PLEASE LOGIN TO KANNADANET.COM FOR REGULAR NEWS-UPDATES


ಮೈಸೂರು, ಅ.30: ಪ್ರಸಕ್ತ ಸಾಲಿನಲ್ಲಿ ರಾಜ್ಯ ಸರಕಾರ ಮೂರು ಸಾವಿರಕ್ಕೂ ಹೆಚ್ಚು ಸರಕಾರಿ ಶಾಲೆಗಳನ್ನು ಮುಚ್ಚುವ ನಿರ್ಧಾರ ತೆಗೆದುಕೊಂಡಿ ರುವುದರ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಲು ಕನ್ನಡದ ಹಿರಿಯ ಹಾಗೂ ಗಣ್ಯ ಕವಿ-ಸಾಹಿತಿಗಳು ಮುಂದಾಗಿದ್ದಾರೆ. ಪದ್ಮಶ್ರೀ ಪುರಸ್ಕೃತ ಸಾಹಿತಿ ದೇವನೂರ ಮಹಾದೇವ ಇಂದಿಲ್ಲಿ ಈ ವಿಷಯ ತಿಳಿಸಿದರು.
‘ದಲಿತ ಸಂಘರ್ಷ: ನಿನ್ನೆ-ಇಂದು-ನಾಳೆ’ ವಿಷಯ ಕುರಿತು ದಲಿತ ಸಂಘರ್ಷ ಸಮಿತಿ ರವಿವಾರ ನಗರದಲ್ಲಿ ಏರ್ಪಡಿಸಿದ್ದ ವಿಚಾರಗೋಷ್ಠಿ ಹಾಗೂ ‘ದಸಂಸ ಹೋರಾಟದ ಪಯಣ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ಅವರು, ಬಿಡುವಿನ ವೇಳೆ ‘ಪತ್ರಿಕೆ’ ಯೊಂದಿಗೆ ಅನೌಪಚಾರಿಕವಾಗಿ ಮಾತನಾಡಿದರು. ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಡಾ. ಯು.ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಮತ್ತು ಡಾ. ಚಂದ್ರಶೇಖರ ಕಂಬಾರ ಒಟ್ಟಾಗಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲಿದ್ದು, ಸರಕಾರ ತೆಗೆದು ಕೊಂಡಿರುವ ತೀರ್ಮಾನವನ್ನು ಪ್ರಶ್ನಿಸಲಿದ್ದಾರೆ ಎಂದು ದೇವನೂರ ತಿಳಿಸಿದರು.

Advertisement

0 comments:

Post a Comment

 
Top