PLEASE LOGIN TO KANNADANET.COM FOR REGULAR NEWS-UPDATES

ಯಲಬುರ್ಗಾ:   ಇಂದು  ಬಳೂಟಗಿ ಗ್ರಾಮದಲ್ಲಿ  7ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.  ಇದಕ್ಕಾಗಿ ಎಲ್ಲ ಸಿದ್ದತೆಗಳು ಪೂರ್ಣಗೊಂಡಿದ್ದು  ಡಾ.ಪಂ.ಪುಟ್ಟರಾಜ ಗವಾಯಿಗಳ ಭವ್ಯ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದೆ.  ಬೆಳಿಗ್ಗೆ 8-00 ಗಂಟೆಗೆ ಶಾಸಕರಾದ ಈಶಣ್ಣ ಗುಳಗಣ್ಣನವರ ಧ್ವಜಾರೋಹಣ ಮಾಡಲಿದ್ಧಾರೆ. ನಂತರ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.  ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮ್ಮೇಳನವನ್ನು ಡಾ.ಬಸವರಾಜ ಸಬರದ   ಉದ್ಘಾಟಿಸುವರು.
ಮಧ್ಯಾಹ್ನ 12 ಗಂಟೆಗೆ ಮೊದ ಗೋಷ್ಠಿ ನಡೆಯಲಿದೆ. ಯಲಬುರ್ಗಾ ತಾಲೂಕಿನ ಕೊಡುಗೆ ಮತ್ತು ಸಮಸ್ಯೆಗಳ ಕುರಿತು ಗಂಗಾಧರ ಕುಷ್ಟಗಿ ಉಪನ್ಯಾಸ ನೀಡುವರು.
2ನೇ ಗೋಷ್ಠಿಯಲ್ಲಿ ಸಾಮಾಜಿಕ ಸಮಸ್ಯೆಗಳ ಸ್ಪಂದನೆ ಕುರಿತು ಡಾ.ಮಲ್ಲಿಕಾ ಘಂಟಿ ಸಂಜೆ 5.00 ಕ್ಕೆ ಕವಿಗೋಷ್ಠಿ  ಹಾಗೂ ರಾತ್ರಿ 9.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.
ಸಮ್ಮೇಳನಾಧ್ಯಕ್ಷ ಡಾ. ವಿ.ಬಿ.ರಡ್ಡೇರ್ ಕೊಪ್ಪಳದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ  ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ಇವರ ಕದಡದಿರಿ ತಿಳಿ ನೀರ ಕೊಳವ ಎನ್ನುವ ಕವನ ಸಂಕಲನ ಪ್ರಕಟಗೊಂಡಿದೆ. ಇವರು ಬೈರಪ್ಪನವರ ಕಾದಂಬರಿಗಳಲ್ಲಿ ಸಂಸ್ಕೃತಿ ಎಂಬ ವಿಷಯದ ಕುರಿತು ಸಲ್ಲಿಸಿದ ಪ್ರಬಂಧಕ್ಕೆ ಡಾಕ್ಟರೇಟ್ ದೊರೆತಿದೆ.

Advertisement

0 comments:

Post a Comment

 
Top