PLEASE LOGIN TO KANNADANET.COM FOR REGULAR NEWS-UPDATES


ಬೆಂಗಳೂರು, ಅ.15: ‘ದೇಶದ ಮುಖ್ಯ ವಾಹಿನಿಗಳಾದ ದೃಶ್ಯ ಹಾಗೂ ಮುದ್ರಣ ಮಾಧ್ಯಮಗಳು ಅಲ್ಪಸಂಖ್ಯಾತರನ್ನು ಕಡೆಗಣಿಸುತ್ತಿದ್ದು, ಅವರಿಗೆ ಸಿಗಬೇಕಾದ ನ್ಯಾಯಬದ್ಧ ಹಕ್ಕುಗಳಿಂದ ವಂಚಿಸುತ್ತಿವೆ.’

ಇದು ಇನ್ಸ್‌ಟಿಟ್ಯೂಟ್ ಆಫ್ ಒಬ್ಜೆಕ್ಟಿವ್ ಸ್ಟಡೀಸ್ (ಐಓಎಸ್) ತನ್ನ 25ನೆ ವರ್ಷಾಚರಣೆ ಅಂಗವಾಗಿ ‘ಜಾಗತೀಕರಣದ ಯುಗದಲ್ಲಿ ಮಾಧ್ಯಮಗಳ ಸಾಮರ್ಥ್ಯ’ ಎಂಬ ವಿಷಯದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನದ ಎರಡನೆ ದಿನವಾದ ಶನಿವಾರ ನಗರದ ಯವನಿಕಾ ಸಭಾಂಗಣದಲ್ಲಿ ನಡೆದ ‘ಮಾಧ್ಯಮ ಮತ್ತು ಅಲ್ಪಸಂಖ್ಯಾತರು’ ಎಂಬ ಗೋಷ್ಠಿಯಲ್ಲಿ ವ್ಯಕ್ತವಾದ ಅಭಿಪ್ರಾಯ.
ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಮುಂಬೈನ ಹೀರೋಸ್ ಪ್ರಾಜೆಕ್ಟ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ರಾಯ್ ವಾಡಿಯಾ ಮಾತ ನಾಡಿ, ದೃಶ್ಯ ಮತ್ತು ಮುದ್ರಣ ಮಾಧ್ಯಮ ಗಳಲ್ಲಿ ಅಲ್ಪಸಂಖ್ಯಾತರನ್ನು ಕಡೆಗಣಿಸ ಲಾಗಿದೆ ಎಂಬ ವಾದದ ಬಗ್ಗೆ ಯಾವುದೇ ಸಂದೇಹವಿಲ್ಲ. ಆದರೆ ಈ ಪರಿಸ್ಥಿತಿಗೆ ಕಾರಣಗಳೇನು ಅನ್ನುವುದರ ಬಗ್ಗೆ ಗಂಭೀರ ಆಲೋಚನೆ ನಡೆಯಬೇಕಾದ ಅಗತ್ಯವಿದೆ ಎಂದರು. ಸಮಾಜ ವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸುವಂತೆ ಮಾಧ್ಯಮಗಳಿಗೆ ಕರೆ ನೀಡಿದರು. 
ಹೊಸದಿಲ್ಲಿಯ ಚೌಥಿ ದುನಿಯಾ ಉರ್ದು ಪತ್ರಿಕೆಯ ಸಂಪಾದಕಿ ವಸೀಂ ರಾಶಿದ್ ಮಾತನಾಡಿ, ಭರತ್‌ಪುರ ಹಾಗೂ ರುದ್ರಪುರ ಕೋಮು ಗಲಭೆಗಳ ಬಗ್ಗೆ ಮಾಧ್ಯಮಗಳು ವೌನ ವಹಿಸಿರು ವುದು ಖೇದಕರ ಸಂಗತಿ ಎಂದರು. ಮಾಧ್ಯಮ ಗಳು ಸಮಾಜದ ಸಮಸ್ಯೆಗಳ ಪರಿಹಾರಕ್ಕೆ ಮುಂದೆ ಬಂದು ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು ಎಂದವರು ಹೇಳಿದರು.
ಹಿರಿಯ ಹಿಂದಿ ಪತ್ರಕರ್ತ ಖರ್ಷಿದ್ ಆಲಂ ಮಾತನಾಡಿ, ಮಾಧ್ಯಮಗಳಲ್ಲಿ ಅಲ್ಪಸಂಖ್ಯಾತರ ಕುರಿತು ಮಾಡ ಲಾಗುತ್ತಿರುವ ಅನ್ಯಾಯಕ್ಕೆ ಬಹುಮಟ್ಟಿಗೆ ಸ್ವತಃ ಅಲ್ಪಸಂಖ್ಯಾತರೇ ಕಾರಣರಾಗಿ ದ್ದಾರೆ. ಸಿಗುವ ಅವಕಾಶಗಳನ್ನು ಬಳಸಿ ಕೊಳ್ಳದೇ, ಮಾಧ್ಯಮಗಳಲ್ಲಿ ಅಲ್ಪಸಂಖ್ಯಾತರ ವಿರುದ್ಧ ಬರುವ ವಿಚಾರಗಳ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಸುತ್ತಾರೆ ಎಂದು ದೂರಿದರು.
ಇದೇ ಸಂದರ್ಭದಲ್ಲಿ ಬೆಳಗ್ಗೆ ನಡೆದ ಮಾಧ್ಯಮ ಮತ್ತು ಪ್ರಜಾಪ್ರಭುತ್ವ ಹಾಗೂ ಮಧ್ಯಾಹ್ನ ಜರಗಿದ ಮಾಧ್ಯಮಗಳ ವಾಣಿಜ್ಯೀಕರಣ ಎಂಬ ಗೋಷ್ಠಿಗಳಲ್ಲಿ ದೇಶ-ವಿದೇಶಗಳ ಖ್ಯಾತ ಅಂಕಣಕಾರರು, ಪತ್ರಕರ್ತರು ಹಾಗೂ ತಜ್ಞರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು

Advertisement

0 comments:

Post a Comment

 
Top