ರಾಜ್ಯ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪಡೆಯಲು ಎಂಥ ಹರಸಾಹಸ ನಡೆಯುತ್ತಿದೆ ಎಂದರೆ ಸರಕಾರ 50ಜನರಿಗೆ ಮಾತ್ರ ಪ್ರಶಸ್ತಿ ಕೊಡಲು ನಿರ್ಧರಿಸಿದರೂ ಬಂದ ಅರ್ಜಿಗಳ ಸಂಖ್ಯೆ ಸುಮಾರು 2,500.ಇನ್ನು ನ.1ಹತ್ತಿರ ಬರುತ್ತಲೇ ಈ ಸಂಖ್ಯೆ ಹೆಚ್ಚುತ್ತಲೇ ಹೋಗುವುದು ಸಾಮಾನ್ಯ. ಬೆಂಗಳೂರಿನ ವಿಧಾನಸೌಧಕ್ಕೆ ಎಡತಾಕುವವರ ಸಂಖ್ಯೆ ಹೆಚ್ಚುತ್ತಿದೆ.
ಪ್ರತಿ ಶಾಸಕರು ಕನಿಷ್ಠ ಐದಾರು ಹೆಸರುಗಳನ್ನು ಸರಕಾರಕ್ಕೆ ಶಿಫಾರಸು ಮಾಡಿದ್ದಾರೆ. ರಾಜ್ಯದಲ್ಲಿ 224ಶಾಸಕರಿದ್ದು ಇವರಿಂದ ಬಂದ ಅರ್ಜಿಗಳೇ ಸಾವಿರ ಮೀರಿದೆ.ಇನ್ನು ಮುಖ್ಯಮಂತ್ರಿಗಳಿಗೆ,ಜಿಲ್ಲಾ ಉಸ್ತುವಾರಿ ಸಚಿವರು,ಕನ್ನಡ ಸಂಸ್ಕೃತಿ ಇಲಾಖಾ ಸಚಿವರು,ಆಯಾ ಇಲಾಖೆಗಳ ಮೂಲಕ ಬರುವ ಅರ್ಜಿಗಳು ಪ್ರತ್ಯೇಕ.ಪ್ರಶಸ್ತಿ ತೆಗೆಸಿಕೊಡುತ್ತೇವೆಂದು ಕಮಿಷನ್ ಗಿಟ್ಟಿಸಿಕೊಳ್ಳುವ ಬ್ರೋಕರುಗಳೂ ಇದ್ದಾರಂತೆ.
ಪ್ರಶಸ್ತಿ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುವವರ ಸಂಖ್ಯೆ ಹೆಚ್ಚುತ್ತಿರುವುದನ್ನು ನೋಡುವಾಗ ಪ್ರಶಸ್ತಿಗಳ ಸಂಖ್ಯೆ 50ಮೀರಬಹುದು ಎನ್ನಲಾಗುತ್ತಿದೆ.ಆದರೆ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಪ್ರಶಸ್ತಿ ಸಂಖ್ಯೆ ಹೆಚ್ಚಿಸದೆ ಇರಲು ಮತ್ತು ಪ್ರಶಸ್ತಿ ಆಯ್ಕೆ ಸಮಿತಿ ಮೂಲಕವೇ, ಸಾಧನೆಯನುಸಾರವೇ ಪ್ರಶಸ್ತಿ ಕೊಡಬೇಕು ಎಂದು ಕಟ್ಟಪ್ಪಣೆ ಮಾಡಿದ್ದಾರಂತೆ.
ಇನ್ನು ಜಿಲ್ಲಾ ಮಟ್ಟದಲ್ಲೂ ಜಿಲ್ಲಾ ಮಟ್ಟದ ಪ್ರಶಸ್ತಿಗಳನ್ನು ಪಡೆಯಲು ಹರಸಾಹಸ ನಡೆಯುತ್ತಿದೆ. ರಾಜ್ಯ ಮಟ್ಟದಲ್ಲಿ ವಿಫಲರಾದವರು ಕೊನೆ ಕ್ಷಣದಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿಗಳನ್ನು ಪಡೆಯಲು ಪ್ರಯತ್ನಿಸುವುದೂ ಇದೆ.
0 comments:
Post a Comment