PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಅ.  : ಕೊಪ್ಪಳ ಜಿಲ್ಲೆಯ ರೈತರಿಗೆ ಬೇಸಿಗೆ ಶೇಂಗಾ ಬೇಸಾಯ ಕ್ರಮಗಳು ವಿಷಯ ಕುರಿತು ಕೊಪ್ಪಳದ ಕೃಷಿ ವಿಸ್ತರಣಾ ಘಟಕದಲ್ಲಿ ನ. ೧೫ ಹಾಗೂ ೧೭ ರಂದು ಎರಡು ದಿನಗಳ ಕಾಲ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕೊಪ್ಪಳ ಜಿಲ್ಲೆಯ ಬಹು ಭಾಗದ ರೈತರು ಹಿಂಗಾರಿಯಲ್ಲಿ ಬೇಸಿಗೆ ಶೇಂಗಾ ಬೆಳೆಯುತ್ತಾರೆ. ಈ ಬೆಳೆಯು ಜಿಲ್ಲೆಯ ಇತರೆ ವಾಣಿಜ್ಯ ಬೆಳೆಗಳ ಹಾಗೆ ಹೆಚ್ಚಿನ ಪ್ರದೇಶವನ್ನಾವರಿಸಿದ್ದು, ಬೇಸಿಗೆಯಲ್ಲಿ ನೀರಾವರಿಯನ್ನು ಅವಲಂಬಿಸಿದೆ. ರೈತರು ಸರಿಯಾದ ಬೇಸಾಯ ಪದ್ಧತಿಗಳನ್ನು ಅಳವಡಿಸಿಕೊಳ್ಳದೆ ಬೇಸಿಗೆ ಶೇಂಗಾ ಬೆಳೆಯುವಲ್ಲಿ ಅನೇಕ ರೋಗ, ಕೀಟ ಬಾಧೆಗಳಿಂದಾಗಿ ಬೆಳೆಯಲ್ಲಿ ಹಾನಿಯನ್ನು ಅನುಭವಿಸುತ್ತಿದ್ದಾರೆ. ಈ ಬೆಳೆಯನ್ನು ಯಶಸ್ವಿಯಾಗಿ ಬೆಳೆಯಲು ಸೂಕ್ತವಾದ ವೈಜ್ಞಾನಿಕ ಕ್ರಮಗಳನ್ನು ಒಳಗೊಂಡಿರುವ ಬೇಸಿಗೆ ಶೇಂಗಾ ಬೇಸಾಯ ತಾಂತ್ರಿಕತೆಗಳು ವಿಷಯ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಘಟಕದಲ್ಲಿ ನವೆಂಬರ್ ೧೫ ಹಾಗೂ  ೧೭ ರಂದು ಎರಡು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ರೈತರು ಸದರಿ ತರಬೇತಿಯ ಪ್ರಯೋಜನೆಯನ್ನು ಪಡೆದು ಶೇಂಗಾ ಬೆಳೆಯಲ್ಲಿ ಹೆಚ್ಚಿನ ಇಳುವರಿ ಪಡೆಯಲು ಈ ಮೂಲಕ ಕೋರಲಾಗಿದೆ. ತರಬೇತಿಯಲ್ಲಿ ಶೇಂಗಾ ಬೆಳೆಯ ಉತ್ಪಾದನೆ ಹೆಚ್ಚಿಸುವ ಮಾಹಿತಿ, ಹೊಸತಳಿಗಳ ಲಭ್ಯತೆ ಹಾಗೂ ಜೈವಿಕ ರೋಗ ಮತ್ತು ಕೀಟ ನಿಯಂತ್ರಣಗಳ ಬಗ್ಗೆ ಮತತು ಜೈವಿಕ ಗೊಬ್ಬರಗಳ ಬಗ್ಗೆ ವಿಸ್ತ್ರತವಾದ ಮಾಹಿತಿಯನ್ನು ನೀಡಲಾಗುವುದು. ಸದರಿ ತರಬೇತಿಗೆ ಆಸಕ್ತ ರೈತರು ನವೆಂಬರ್ ೧೨ ರವರೆಗೆ ತಮ್ಮ ಮತದಾರರ ಗುರುತಿನ ಚೀಟಿ ಅಥವಾ ಸಣ್ಣ ಅತೀ ಸಣ್ಣ ಹಿಡುವಳಿದಾರರ ಗುರುತಿನ ಚೀಟಿಯ ಝರಾಕ್ಸ ಪ್ರತಿಯೊಂದಿಗೆ ತಮ್ಮ ಹೆಸರನ್ನು ಕೃಷಿ ವಿಸ್ತರಣಾ ಘಟಕದಲ್ಲಿ ನೋಂದಾಯಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

Advertisement

0 comments:

Post a Comment

 
Top