PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ, ೧೬- ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆ ಹಾಗೂ ಇತರೆ ಸೌಲಭ್ಯಗಳಲ್ಲಿ ಉಂಟಾಗಿರುವ ತಾರತಮ್ಯದ ಬಗ್ಗೆ ಸುಬೀರ್ ಹರಿಸಿಂಗ್ ಸಮಿತಿ ವರದಿ ವಿಳಂಬದ ಹಿನ್ನೆಲೆಯಲ್ಲಿ ೨೦೧೧ರ ಜನೆವರಿ ೧ ರಿಂದ ಅನ್ವಯವಾಗುವಂತೆ ಶೇ.೩೦ ರಷ್ಟು ಮಧ್ಯಂತರ ಪರಿಹಾರ ನೀಡುವಂತೆ ಸರ್ಕಾರಿ ನೌಕರರ ಜಿಲ್ಲಾಧ್ಯಕ್ಷ ಶಂಭುಲಿಂಗನಗೌಡ ಹಲಗೇರಿ ಒತ್ತಾಯಿಸಿದರು.
ಅವರು ಕೊಪ್ಪಳ ಮೀಡಿಯಾ  ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆ ಹಾಗೂ ಸೌಲಭ್ಯಗಳಲ್ಲಿ ಉಂಟಾಗಿರುವ ತಾರತಮ್ಯದ ಬಗ್ಗೆ ಹಿಂದಿನ ಮುಖ್ಯಮಂತ್ರಿಗಳು ಮತ್ತು ಮುಖ್ಯ ಕಾರ್ಯದರ್ಶಿ ಗಳೊಂದಿಗೆ ಹಲವು ಸುತ್ತಿನ ಚರ್ಚೆ ನಡೆಸಲಾಗಿದೆ. ಅದರ ಫಲವಾಗಿ ಸರ್ಕಾರವು ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳ ಪರಿಷ್ಕರಣೆಗಾಗಿ ಇದೇ ಜೂನ್ ೧೫ ರಂದು ಸಬೀರ್ ಹರಿಸಿಂಗ್ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಿದೆ. 
ಈ ಸಮಿತಿ ವರದಿ ನೀಡಲು ವಿಳಂಬವಾಗುವ ಹಿನ್ನೆಲೆಯಲ್ಲಿ ಇದೇ ಜುಲೈ ೧೬ ರಂದು ಶೇ.೩೦ ರಷ್ಟು ಮಧ್ಯಂತರ ಪರಿಹಾರ ನೀಡುವಂತೆ ಸಮಗ್ರ ವರದಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಸಭೆಯಲ್ಲಿ ಸಂಘದ ನಿಯೋಗ ಮಧ್ಯಂತರ ಪರಿಹಾರದ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ ಎಂದರು.
ಕೊಪ್ಪಳ ಉಪಚುನಾವಣೆಯ ನಂತರ ಈ ಬಗ್ಗೆ ಸ್ಪಷ್ಟ ಕ್ರಮ ಕೈಗೊಳ್ಳ್ಳುವುದಾಗಿ ಮುಖ್ಯ ಮಂತ್ರಿಗಳ ಭರವಸೆ ನೀಡಿದ್ದರು ಕೂಡಲೇ ಮಧ್ಯಂತರ ಪರಿಹಾರ ಮಂಜೂರು ಮಾಡಬೇಕು ಹಾಗೂ ಮಧ್ಯಂತರ ಪರಿಹಾರ ಸೌಲಭ್ಯ ಪಿಂಚಣೆದಾರರಿಗೂ ವಿಸ್ತರಿಸಬೇಕು. ಕೇಂದ್ರ ಸರ್ಕಾರದ ನೌಕರರಿಗೆ ಸಮಾನವಾದ ದಿನಭತ್ಯೆ ದರಗಳನ್ನು ರಾಜ್ಯ ಸರ್ಕಾರಿ ನೌಕರರಿಗೆ ಮಂಜೂರು ಮಾಡಬೇಕು ಕೊಪ್ಪಳ, ಗುಲ್ಬರ್ಗಾ, ವಿಜಾಪುರ, ಬಾಗಲಕೋಟ, ಬಳ್ಳಾರಿ, ಜಿಲ್ಲೆಗಳಲ್ಲಿ ಬೇಸಿಗೆ ಕಾಲದಲ್ಲಿ ಪ್ರಸಕ್ತ ಇರುವ ಕಛೇರಿ ವೇಳಾ ಪದ್ದತಿ ಮುಂದುವರೆಸುವಂತೆ ಒತ್ತಾಯಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ರಾಜ್ಯ ಪರಿಷತ್ ಸದಸ್ಯರಾದ ಎಸ್.ಬಿ.ಚಿಕ್ಕನರಗುಂದ, ಬಿ.ಎಫ್.ಬೀರನಾಯ್ಕರ, ಖಜಾಂಚಿ ಗುಂಡಪ್ಪ, ವಾರ್ತಾಧಿಕಾರಿ ತುಕಾರಾಮ್‌ರಾವ್, ಬಿ.ವಿ.ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ ರಡ್ಡಿ ಉಪಸ್ಥಿತರಿದ್ದರು.

Advertisement

0 comments:

Post a Comment

 
Top