೇಳಿದರು.
ಅವರು ಕೊಪ್ಪಳ ಮಿಡಿಯಾ ಕ್ಲಬ್‌ನಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಗಂಗಾವತಿಯ ಸಮ್ಮೇಳನಕ್ಕೆ ಜಿಲ್ಲೆಯ ಸರ್ಕಾರಿ ನೌಕರರ ಅಕ್ಟೋಬರ್ ೨೦೧೧ ರ ತಿಂಗಳ ವೇತನದಲ್ಲಿ ಒಂದು ದಿನ ವೇತನ ಕಟಾವುಗೊಳಿಸಿ ಅಖಿಲ ಭಾರತ ೭೮ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕ ಶಿರ್ಷಿಕೆಗೆ ಜಮಾಗೊಳಿಸುವಂತೆ ಅವರು ಮನವಿ ಮಾಡಿದರು.
ನಮ್ಮ ನಿರ್ಣಯದಂತೆ ನೌಕರರ ಒಂದು ದಿನದ ವೇತನ ವಂತಿಗೆಯನ್ನು ಕಟಾವುಗೊಳಿಸುವ ಮೂಲಕ ವಸೂಲ ಮಾಡಲು ಆಯಾ ಕಛೇರಿ ಮುಖ್ಯಾಧಿಕಾರಿಗಳು ಮತ್ತು ಖಜಾನಾಧಿಗಳು ಅಧಿಕಾರ ಪಡೆದಿರುತ್ತಾರೆ. ವಂತಿಗೆಯಾಗಿ ಒಂದು ದಿನ ವೇತನ ಕೊಡಲಿಚ್ಛಿಸಿದ ನೌಕರರು ಲಿಖಿತ ಮೂಲಕ ಅಸಮ್ಮತಿಯನ್ನು ಸಂಬಂಧಪಟ್ಟ ಬಟವಾಡೆ ಅಧಿಕಾರಿಗಳಿಗೆ ಸಲ್ಲಿಸತಕ್ಕದ್ದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಪರಿಷತ್ ಸದಸ್ಯರಾ ಎಸ್.ಬಿ.ಚಿಕ್ಕ ನರದುಂದ, ಬಿ.ಎಫ್.ಬೀರನಾಯ್ಕರ್, ಖಜಾಂತಿ ಗುಂಡಪ್ಪ, ವಾರ್ತಾಧಿಕಾರಿ ತುಕಾರಾಂ ಬಿ.ವ್ಹಿ.ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ ರೆಡ್ಡಿ ಉಪಸ್ಥಿತರಿದ್ದರು.
0 comments:
Post a Comment